ದೇವಾಲಯಗಳು ನಮ್ಮ ಪರಂಪರೆಯ ಪ್ರತಿಬಿಂಬ : ಸಂಸದ ಸಿ.ಎಸ್.ಪುಟ್ಟರಾಜು

ಈ ಸುದ್ದಿಯನ್ನು ಶೇರ್ ಮಾಡಿ

puttaraju

ಕೆ.ಆರ್.ಪೇಟೆ,ಅ.23: ದೇವಾಲಯಗಳು ನಮ್ಮ ಪರಂಪರೆಯ ಪ್ರತಿಬಿಂಬಗಳಾಗಿವೆ. ಮಾತ್ರವಲ್ಲದೆ ಮಾನಸಿಕ ಶಾಂತಿಯ ತಾಣಗಳಾಗಿದ್ದು ಅವುಗಳನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಸಂಸದ ಸಿ.ಎಸ್.ಪುಟ್ಟರಾಜು ಹೇಳಿದರು.  ಅವರು ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ನಾಗರಘಟ್ಟ ಗ್ರಾಮದಲ್ಲಿ ನೂತನವಾಗಿ ಪ್ರಾಚ್ಯ ವಸ್ತು ಸಂಗ್ರಹಾಲಯ ಇಲಾಖೆಯಿಂದ ಪುನರ್ ನಿರ್ಮಾಣವಾಗಿರುವ ಶ್ರೀ ರಾಮೇಶ್ವರ ದೇವಾಲಯದ ಲೋಕಾರ್ಪಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.  ಜಿಲ್ಲೆಯ ಗಡಿ ಗ್ರಾಮವಾದ ನಾಗರಘಟ್ಟ ಗ್ರಾಮ ಇತಿಹಾಸದಲ್ಲಿ ಹೆಸರಾಂತ ಗ್ರಾಮವಾಗಿದೆ.

ಇಲ್ಲಿನ ದೇವಾಲಯವನ್ನು ಪುನರ್ ನಿರ್ಮಿಸಲು ಶ್ರಮಿಸಿದ ಗ್ರಾಮದವರು ಅಭಿನಂದನೆಗೆ ಭಾಜನರು ಎಂದ ಅವರು ಗ್ರಾಮದಲ್ಲಿ ಸಮುಧಾಯ ಭವನ ನಿರ್ಮಾಣಕ್ಕೆ ತಮ್ಮ ಸಂಸಧರ ನಿಧಿಯಿಂದ ಅನುಧಾನ ನೀಡುವ ಭರವಸೆ ನೀಡಿದರು.  ಸಮಾರಂಭವನ್ನು ಉದ್ಘಾಟಿಸಿದ ಜಿ.ಪಂಅಧ್ಯಕ್ಷೆ ಪ್ರೇಮಕುಮಾರಿ ಮಾತನಾಡಿ ಗ್ರಾಮಸ್ಥರು ತಮ್ಮ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಗ್ರಾಮದ ಅಭಿವೃದ್ದಿಗೆ ಶ್ರಮಿಸಬೇಕು. ತಾಲ್ಲೂಕಿನಾದ್ಯಂತ ಕುಡಿಯುವ ನೀರಿನ ಅಭಾವುಂಟಾಗಿದೆ ಅದರಲ್ಲೂ .ಗಡಿಯಂಚಿನ ಗ್ರಾಮವಾದ ನಾಗರಘಟ್ಟ ಸೇರಿದಂತೆ ಹಲವು ಹಳ್ಲೀಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಪರಿಹಾರಕ್ಕೆ ಅಗತ್ಯ ಕ್ರಮವನ್ನು ಜಿಲ್ಲಾ ಆಡಳಿತ ಕೈಗೊಳ್ಲುತ್ತದೆಎಂದು ಭರವಸೆ ನೀಡಿದರು.

ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮಾತನಾಡಿ ದೇಗುಲದ ಪುನರ್ ನಿರ್ಮಾಣದಿಂದಲಾದರೂ ಈ ಭಾಗದಲ್ಲಿ ಸಮೃದ್ದ ಮಳೆಯಾಗಲಿ,ನೀರಿನ ಸಮಸ್ಯೆ ಬಗೆಹರಿಸಲು ವರುಣದೇವನ ಕೃಪೆಯಾಗಲಿ ಎಂದು ಪ್ರಾರ್ಥಿಸಿದರು.  ಅಧ್ಯಕ್ಷತೆ ವಹಿಸಿದ್ದ ಶಾಸಕ ನಾರಾಯಣಗೌಡ ಮಾತನಾಡಿ ತಮ್ಮ ಶಾಸಕರ ಅನುದಾನದಲ್ಲಿಸಾಕಷ್ಟು ನೆರವನ್ನು ಈ ಹೋಬಳಿಯ ಅಭಿವೃದ್ದಿಗೆ ನೀಡಿದ್ದೇನೆ.ನಾಗರಘಟ್ಟದ ಅಭಿವೃದ್ದಿಗೆ ಕ್ರಮಕೈಗೊಂಡಿದ್ದು ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆಯಡಿ ಅಘಲಯದಿಂದ ನಾಗರಘಟ್ಟ ದವರೆವಿಗೆ ಡಾಂಬರ್ ರಸ್ತೆ ನಿರ್ಮಾಣಕ್ಕೆ ಇಷ್ಟರಲ್ಲೇ ಶಂಕುಸ್ಥಾಪನೆ ಮಾಡಲಾಗುವದು, ಗ್ರಾಮಾಂತರ ಪ್ರದೇಶದ ಜನರ ಹಾಗೂ ರೈತರ ಪರವಾಗಿ ಕೊನೆ ಉಸಿರು ಇರುವವರೆವಿಗೂ ಹೋರಾಟ ಮಾಡುತ್ತೇನೆ ಇದಕ್ಕಾಗಿ ಯಾವ ತ್ಯಾಗಕ್ಕೂ ಸಿದ್ದ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪ್ರೇಮಕುಮಾರಿ ,ಅಘಲಯ ಗ್ರಾಮಪಂಚಾಯಿತಿ ಅಧ್ಯಕ್ಷ ಶಾಂತರಾಜು ಚನ್ನರಾಯಪಟ್ಟಣ ಶಾಸಕ ಬಾಲಕೃಷ್ಣ ರವರ ಪತ್ನಿ ಕುಸುಮಾ, ತಾ.ಪಂ ಉಪಾದ್ಯಕ್ಷ ಜಾನಕೀರಾಮ್, ರಾಜ್ಯ ಕಿಯೋನಿಕ್ಸ್ ನಿರ್ದೇಶಕ ಎ.ಎಸ್.ಮಂಜುನಾಥ್, ಮನ್‍ಮುಲ್ ನಿರ್ದೇಶಕ ಡಾಲುರವಿ . ಟಿಎಪಿಸಿಎಂಎಸ್ ನಿರ್ದೇಶಕ ಶ್ರೀಧರ್, ಇಂಜಿನಿಯರ್ ತುಳಸಿರಾಮ್, ದೇವಸ್ಥಾನದ ಅರ್ಚಕರಾದ ಪಟ್ಟಾಭಿರಾಮಯ್ಯ ಮತ್ತು ಮುರುಳಿ, ದೇಗುಲ ಪುನರ್ ನಿರ್ಮಾಣದ ನೇತೃತ್ವ ವಹಿಸಿದ್ದ ಎನ್.ಅರಣ್ ಕುಮಾರ್, ಗೋಪಾಲಕೃಷ್ಣ, ನರಸಿಂಹಮೂರ್ತಿ, ಗ್ರಾ.ಪಂಸದಸ್ಯೆ ಯಶೋಧಾ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.  ಪ್ರಾಚೀನ ದೇವಾಯದ ಲೋಕಾರ್ಪಣೆ ನಿಮಿತ್ತ ಬುಧವಾರದಿಂದಲೇ ವಿಶೇಷ ಪೂಜೆ ,ಹವನ. ಹೋಮ, ಸಂಕಲ್ಪ, ವಿಗ್ರಹ ಪ್ರತಿಷ್ಟಾಪನೆ ಮುಂತಾದ ಧಾರ್ಮಿಕ ಕಾರ್ಯಗಳು ವೇ.ಬ್ರ.ಗೋಪಾಲಕೃಷ್ಣ ಅವದಾನಿಗಳ ನೇತೃತ್ವದಲ್ಲಿ ನಡೆಯಿತು.

► Follow us on –  Facebook / Twitter  / Google+

Facebook Comments

Sri Raghav

Admin