ಪೈಲೆಟ್ ಸಮಯಪ್ರಜ್ಞೆಯಿಂದ ತಪ್ಪಿತು ಆಗಸದಲ್ಲಿ ವಿಮಾನಗಳ ಡಿಕ್ಕಿ, ಗಂಡಾಂತರದಿಂದ 264 ಜನ ಪಾರು..!

ಈ ಸುದ್ದಿಯನ್ನು ಶೇರ್ ಮಾಡಿ

Mid-Air-Goa

ನವದೆಹಲಿ, ಅ.24- ಗೋವಾದ ಆಗಸದಲ್ಲಿ ಸಂಭವಿಸಲಿದ್ದ ಎರಡು ವಿಮಾನಗಳ ಭೀಕರ ಮುಖಾಮುಖಿ ಡಿಕ್ಕಿ ದುರಂತವು ಅದೃಷ್ಟವಶಾತ್ ಪೈಲೆಟ್ ಸಮಯಪ್ರಜ್ಞೆಯಿಂದ ತಪ್ಪಿರುವ ಘಟನೆ ನಡೆದಿದೆ. ಇದರಿಂದ 264 ಪ್ರಯಾಣಿಕರ ಜೀವ ಉಳಿದಂತಾಗಿದೆ.  ಗೋವಾದಿಂದ ಹೈದರಾಬಾದ್‍ಗೆ ತೆರಳುತ್ತಿದ್ದ ಸ್ಫೈಸ್ ಜೆಟ್‍ನ ಎಸ್‍ಜಿ 3604 ವಿಮಾನ ಮತ್ತು ಮುಂಬೈನಿಂದ ಗೋವಾಗೆ ಬರುತ್ತಿದ್ದ ಗೋಏರ್ಸ್‍ನ ಜಿ8-141 ವಿಮಾನದ ನಡುವೆ ಕರಾವಳಿ ರಾಜ್ಯದ ವೈಮಾನಿಕ ವ್ಯಾಪ್ತಿಯಲ್ಲಿ ನಿನ್ನೆ ಮುಖಾಮುಖಿ ಡಿಕ್ಕಿ ಆಗುವ ಘೋರ ದುರಂತ ಕೂದಲೆಳೆ ಅಂತರದಲ್ಲಿ ತಪ್ಪಿದೆ. ಈ ವಿಮಾನದಲ್ಲಿ ಕ್ರಮವಾಗಿ 186 ಮತ್ತು 78 ಪ್ರಯಾಣಿಕರಿದ್ದರು.

Plane-01

ಈ ಎರಡೂ ವಿಮಾನಗಳು ತೀರಾ ಸನಿಹಕ್ಕೆ ಬರುತ್ತಿದ್ದಂತೆ ಸ್ಪೈಸ್ ಜೆಟ್ ಕಾಕ್‍ಪಿಟ್‍ನಲ್ಲಿ ಟ್ರಾಫಿಕ್ ಕೊಲಿಷನ್ ಅವಾಡೆನ್ಸ್ ಸಿಸ್ಟಮ್ (ಟಿಎಸ್‍ಸಿಎಸ್) ಮೂಲಕ ಬಂದ ತುರ್ತು ಸಂದೇಶದಿಂದ ಎಚ್ಚೆತ್ತ ಪೈಲೆಟ್ ತಕ್ಷಣ ವಿಮಾನದ ದಿಕ್ಕನ್ನು ಬದಲಿಸಿದ. ಇದೇ ವೇಳೆ ಗೋ ಏರ್‍ವಿಮಾನವು ಸ್ಪೈಸ್‍ಜೆಟ್ ಫ್ಲೈಟ್‍ಗೆ ತೀರಾ ಸನಿಹದಲ್ಲಿ ಹಾದು ಹೋಯಿತು. ಪೈಲೆಟ್ ಸಮಯ ಪ್ರಜ್ಞೆಯಿಂದ ಆಗಸದಲ್ಲಿ ವಿಮಾನ ಡಿಕ್ಕಿಯಾಗುವುದು ತಪ್ಪಿ 264 ಜನರ ಪ್ರಾಣ ಉಳಿಯಿತು.

► Follow us on –  Facebook / Twitter  / Google+

Facebook Comments

Sri Raghav

Admin