ಹನೂರಿನಲ್ಲಿ ಬಿಜೆಪಿ ಯುವಮೋರ್ಚಾ ವತಿಯಿಂದ  ಸ್ವಚ್ಛಭಾರತ್ ಅಭಿಯಾನ

ಈ ಸುದ್ದಿಯನ್ನು ಶೇರ್ ಮಾಡಿ

hanuru
ಹನೂರು, ಅ.24- ಬಿಜೆಪಿ ಯುವಮೋರ್ಚಾ ವತಿಯಿಂದ ಸ್ವಚ್ಛಭಾರತ್ ಅಭಿಯಾನದ ಅಂಗವಾಗಿ ಹನೂರು ಪಟ್ಟಣದ ಪ್ರಮುಖ ಬೀದಿಗಳು ಹಾಗೂ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.ಪೊರೆಕೆಗಳನ್ನು ಹಿಡಿದ ನೂರಾರು ಬಿಜೆಪಿ ಕಾರ್ಯಕರ್ತರು ರಸ್ತೆಯ ಇಕ್ಕೆಲಗಳನ್ನು ಶುಚಿಗೊಳಿಸಿದರಲ್ಲದೆ ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನದ ಮುಂಭಾಗದಿಂದ ಹೊರಟು ಅಂಬೇಡ್ಕರ್ ವೃತ್ತ ಹಾಗೂ ಪ್ರಮುಖ ಬೀದಿಗಳು ಹಾಗೂ ಬಸ್ಸ್ ನಿಲ್ದಾಣವನ್ನು ಶುಚಿಗೊಳಿಸಿ ವರ್ತಕರಿಗೆ ಹಾಗೂ ಸಾರ್ವಜನಿಕರಲ್ಲಿ ಸ್ವಚ್ಛತೆ ಕಾಪಾಡಬೇಕೆಂದು ಮನವಿ ಮಾಡಿದರು.

ಮುಖಂಡ ಪೊನ್ನಾಚಿ ಮಹಾದೇವಸ್ವಾಮಿ ಮಾತನಾಡಿ,  ನರೇಂದ್ರಮೋದಿಯವರು ಇಡಿ ದೇಶದ ಜನರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿಸುವ ಕರೆ ನೀಡಿದರು. ಅವರ ಧ್ಯೇಯ ವಾಕ್ಯದೊಂದಿಗೆ ನಾವು ನಮ್ಮ ಗ್ರಾಮ ಪಟ್ಟಣದ ಜನತೆಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುತ್ತಿದ್ದು ಸಾರ್ವಜನಿಕರು ವರ್ತಕರು ಸಹಕರಿಸಬೇಕೆಂದು ತಿಳಿಸಿದರು. ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಕೆ.ಪಿ.ವೃಷಭೇಂದ್ರಸ್ವಾಮಿ ಮಾತನಾಡಿ, ಕಾಯಕವೇ ಕೈಲಾಸ ಎಂಬ ಬಸವಣ್ಣನವರ ನುಡಿಯಂತೆ ಒಂದಿಲ್ಲೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಸ್ವಚ್ಛತೆಯ ಜಾಗೃತಿಗಾಗಿ ಕಾರ್ಯಪ್ರವೃತ್ತರಾಗಬೇಕೆಂದು ತಿಳಿಸಿದರು. ಹನೂರು ಮಂಡಲ ಅಧ್ಯಕ್ಷರಾದ ರಾಜಶೇಖರ್, ಜೆ.ಬಿ.ಬಾಬು, ರಾಚಯ್ಯ ನಾಗೇಂದ್ರ, ಪ್ರಭು, ಮಹೇಶ್, ಶಿವಕುಮಾರ್, ಮೂರ್ತಿ, ಸುಜಯ್, ಬಾಲು, ಮೂರ್ತಿ, ರಾಜಣ್ಣ, ಮಹದೇವಸ್ವಾಮಿ, ರಾಜೇಂದ್ರ ಮುಂತಾದವರು ಕಾಯಕ್ರಮದಲ್ಲಿ ಭಾಗವಹಿಸಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin