ಕ್ರೂಸರ್ ವಾಹನ ಡಿಕ್ಕಿ: ವ್ಯಕ್ತಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

accident
ತುಮಕೂರು,ಅ.24- ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕ್ರೂಸರ್‍ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೋರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಲಿಂಗನಹಳ್ಳಿ ಗ್ರಾಮದ ಪರಮೇಶ್(45) ಮೃತಪಟ್ಟ ದುರ್ದೈವಿ.  ತುಮಕೂರಿಗೆ ಬಂದು ರಾತ್ರಿ 11.30ರಲ್ಲಿ ವಾಪಾಸ್ ಹೋಗುತ್ತಿದ್ದಾಗ ಕೋರೆಕುಂಟೆ ಗೇಟ್ ಬಳಿ ರಸ್ತೆ ದಾಟುತ್ತಿದ್ದಾಗ ಕ್ರೂಸರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಕೋರಾ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ರವಿಕುಮಾರ್ ಪ್ರಕರಣ ದಾಖಲಿಸಿಕೊಂಡು ಅಪಘಾತವೆಸಗಿದ ವಾಹನವನ್ನು ಪತ್ತೆ ಹಚ್ಚಿದ್ದು, ಚಾಲಕನಿಗಾಗಿ ತನಿಖೆ ಮುಂದುವರೆಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin