ರೇಡಿಯೋ ಮಿರ್ಚಿಯಲ್ಲಿ ಲೈವ್ ಶೋ ನಡೆಸಿಕೊಡುತ್ತಿರುವಾಗಲೇ ಸಾವನ್ನಪ್ಪಿದ ರೇಡಿಯೋ ಜಾಕಿ

ಈ ಸುದ್ದಿಯನ್ನು ಶೇರ್ ಮಾಡಿ

Redio-Jocky

ನಾಗ್ಪುರ ಅ.22 : ರೇಡಿಯೋ ಮಿರ್ಚಿಯಲ್ಲಿ ಎಫ್ಎಂನಲ್ಲಿ ಲೈವ್ ಕಾರ್ಯಕ್ರಮ ನಡೆಸಿಕೊಡುತ್ತಿರುವಾಗಲೇ ರೇಡಿಯೋ ಜಾಕಿ ಒಬ್ಬ ಸಾವನ್ನಪ್ಪಿರುವ ಘಟನೆ ನಾಗಪುರದಲ್ಲಿ ನಡೆದಿದೆ.  ಬೆಳಿಗ್ಗೆ 7 ರಿಂದ 11 ರ ವರೆಗೆ ನಡೆಯುವ ಹಾಯ್ ನಾಗ್ಪುರ್ ಶೋ ನಡೆಸಿಕೊಡುವ ವೇಳೆ24 ವರ್ಷದ ಶುಭಂ ಕೆಚೆ ಎಂಬ ನಾಗ್ಪುರ ಮೂಲದ ರೇಡಿಯೋ ಜಾಕಿ ಕಾರ್ಯಕ್ರಮದ ಮಧ್ಯೆ ವಿರಾಮದ ವೇಳೆ ಬಾತ್ ರೂಮ್ ನಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಕೂಡಲೇ ಕಚೇರಿಯ ಭದ್ರತಾ ಸಿಬ್ಬಂದಿ ಹಾಗೂ ಜವಾನ ಶುಭಂರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರೂ ಕೆಚೆ ಬದುಕುಳಿಯಲಿಲ್ಲ.

ಬೆಳಗ್ಗೆ 9.30ರ ವೇಳೆಗೆ ಎದೆನೋವಿನಿಂದ ಬಳಲಿದ್ದರು ಅವನು ಕಾರ್ಯಕ್ರಮವನ್ನು ಮುಂದುವರೆಸಿದ್ದ.  ಈ ವೇಳೆ ಈ ದುರಂತ ಸಂಭವಿಸಿದೆ.  3 ವರ್ಷಗಳ ಹಿಂದೆ ಶುಭಂ ತಂದೆ ಮೃತಪಟ್ಟಿದ್ದು, ತಾಯಿ ಹಾಗೂ ಸಹೋದರಿಯ ಜವಾಬ್ಧಾರಿ ಅವರ ಮೇಲಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin