ನನಗೆ ದುಡ್ಡೇ ಮುಖ್ಯವಲ್ಲ, ಕೆಲಸ ಸರಿಯಾಗಿರಬೇಕು

ಈ ಸುದ್ದಿಯನ್ನು ಶೇರ್ ಮಾಡಿ

john
ಏನೇ ಮಾಡಲಿ ಅದರಲ್ಲಿ ಗುಣಮಟ್ಟದ ಕೆಲಸ ಇರಬೇಕು. ನನ್ನ ಮಟ್ಟಿಗೆ ಹೇಳುವುದಾದರೆ ನಾನು ಗುಣಮಟ್ಟಕ್ಕೆ ಮೊದಲು ಬೆಲೆ ನೀಡುತ್ತೇವೆ. ಹಣವು ನಂತರದ ಸಂಗತಿ. ಹೀಗಾಗಿ ದುಡ್ಡೇ ಎಲ್ಲವೂ ಅಲ್ಲ-ಹೀಗೆಂದು ಸಿದ್ಧಾಂತದ ಮಾತುಗಳನ್ನಾಡಿದ್ದಾನೆ ಬಾಲಿವುಡ್‌ನ ಸ್ಮಾರ್ಟ್ ನಟ-ನಿರ್ಮಾಪಕ ಜಾನ್ ಅಬ್ರಾಹಂ.
ಸಿನಿಮಾ ಇರಲಿ ಅಥವಾ ಜಾಹೀರಾತು ಇರಲಿ ನಾನು ಅದರ ಮೌಲ್ಯವನ್ನು ಎಚ್ಚರಿಕೆಯಿಂದ ಗಮನಿಸಿ ನಂತರ ಸಹಿ ಮಾಡುತ್ತೇನೆ. ದುಡ್ಡಿಗಾಗಿ ಕಾಂಟ್ರಾಕ್ಟ್‌ಗಳಿಗೆ ರುಜು ಮಾಡುವ ಆಸಾಮಿ ನಾನಲ್ಲ ಎಂದು ಜಾನ್ ಹೇಳಿದ್ದಾನೆ.  ಕಾರ್ಯಕ್ರಮವೊಂದನ್ನು ಭಾಗವಹಿಸಿದ್ದ ಕುಳಿಗೆನ್ನೆಯ ಜಾನ್‌ನನ್ನು ಮಾಧ್ಯಮ ಮಿತ್ರರು ಮಾತಿಗೆಳೆದರು. ಅನೇಕ ಜಾಹೀರಾತುಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಲು ನಿಮಗೆ ಅವಕಾಶಗಳ ಮೇಲೆ ಅವಕಾಶ ಲಭಿಸುತ್ತಿದೆಯೆಲ್ಲಾ.

ಏನಿದರ ಗುಟ್ಟು ಎಂದು ಪತ್ರಕರ್ತರು ಪ್ರಶ್ನಿಸಿದರು. ನಾನು ಎಲ್ಲವನ್ನೂ, ನನ್ನ ಇಡೀ ಜೀವನವನ್ನೂ ಸೂಕ್ಷ್ಮವಾಗಿ ಗಮನಿಸುವ ವ್ಯಕ್ತಿ. ಒಂದು ಮೋಟಾರ್‌ಸೈಕಲ್ ಅಥವಾ ಫಿಟ್ನೆಸ್ ಆಡ್‌ಗೆ ಸಹಿ ಮಾಡಬೇಕಾದರೆ ನಾನು ಆ ಉತ್ಪನ್ನವನ್ನು ಗಮನಿಸುತ್ತೇನೆ. ಅದಕ್ಕೆ ನಾನು ಹೊಂದಾಣಿಕೆ ಆಗುತ್ತೇನೆಯೇ ? ನನ್ನಿಂದ ಅತ್ಯುತ್ತಮ ಗುಣಮಟ್ಟದ ಫಲಿತಾಂಶ ನೀಡಲು ಸಾಧ್ಯವೇ ಎಂಬುದನ್ನು ಪರಾಮರ್ಶಿಸಿ ಆ ನಂತರ ರುಜು ಮಾಡುತ್ತೇನೆ. ಕೇವಲ ದುಡ್ಡಿಗಾಗಿ ಕರಾರುಗಳಿಗೆ ಸಹಿಗಳನ್ನು ಮಾಡಿ ಅದರಲ್ಲಿ ಗುಣಮಟ್ಟ ಇಲ್ಲದಿದ್ದರೆ ಏನು ಪ್ರಯೋಜನ ಎಂದು ಜಾನ್ ಮರು ಪ್ರಶ್ನೆ ಹಾಕಿದ್ದಾನೆ.  ಈತ ನಟಿಸಿರುವ ಜಾಹೀರಾತುಗಳು ಮತ್ತು ಪ್ರಮೋಷನಲ್ ಆಡ್‌ಗಳನ್ನು ನೋಡಿದರೆ ಈತನ ಬದ್ಧತೆ ಮನವರಿಕೆಯಾಗುತ್ತದೆ. ಜನಪ್ರಿಯ ನಟನಾದರೂ ಪ್ರತಿಯೊಂದರಲ್ಲೂ ಕಮಿಟ್‌ಮೆಂಟ್ ಇರುವ ಜಾನ್ ನಿಜಕ್ಕೂ ಗ್ರೇಟ್.

► Follow us on –  Facebook / Twitter  / Google+

Facebook Comments

Sri Raghav

Admin