ವಿಶ್ವಕಪ್ ಕಬಡ್ಡಿಯಲ್ಲಿ ಭಾರತಕ್ಕೆ ಮತ್ತೆ ಚಾಂಪಿಯನ್ ಪಟ್ಟ

ಈ ಸುದ್ದಿಯನ್ನು ಶೇರ್ ಮಾಡಿ

images

ಅಹಮದಾಬಾದ್ ಅ.22. : ವಿಶ್ವಕಪ್ ಕಬಡ್ಡಿಯಲ್ಲಿ ಭಾರತ ಮತ್ತೆ ಚಾಂಪಿಯನ್ ಆಗಿದೆ. ಅಹಮದಾಬಾದ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇರಾನ್ ವಿರುದ್ಧ 38-29  ಅಂತರದಿಂದ ಗೆಲುವು ಸಾಧಿಸಿದೆ. ಅನೂಪ್ ಕುಮಾರ್ ನೇತೃತ್ವದ ಭಾರತ ತಂಡ ಫೈನಲ್ ಪಂದ್ಯದಲ್ಲಿ ಇರಾನ್ ತಂಡವನ್ನು ಮಣಿಸುವ ಮೂಲಕ, 3 ನೇ ಬಾರಿಗೆ ಚಾಂಪಿಯನ್ ಆಗಿದೆ. 2004, 2007 ಹಾಗೂ 2016 ರಲ್ಲಿ ಭಾರತ ಕಬಡ್ಡಿಯಲ್ಲಿ ಸತತ 3 ನೇ ಸಲ ಚಾಂಪಿಯನ್ ಆಗಿದೆ. ಇಂದು ನಡೆದ ಫೈನಲ್ ನಲ್ಲಿ ಭಾರತದ ಸ್ಟಾರ್ ಆಟಗಾರ ಅಜಯ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಮೊದಲಿಗೆ ಟಾಸ್ ಗೆದ್ದ ಇರಾನ್ ಕೋರ್ಟ್ ಆಯ್ಕೆ ಮಾಡಿಕೊಂಡು ಉತ್ತಮ ಆಟವನ್ನೇ ಪ್ರದರ್ಶಿಸಿ ಮೇಲುಗೈ ಸಾಧಿಸಿತು.

ಆದರೆ, ಭಾರತ ತಂಡದ ಆಟಗಾರರು ನಂತರದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅಂತಿಮವಾಗಿ 38-29 ಅಂತರದಲ್ಲಿ ಗೆಲುವು ಸಾಧಿಸಿ, ಚಾಂಪಿಯನ್ ಆಗಿ ಹೊರ ಹೊಮ್ಮಿದೆ.

 Follow us on –  Facebook / Twitter  / Google+

Facebook Comments

Sri Raghav

Admin