ಆರೋಗ್ಯ-ಗ್ರಾಮಗಳ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ರಥ ಯಾತ್ರೆ

ಈ ಸುದ್ದಿಯನ್ನು ಶೇರ್ ಮಾಡಿ

hosakote

ಹೊಸಕೋಟೆ, ಅ.25-ಗ್ರಾಮ ಪಂಚಾಯ್ತಿಗಳ ವ್ಯಾಪಿಯ 11 ಗ್ರಾಮಗಳಲ್ಲಿ ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಹಮ್ಮಿಕೊಂಡಿರುವ ರಥಯಾತ್ರೆಗೆ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಗ್ರಾ.ಪಂ. ಅಧ್ಯಕ್ಷ ವಿಜಯ್‍ಕುಮಾರ್ ತಿಳಿಸಿದರು. ಜಡಿಗೇನಹಳ್ಳಿ ಹೋಬಳಿಯ ಓರೋಹಳ್ಳಿ ಗ್ರಾಮ ಪಂಚಾಯ್ತಿ ಆವರಣದಲ್ಲಿ ಆರೋಗ್ಯ ಮತ್ತು ಸ್ವಚ್ಚತೆ ಕುರಿತು ರಥಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.ಬಯಲು ಶೌಚ ಮತು ಮಲವಿಸರ್ಜನೆ ಮುಕ್ತ ಮಾಡಬೇಕು ನಮ್ಮ ಆರೋಗ್ಯದ ಬಗ್ಗೆ ನಾವು ಕಾಳಜಿ ವಹಿಸಿ ಮನೆಗೂಂದು ಶೌಚಾಲಯ ನಿರ್ಮಿಸಬೇಕು ಅದಕ್ಕಾಗಿ ಸರ್ಕಾರ ಹಣವನ್ನು ನೀಡುತ್ತಿದೆ ಇದು ಸದ್ಬಳಕೆಯಾಗಬೇಕು ಎಂದರಲ್ಲದೆ, ಈ ಕಾರ್ಯಕ್ರಮ ಹಮ್ಮಿಕೊಂಡಿರುವ ಜನಿಪರ್ ನೆಟ್‍ವರ್ಕ್ ಮತ್ತು ಸೇವ್ ದಿ ಚಿಲ್ಡ್ರನ್ ಸಂಸ್ಥೆಯವರಿಗೆ ಧನ್ಯವಾದಗಳನ್ನು ಹೇಳಿದರು. ತಾಲ್ಲೂಕು ಪಂಚಾಯ್ತಿ ಸದಸ್ಯ ಜಯದೇವಯ್ಯ ಜನಿಪರ್ ಸಂಸ್ಥೆಯ ಅರ್ಚನ,ಪಿಡಿಒ ರವೀಂದ್ರ, ಓರೋಹಳ್ಳಿಯ ಆನಂದ್,ಶಾಲಾ ಮಕ್ಕಳು ಹಾಜರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin