ಶೃಂಗೇರಿ ಬಸ್ ಡಿಪೋಗೆ ಭೂಮಿ ಮಂಜೂರು

ಈ ಸುದ್ದಿಯನ್ನು ಶೇರ್ ಮಾಡಿ

bus

ಬಾಳೆಹೊನ್ನೂರು,ಅ.22-ಕಳೆದ 12 ವರ್ಷಗಳಿಂದ ಸರ್ಕಾರದ ಮುಂದಿದ್ದ ಸಾರಿಗೆ ಡಿಪೋ  ನಿರ್ಮಾಣಕ್ಕೆ ಜಾಗ ನೀಡುವ ಕಡತಕ್ಕೆ ಕೊನೆಗೂ ರಾಜ್ಯ ಸಚಿವ ಸಂಪುಟ ಹಸಿರು ನಿಶಾನೆ ತೋರಿಸಿದೆ. ಶೃಂಗೇರಿಯಲ್ಲಿ ಸಾರಿಗೆ ಡಿಪೋ  ತೆರೆದು ಸುತ್ತಮುತ್ತಲಿನ ಎಲ್ಲ ಧಾರ್ಮಿಕ ಕ್ಷೇತ್ರಗಳಿಗೂ ಹಾಗೂ ಪ್ರವಾಸಿ ತಾಣಗಳಿಗೆ ಸಾರ್ವಜನಿಕರು ರಾಜ್ಯದ ವಿವಿಧ ಕಡೆಗಳಿಂದ ಸುಲಭವಾಗಿ ಆಗಮಿಸಲು ಅವಕಾಶ ಮಾಡಿಕೊಡಬೇಕೆಂದು ರಸ್ತೆ ಬಳಕೆದಾರರ ವೇದಿಕೆ ತೀವ್ರ ಹೋರಾಟ ನಡೆಸಿತ್ತು. ಶೃಂಗೇರಿಯಲ್ಲಿ ಐದು ಎಕರೆ ಜಾಗವನ್ನು ಸಾರಿಗೆ ಸಂಸ್ಥೆ ಡಿಪೋ  ತೆರೆಯಲು ಗುರುತಿಸಿದ್ದರು. ಅದು ಅರಣ್ಯ ಇಲಾಖೆಗೆ ಸೇರಿದ ಭೂಮಿ ಎಂಬ ಹಿನ್ನೆಲೆಯಲ್ಲಿ ಆ ಜಾಗವನ್ನು ಮಂಜೂರು ಮಾಡಲು ಸಾಧ್ಯವಾಗಿರಲಿಲ್ಲ. ಜಿಲ್ಲಾಧಿಕಾರಿಗಳು ಕಡತವನ್ನು ಸರ್ಕಾರಿ ಕಳುಹಿಸಿ ಸರ್ಕಾರವೇ ನಿರ್ಧಾರ ತೆಗೆದುಕೊಳ್ಳಲು ಮನವಿ ಮಾಡಿದ್ದರು.

ಬೆಂಗಳೂರಿನಲ್ಲಿ ಬುಧವಾರ ಸೇರಿದ ಸಚಿವ ಸಂಪುಟ ಸಭೆಯಲ್ಲಿ ಈ ಜಾಗವನ್ನು ಉಚಿತವಾಗಿ ಸಾರಿಗೆ ಇಲಾಖೆಗೆ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಸರ್ಕಾರದ ಈ ನಿರ್ಧಾರವನ್ನು ರಸ್ತೆ ಬಳಕೆದಾರರ ವೇದಿಕೆ ಮುಖ್ಯಸ್ಥ ಶಂಕರ ನಾರಾಯಣಭಟ್ ಸ್ವಾಗತಿಸಿದ್ದಾರೆ.  ಈ ಡಿಪೋ  ನಿರ್ಮಾಣದಿಂದ 50 ಬಸ್‍ಗಳ ಶೆಡ್ಯೂಲ್‍ಗಳ ಓಡಾಟ ಸುಲಭವಾಗುತ್ತದೆ. ಗೋಕರ್ಣ, ಮಂತ್ರಾಲಯ, ತಿರುಪತಿ, ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಹೋಗಲು ಸಾರ್ವಜನಿಕರಿಗೆ ಸುಲಭವಾಗುತ್ತದೆ ಹಾಗೂ ಹೊರನಾಡು ಮತ್ತು ಶೃಂಗೇರಿಗೆ ಬರುವ ಭಕ್ತಾಧಿಗಳಿಗೆ ಇದು ಹೆಚ್ಚಿನ ಅನುಕೂಲ ಕಲ್ಪಿಸುತ್ತದೆ ಎಂದು ಭಟ್ ಹೇಳಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin