ತಾಯಿಯ ಅಕಾಲಿಕ ಮರಣದಿಂದ ಬೇಸತ್ತ ಮಗ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Suicide-0001

ದಾವಣಗೆರೆ, ಅ.22-ತಾಯಿಯ ಅಕಾಲಿಕ ಮರಣದಿಂದ ಬೇಸತ್ತ ಪುತ್ರ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ನಗರದ ಬುದಾಳ್ ರಸ್ತೆಯ ಕುರುಬರಗೇರಿ ನಿವಾಸಿ ರವಿ (30) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.ಈತ ಕಳೆದ ನಾಲ್ಕು ವರ್ಷಗಳ ಹಿಂದೆ ಯುವತಿಯೊಬ್ಬಳನ್ನು ಮದುವೆಯಾಗಿ ಇಬ್ಬರು ಮಕ್ಕಳಿದ್ದು, ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದರು.ಮೂರು ತಿಂಗಳ ಹಿಂದೆ ರವಿ ತಾಯಿ ಶಾರದಮ್ಮ ಕಾಯಿಲೆಯಿಂದ ನಿಧನ ಹೊಂದಿದ್ದರು.

ತಾಯಿಯ ಮರಣದಿಂದ ಈತ ಮಾಣಸಿಕವಾಗಿ ಖಿನ್ನತೆಗೊಳಗಾಗಿದ್ದ. ಹೀಗಾಗಿ ಕುಡಿತಕ್ಕೆ ದಾಸನಾಗಿ ಅದೇ ರೀತಿ ನಿನ್ನೆ ವಿಪರೀತವಾಗಿ ಕುಡಿದು ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

► Follow us on –  Facebook / Twitter  / Google+

 

 

Facebook Comments

Sri Raghav

Admin