ಜಯಾಲಲಿತಾ ಆರೋಗ್ಯಕ್ಕಾಗಿ ಚಾಮುಂಡೇಶ್ವರಿ ಬೆಳ್ಳಿ ರಥೋತ್ಸವ

ಈ ಸುದ್ದಿಯನ್ನು ಶೇರ್ ಮಾಡಿ

jaya

ಮೈಸೂರು, ಅ.23- ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಗುಣಮುಖರಾಗಿರುವ ಹಿನ್ನೆಲೆಯಲ್ಲಿ ಎಐಡಿಎಂಕೆ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪುಗಳೇಂದಿ ನೇತೃತ್ವದಲ್ಲಿ ದೇವಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಪೂಜಾಕಾರ್ಯದ ನಂತರ ದೇವಸ್ಥಾನದ ಸುತ್ತ ಬೆಳ್ಳಿ ರಥೋತ್ಸವ ನೆರವೇರಿಸಲಾಯಿತು. ಬೆಳ್ಳಿ ರಥದಲ್ಲಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ ಒಂದು ಸುತ್ತು ಪ್ರದಕ್ಷಿಣೆ ಹಾಕಲಾಯಿತು.  ಮೊನ್ನೆಯಷ್ಟೇ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿರುವ ಗಣಪತಿ ಹಾಗೂ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಚಿನ್ನದ ಕವಚ ಅರ್ಪಿಸಲಾಗಿತ್ತು.

ಚಿನ್ನದ ಕವಚ ವಾಪಸ್ಸಿಗೆ ಸಂಘಗಳ ಆಗ್ರಹ:
ಈ ನಡುವೆ ಕನ್ನಡಪರ ಸಂಘಟನೆಗಳವರು ಜಿಲ್ಲಾಕಾರಿ ರಮ್‌ದೀಪ್ ಅವರಿಗೆ ಮನವಿ ಪತ್ರ ಸಲ್ಲಿಸಿ ಚಿನ್ನದ ಕವಚಗಳನ್ನು ಜಯಾ ಫೌಂಡೇಶನ್‌ಗೆ ವಾಪಸು ಕೊಡುವಂತೆ ಒತ್ತಾಯಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin