ಮುತ್ತೂಟ್ ಫೈನಾಸ್ಸ್ ಲೂಟಿ : ವೃತ್ತಿಪರ ದರೋಡೆಕೋರರ ಕೃತ್ಯ, ತನಿಖೆ ಚುರುಕು

ಈ ಸುದ್ದಿಯನ್ನು ಶೇರ್ ಮಾಡಿ

mutot

ಬೆಂಗಳೂರು, ಅ.22-ಮುತ್ತೂಟ್ ಮಿನಿ ಗೋಲ್ಡ್ ಫೈನಾನ್ಸ್‍ನಿಂದ ಹಣ, ಆಭರಣ ದೋಚಿ ಪರಾರಿಯಾಗಿರುವ ಆರೋಪಿಗಳು ವೃತ್ತಿಪರ ಸ್ಥಳೀಯ ದರೋಡೆ ಕೋರರಿರಬಹುದೆಂದು ರಾಮನಗರ ಜಿಲ್ಲಾ ಪೊಲೀಸರು ಶಂಕೆ ವ್ಯಕ್ತಪಡಿಸಿ ಅವರ ಬಂಧನಕ್ಕೆ ವ್ಯಾಪಕ ಬಲೆ ಬೀಸಿದ್ದಾರೆ. ದರೋಡೆಕೋರರ ಬಂಧನಕ್ಕೆ ರಚಿಸಲಾಗಿರುವ ನಾಲ್ಕು ವಿಶೇಷ ತಂಡಗಳು ಈಗಾಗಲೇ ಕಾರ್ಯಾಚರಣೆ ಕೈಗೊಂಡಿವೆ. ಈ ಹಿಂದೆ ಇದೇ ರೀತಿ ಎಲ್ಲೆಲ್ಲಿ ದರೋಡೆಗಳು ಆಗಿವೆ, ಯಾವ ದರೋಡೆಕೋರರ ತಂಡ ಭಾಗಿಯಾಗಿತ್ತು ಎಂಬ ಬಗ್ಗೆ ತನಿಖಾ ತಂಡಗಳು ವಿವರಗಳನ್ನು ಕಲೆ ಹಾಕುತ್ತಿವೆ. ಬೆಂಗಳೂರು ಸಿಸಿಬಿ ಪೊಲೀಸರ ಜತೆ ತನಿಖಾ ತಂಡಗಳು ಚರ್ಚಿಸಿ ವಿಷಯಗಳನ್ನು ಪಡೆದುಕೊಳ್ಳುತ್ತಿವೆ.

ನಾಗೇಂದ್ರಪ್ಪರ ವಿಚಾರಣೆ: ಅಪಹರಣಕ್ಕೊಳಗಾಗಿದ್ದ ಮ್ಯಾನೇಜರ್ ನಾಗೇಂದ್ರಪ್ಪ ಅವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು,  ರೋಡೆಕೋರರೊಂದಿಗೆ ಸುಮಾರು 12 ಗಂಟೆಗಳ ಕಾಲ ಜೊತೆಯಲ್ಲಿದ್ದಾಗ ನಡೆದುಕೊಂಡ ರೀತಿ, ಅವರು ಯಾವ ಭಾಷೆಯಲ್ಲಿ ಮಾತನಾಡುತ್ತಿದ್ದರು, ಯಾವ ರೀತಿ ಇದ್ದರು, ಅವರು ಬಳಸಿದ್ದ ಮೊಬೈಲ್ ಪೊನ್, ಕಾರು, ಧರಿಸಿದ್ದ ಬಟ್ಟೆ ಸೇರಿದಂತೆ ಇನ್ನಿತರೆ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಅಪಹರಣ ಮಾಡಿದಾಗ ಯಾವ ಯಾವ ಜಾಗಕ್ಕೆ ಕರೆದೊಯ್ದಿದ್ದರು ಎಂಬ ಬಗ್ಗೆಯೂ ನಾಗೇಂದ್ರಪ್ಪ ಅವರಿಂದ ಹೆಚ್ಚಿನ ಮಾಹಿತಿ ಪಡೆದುಕೊಂಡಿದ್ದಾರೆ.

ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮುತ್ತೂಟ್ ಮಿನಿ ಗೋಲ್ಡ್ ಫೈನಾನ್ಸ್‍ಗೆ ಪೊಲೀಸರ ಸೋಗಿನಲ್ಲಿ ಬಂದ ನಾಲ್ವರು ದರೋಡೆಕೋರರು ಸಿನಿಮೀಯ ರೀತಿಯಲ್ಲಿ ಫೈನಾನ್ಸ್‍ನ ವ್ಯವಸ್ಥಾಪಕ ನಾಗೇಂದ್ರಪ್ಪ ಅವರನ್ನು ಮಾತನಾಡಿಸುತ್ತಾ ಹೊರಗೆ ಕರೆದೊಯ್ದು ಕಾರಿನಲ್ಲಿ ಹತ್ತಿಸಿಕೊಂಡು ಕಿಡ್ನಾಪ್ ಮಾಡಿ ಗೌಪ್ಯ ಸ್ಥಳದಲ್ಲಿ ಕೂಡಿಟ್ಟು ಲಾಕರ್‍ಗಳಲ್ಲಿ ಇದ್ದ ಹಣ, ಆಭರಣಗಳ ಬಗ್ಗೆ ತಿಳಿದುಕೊಂಡಿದ್ದರು. ನಂತರ ಲಾಕರ್‍ಗಳ ಕೀಗಳನ್ನು ಪಡೆದುಕೊಂಡು ವಾಪಸ್ ಫೈನಾನ್ಸ್ ಕಚೇರಿಗೆ ಬಂದು 4 ಕೆಜಿ 300 ಗ್ರಾಂ ಚಿನ್ನಾಭರಣ ಹಾಗೂ ಒಂದು ಲಕ್ಷ ಹಣವನ್ನು ದರೋಡೆ ಮಾಡಿದರು. ಬಳಿಕ ಯಾವುದೇ ಸುಳಿವು ಸಿಗಬಾರದು ಎಂದು ಫೈನಾನ್ಸ್ ಕಚೇರಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯ ಡಿವಿಆರ್‍ನ್ನು ತೆಗೆ%A

Facebook Comments

Sri Raghav

Admin