ಯುವಕರನ್ನೂ ಬಿಡದೆ ಕಾಡುತ್ತಿದೆ ‘ಅಲ್ಜೈಮರ್ ರೋಗ’

ಈ ಸುದ್ದಿಯನ್ನು ಶೇರ್ ಮಾಡಿ

alzheimer-disease

ಅಲ್ಜೈಮರ್ ಅಂದರೆ ಮರೆವಿನ ರೋಗ. ಇದು ಕೇವಲ ವೃದ್ಧರಿಗಷ್ಟೇ ಬಾಸುವ ರೋಗ ಎಂದು ನೀವು ಭಾವಿಸಿದ್ದರೆ ತಪ್ಪು. ಯುವಜನತೆಯನ್ನೂ ಕಾಡಲಿದೆ. ಇತ್ತೀಚೆಗೆ 30-40 ವರ್ಷಗಳ ವಯಸ್ಕರಲ್ಲೂ ಅಲ್ಜೈಮರ್ ಕಾಣಿಸಿಕೊಂಡಿವೆ. ಅಲ್ಜೈಮರ್ ಅಸೋಸಿಯೇಷನ್ ಪ್ರಕಾರ, ಒಟ್ಟು ಅಲ್ಜೈಮರ್ ಬಾತ ಜನಸಂಖ್ಯೆಯ ಶೇ.5ರಷ್ಟು ಜನರಲ್ಲಿ ಮೊದಲೇ ಕಾಣಿಸಿಕೊಂಡಿದೆ. ಇದು ಅತ್ಯಂತ ಅಪರೂಪವಾಗಿದ್ದರೂ, ಭಾರತದಲ್ಲಿ ಅಲ್ಜೈಮರ್ ರೋಗಿಗಳ ಸಂಖ್ಯೆ ವಿಶೇಷವಾಗಿ ಹೆಚ್ಚುತ್ತಿದೆ ಮತ್ತು ಇದೇ ಕಾರಣಕ್ಕೆ ಅಲ್ಜೈಮರ್ ಹಾಗೂ ಇದರ ಗುಣಲಕ್ಛ್ಷಣಗಳ ಬಗ್ಗೆ ತಿಳಿದುಕೊಳ್ಳಬೇಕಿರುವುದು ಅತ್ಯಂತ ಪ್ರಮುಖವಾಗಿದೆ.

ಅಲ್ಜೈಮರ್ ಇತಿಹಾಸ ಕುಟುಂಬದಲ್ಲಿದ್ದರೆ ಅಥವಾ ಡಿಮೆನ್ಷಿಯಾ ಅಥವಾ ನಿರ್ದಿಷ್ಟ ಮ್ಯುಟೇಶನ್‌ಗಳಿಂದಾಗಿ ಅಲ್ಜೈಮರ್ ವಯಸ್ಕರಲ್ಲಿ ಶೀಘ್ರವಾಗಿ ಕಾಣಿಸಿಕೊಳ್ಳುತ್ತದೆ. ಅಲ್ಜೈಮರ್ ಬೇಗ ಕಾಣಿಸಿಕೊಂಡರೆ ಯಾವ ಪರಿಹಾರವೂ ಇಲ್ಲ. ಸೂಕ್ತ ತಪಾಸಣೆ ಹಾಗೂ ಸರಿಯಾದ ಚಿಕಿತ್ಸೆಯಿಂದ ಅಲ್ಜೈಮರ್ ನಿವಾರಣೆ ಮಾಡಬಹುದಾಗಿದೆ ಎಂದು ತಜ್ಞ ವೈದ್ಯರು ಹೇಳುತ್ತಾರೆ. ಅಲ್ಜೈಮರ‍್ಸ್ ಮತ್ತು ಸಂಬಂತ ರೋಗಗಳು ಭಾರತೀಯ ಸಮುದಾಯದ (ಎಆರ್‌ಡಿಎಸ್‌ಐ) ಅಂದಾಜಿನ ಪ್ರಕಾರ 2012ರಲ್ಲಿ ಡಿಮೆನ್ಷಿಯಾ ರೋಗವನ್ನು ಹೊಂದಿರುವ 3.7 ಮಿಲಿಯನ್ ಭಾರತೀಯರಿದ್ದಾರೆ. ಈ ಸಂಖ್ಯೆ 2030ರ ಹೊತ್ತಿಗೆ ಏಳು ಮಿಲಿಯನ್‌ಗೆ ಏರುವ ಸಾಧ್ಯತೆಯಿದೆ. ಇದರಿಂದ ದೇಶದ ಮೇಲೆ ಭಾರಿ ಪ್ರಮಾಣದ ಹಣಕಾಸು ಹಾಗೂ ಸಾಮಾಜಿಕ ಹೊರೆ ಉಂಟಾಗಲಿದೆ.

alzaimar

ಬಹುತೇಕ ಜನರು ನಂಬಿರುವಂತೆ ಡಿಮೆನ್ಷಿಯಾ ವಯಸ್ಸಾಗುವ ಸಹಜ ಪ್ರಕ್ರಿಯೆಯಲ್ಲ. ಇದು ನರ ಸಂಬಂ ರೋಗ. ಹಲವು ವಿಧದ ಗುಣಲಕ್ಷಣಗಳನ್ನು ಇದು ಹೊಂದಿದೆ. ಕುಟುಂಬ ಸದಸ್ಯರು ಇದನ್ನು ವಯೋ ಸಹಜ ಸಮಸ್ಯೆಗಳು ಎಂದು ಪರಿಗಣಿಸಿರುವುದರಿಂದ ಈ ಗುಣಲಕ್ಷಣಗಳು ಸಾಮಾನ್ಯವಾಗಿ ನಗಣ್ಯವಾಗುತ್ತವೆ. ಗುಣಲಕ್ಷಣಗಳ ಬಗ್ಗೆ ಅರಿವಿದ್ದು ಗಮನಿಸುತ್ತಿದ್ದರೆ ಮತ್ತು ವೈದ್ಯಕೀಯ ಸಲಹೆ ಪಡೆದರೆ ಆರಂಭಿಕ ಹಂತದ ಚಿಕಿತ್ಸೆ ಸಾಧ್ಯವಿದೆ ಮತ್ತು ಇದರಿಂದ ಗ್ಠುಣಲಕ್ಷಣಗಳನ್ನು ಕಡಿಮೆ ಮಾಡಿ ಕೆಲವು ರೋಗಿಗಳಲ್ಲಿ ಸಮಸ್ಯೆಯನ್ನು ನಿವಾರಿಸಬಹುದು ಎಂದು ವೈದ್ಯರು ಹೇಳಿದ್ದಾರೆ.  ಅಲ್ಜೈಮರ್ ರೋಗದ ಅಪಾಯವನ್ನು ತಡೆಯುವ ನಿಟ್ಟಿನಲ್ಲಿ ಸಹಾಯ ಮಾಡುವ ಕೆಲವು ಸಲಹೆಗಳನ್ನು ತಜ್ಞ ವೈದ್ಯ ಡಾ.ಅನಿಲ್ ನೀಡಿದ್ದಾರೆ.

* ದೈಹಿಕ ವ್ಯಾಯಾಮ : ನಿತ್ಯ ದೈಹಿಕ ವ್ಯಾಯಾಮದಿಂದ ಅಲ್ಜೈಮರ್ ರೋಗ ಕಾಣಿಸಿಕೊಳ್ಳುವಿಕೆಯನ್ನು ತಡೆಯಬಹುದು. ನಡೆಯುವುದು, ಓಡುವುದು, ಸೈಕ್ಲಿಂಗ್, ಈಜುವಿಕೆ ಇತ್ಯಾದಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಅಪಾಯವನ್ನು ಕಡಿಮೆ ಮಾಡಬಹುದು.

* ಮಾನಸಿಕ ವ್ಯಾಯಾಮ: ಹೆಚ್ಚು ಮಾನಸಿಕ ಚಟುವಟಿಕೆಗಳನ್ನು ಡಿಮೆನ್ಷಿಯಾ ಕಾಣಿಸಿಕೊಳ್ಳುವ ಅಪಾಯ ಕಡಿಮೆ ಎಂದು ನಂಬಲಾಗಿದೆ. ಪಜಲ್‌ಗಳನ್ನು ಪರಿಹರಿಸುವುದು, ಓದುವುದು ಮತ್ತು ಬರೆಯುವಂಥ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ವ್ಯಕ್ತಿಗಳು ಮಿದುಳಿಗೆ ಕೆಲಸ ಕೊಡಬೇಕು.

* ಆರೋಗ್ಯಕರ ಆಹಾರ: ಮಿದುಳನ್ನು ಆರೋಗ್ಯಕರವಾಗಿಸಲು ಫ್ಯಾಟಿ ಆಸಿಡ್ ಇರುವ ಆಹಾರವನ್ನು ಸೇವಿಸಲು ಶಿಫಾರಸು ಮಾಡಲಾಗಿದೆ. ವಾಲ್‌ನಟ್‌ಗಳು, ಮೀನು, ಸೋಯಾಬೀನ್ ಮತ್ತು ಫ್ಲಾಕ್ಸ್ ಸೀಡ್‌ಗಳು ನಿಮ್ಮ ಆಹಾರದಲ್ಲಿದ್ದರೆ ಅಪಾಯ ಕಡಿಮೆಯಾಗುತ್ತದೆ. ಇತ್ತೀಚೆಗೆ ನ್ಯೂರೋಬಯಾಲಜಿ ಆಫ್ ಏಜಿಂಗ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಅಲ್ಜೈಮರ್ ರೋಗಕ್ಕೆ ಕಾಫಿ ತಡೆ ಒಡ್ಡುತ್ತದೆ ಎಂದು ಹೇಳಲಾಗಿದೆ. ಕೇಂದ್ರ ನರ ವ್ಯವಸ್ಥೆಯ ಮೇಲೆ ಕಾಫಿ ಪ್ರಭಾವ ಬೀರುತ್ತದೆ.

* ಗುಣಲಕ್ಷಣಗಳನ್ನು ಗಮನಿಸುತ್ತಿರಿ:

ನೆನಪು ಕಳೆದುಕೊಳ್ಳುವಿಕೆಯ ಸಣ್ಣ ಗುಣಲಕ್ಷಣಗಳಿಂದ ಡಿಮೆನ್ಷಿಯಾ ಆರಂಭವಾಗುತ್ತದೆ. ಅಲ್ಜೈಮರ್‌ನಂಥ ರೋಗವನ್ನು ನಿವಾರಿಸಲಾಗುವುದಿಲ್ಲ ಮತ್ತು ಮೊದಲಿನಂತೆ ವ್ಯಕ್ತಿಯನ್ನು ಮಾಡಲಾಗುವುದಿಲ್ಲ. ಆದರೆ, ಮೊದಲೇ ಕಂಡುಕೊಂಡರೆ ಇದರ ಪ್ರಗತಿಯನ್ನು ಬಹಳಷ್ಟು ಕಡಿಮೆ ಮಾಡಬಹುದು.  ಹೀಗಾಗಿ, ವೃದ್ಧರಲ್ಲಿ ಇಂತಹ ಗುಣಲಕ್ಷಣಗಳನ್ನು ಕಂಡುಕೊಳ್ಳುವುದು ಕುಟುಂಬ ಸದಸ್ಯರಿಗೆ ಅತ್ಯಂತ ಮುಖ್ಯವಾಗಿದ್ದು ವೈದ್ಯರಿಗೆ ತಕ್ಷಣವೇ ವರದಿ ಮಾಡಬೇಕಿರುತ್ತದೆ.  ಯುವಜನತೆಯಲ್ಲಿ ಇಂತಹ ಲಕ್ಷಣಗಳು ಕಂಡು ಬಂದರೆ ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಕೌನ್ಸಿಲಿಂಗ್ ಪಡೆಯುವುದು ಒಳಿತು.

► Follow us on –  Facebook / Twitter  / Google+

Facebook Comments

Sri Raghav

Admin