ಗೌರಿಬಿದನೂರು ತಾಲೂಕು ಬರಪೀಡಿತ ಪಟ್ಟಿಗೆ ಸೇರಿಸಲು ಬಿಜೆಪಿ ಧರಣಿ

ಈ ಸುದ್ದಿಯನ್ನು ಶೇರ್ ಮಾಡಿ

gowribadanuru

ಗೌರಿಬಿದನೂರು, ಅ.22- ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಪಕ್ಷದ ಕಾರ್ಯಕರ್ತರು ಪಟ್ಟಣದ ಮಹಾತ್ಮ ಗಾಂಧಿ ವೃತ್ತದ ಬಳಿ ಧರಣಿ ನಡೆಸಿದರು.ಬಿಜೆಪಿ ಪಕ್ಷದ ರಾಜ್ಯ ಕಾರ್ಯಕಾರಿಣಿ ಸದಸ್ಯ ಎನ್.ಎಂ.ರವಿನಾರಾಯಣರೆಡ್ಡಿ ಮಾತನಾಡಿ, ತಾಲ್ಲೂಕಿನ ಜನತೆ ಕಳೈದೈದು ವರ್ಷಗಳಿಂದಲೂ ಮಳೆಯಿಲ್ಲದೆ ಕುಡಿಯುವ ನೀರಿಗೂ ತತ್ವಾರ ಎದುರಿಸುತ್ತಿದ್ದಾರೆ. ಕೆರೆ-ಕುಂಟೆಗಳಲ್ಲಿ ನೀರು ಬತ್ತಿ ಹೋಗಿ ಜಾನುವಾರುಗಳಿಗೂ ನೀರು ಮೇವು ಇಲ್ಲದೆ ಪರದಾಡುವಂತಾಗಿದೆ ಎಂದರು.ವಾರ್ಷಿಕ ಸರಾಸರಿ ಶೇ.10ಕ್ಕಿಂತಲೂ ಕಡಿಮೆ ಮಳೆಯಾಗಿದ್ದು, ಕಳೆದೆರಡು ತಿಂಗಳುಗಳಿಂದಲೂ ಮಳೆಯಾಗದೆ ಬೆಳೆದು ನಿಂತ ರಾಗಿ, ಮೆಕ್ಕೆಜೋಳ ಇತರೆ ಬೆಳೆಗಳು ಒಣಗಿದ್ದು, ರೈತರ ಪರಿಸ್ಥಿತಿ ಡೋಲಾಯಮಾನವಾಗಿದೆ, ಇಂತಹ ಪರಿಸ್ಥಿತಿಯಲ್ಲಿ ಸರಕಾರ ಸಚಿವ ಸಂಪುಟ ಸಭೆ ನಡೆಸಿ ತಾಲ್ಲೋಕನ್ನು ಬರಪೀಡಿತ ತಾಲ್ಲೋಕು ಎಂದು ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಶಾಸಕರ ನಿರ್ಲಕ್ಷ:

ತಾಲೂಕಿನ ರೈತರ ಪರಿಸ್ಥಿತಿ ದಿನೇ ದಿನೇ ಉಲ್ಭಣವಾಗುತ್ತಿದ್ದರೂ ಇಲ್ಲಿನ ಶಾಸಕರು ತಾಲೂಕಿನ ಪರಿಸ್ಥಿತಿಯನ್ನು ಅವಲೋಕನ ಮಾಡದೆ ನಿರ್ಲಕ್ಷಿಸಿದ್ದಾರೆ. ಜತೆಗೆ ಈ ಭಾಗಕ್ಕೆ ಎತ್ತಿನ ಹೊಳೆ ನೀರು ತರುವುದಾಗಿ ಹೇಳಿಕೊಂಡು ಕಾಲ ಕಳೆಯುತ್ತಿದ್ದಾರೆ. ಈ ಯೋಜನೆ ಯಾವ ಹಂತದಲ್ಲಿದೆ, ಎಷ್ಟು ನೀರಿ ಹರಿಯುತ್ತದೆ ಎಂಬುದು ಸಂಸದರು , ಶಾಸಕರು ಸ್ಪಷ್ಟಪಡಿಸಬೇಕು, ತಾಲೂಕಿನ ಅಭಿವೃದ್ದಿಯ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ ಎಂದು ಆರೋಪಿಸಿದರು.ಮಹಾತ್ಮ ಗಾಂಧಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಧರಣಿ ಸಂಜೆ 4 ಗಂಟೆಯ ನಂತರ ಸರಕಾರಕ್ಕೆ ಮನವಿ ಪತ್ರವನ್ನು ತಹಸೀಲ್ದಾರ್ ಮೂಲಕ ಸಲ್ಲಿಸಿದರು.

ಧರಣಿಯಲ್ಲಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಹೆಚ್.ವಿ.ಶಿವಶಂಕರ್, ಜಿಲ್ಲಾ ರೈತ ಮೋರ್ಚಾ ಜಿಲ್ಲಾದ್ಯಕ್ಷ ರಾಮಣ್ಣ, ಕಾರ್ಯದರ್ಶಿ ನರಸಿಂಹರೆಡ್ಡಿ, ತಾಲೂಕು ಅಧ್ಯಕ್ಷ ಶಿವಕುಮಾರ್, ಪುರಸಭಾ ಸದಸ್ಯ ಮಾರ್ಕೇಟ್ ಮೋಹನ್, ತಾಲೂಕು ಬಿಜೆಪಿ ಅಧ್ಯಕ್ಷ ಗೋಪಾಲಗೌಡ, ಮುಖಂಡರಾದ ಸಿ.ಆರ್.ನರಸಿಂಹಮೂರ್ತಿ, ಜೆ.ವಿ.ಹನುಮೇಗೌಡ, ನಾಗಭೂಷಣರಾವ್, ವಿವೇಕಾನಂದರೆಡ್ಡಿ, ರಾಮಾಂಜಿನಮ್ಮ, ಕೃಷ್ಣ, ಜಯಣ್ಣ, ಜಿ.ಆರ್.ನವೀನ್‍ಕುಮರ್, ಮುದ್ದುವೀರಪ್ಪ ಮತ್ತಿತರರು ಭಾಗವಹಸಿದ್ದರು.

► Follow us on –  Facebook / Twitter  / Google+

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin