ತಾನೇ ಹೆಣೆದ ಬಲೆಯಲ್ಲಿ ಸಿಕ್ಕಿಕೊಂಡು ನರಳುತ್ತಿದೆ ಪಾಕ್ : ಉಗ್ರರ ದಾಳಿಗೆ 60 ಕೆಡೆಟ್’ಗಳು ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Pak-03

ಕರಾಚಿ, ಅ.25– ಬಲೂಚಿಸ್ತಾನದ ಕ್ವೆಟ್ಟಾದ ಪೊಲೀಸ್ ತರಬೇತಿ ಕೇಂದ್ರದ ಮೇಲೆ ಭಯೋತ್ಪಾದಕರು ನಡೆಸಿದ ಭೀಕರ ಹತ್ಯಾಕಾಂಡದಲ್ಲಿ 60ಕ್ಕೂ ಹೆಚ್ಚು ಕೆಡೆಟ್ಗರಳು ಬಲಿಯಾಗಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.  ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಮೂವರು ಉಗ್ರರು ಹತರಾಗಿದ್ದಾರೆ. ಪಾಕಿಸ್ತಾನದಲ್ಲಿ ನಡೆದ ಅತ್ಯಂತ ಘೋರ ಹತ್ಯಾಕಾಂಡ ಇದೆಂದು ಬಣ್ಣಿಸಲಾಗಿದೆ.  ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಭದ್ರತಾಪಡೆ ಉನ್ನತಾಧಿಕಾರಿಗಳು ಹೇಳಿದ್ದಾರೆ.  ದಾಳಿ ಸಂದರ್ಭದಲ್ಲಿ 400ಕ್ಕೂ ಹೆಚ್ಚು ಪೊಲೀಸ್ ಪ್ರಶಿಕ್ಷಣಾರ್ಥಿಗಳನ್ನು ರಕ್ಷಿಸಲಾಗಿದೆ. ತಾಲಿಬಾನ್ ಭಯೋತ್ಪಾದಕರ ಕೃತ್ಯ ಇದಾಗಿದ್ದು, ಕ್ವೆಟ್ವಾ ಸರಣಿ ಮಾರಣಹೋಮಗಳಿಂದ ತತ್ತರಿಸಿದೆ.

Pak-02

ಬಲೂಚಿಸ್ತಾನ ರಾಜಧಾನಿ ಕ್ವೆಟ್ಟಾದಿಂದ 20 ಕಿ.ಮೀ.ದೂರದಲ್ಲಿರುವ ಪೊಲೀಸ್ ಅಕಾಡೆಮಿ ಮೇಲೆ ನಿನ್ನೆ ಮಧ್ಯರಾತ್ರಿ ದಾಳಿ ಮಾಡಿದ ಮೂವರು ಬಂದೂಕುದಾರಿಗಳು ಕಾವಲು ಗೋಪುರದ ಪೊಲೀಸರನ್ನು ಕೊಂದು ನಂತರ ಮನಸೋಇಚ್ಚೆ ಗುಂಡಿನ ಮಳೆಗರೆದರು. ಈ ಭೀಕರ ದಾಳಿಯಲ್ಲಿ 60 ಕೆಡೆಡ್ಗಲಳು ಸ್ಥಳದಲ್ಲೇ ಸಾವಿಗೀಡಾದರು, 118 ಜನ ತೀವ್ರ ಗಾಯಗೊಂಡಿದ್ದಾರೆ ಎಂದು ಬಲೂಚಿಸ್ತಾನದ ಗೃಹ ಸಚಿವ ಮಿರ್ ಸರ್ಫರಾಜ್ ಅಹಮದ್ ಬುಗ್ಟಿ ತಿಳಿಸಿದ್ದಾರೆ.  ಸುಮಾರು 700 ಕೆಡೆಟ್ಗಿಳು ಇದ್ದ ಅಕಾಡೆಮಿಯ ಹಾಸ್ಟೆಲ್ಗೆು ನುಗ್ಗಿ ಗುಂಡಿನ ಮಳೆಗರೆದು ಭೀಕರ ಹತ್ಯಾಕಾಂಡ ನಡೆಸುವುದು ದಾಳಿಯ ಉದ್ದೇಶವಾಗಿತ್ತು. ಬಾಂಬ್ಗಾಳಿರುವ ಉಡುಪುಗಳನ್ನು ಧರಿಸಿದ್ದ ಉಗ್ರರು ಎರಡು ಬಾಂಬ್ಗೆಳನ್ನು ಸಹ ಸ್ಫೋಟಿಸಿದರು. ಉಗ್ರರನ್ನು ಸದೆಬಡಿಯಲು ಭದ್ರತಾಪಡೆ ಮುಂದಾದಾಗ ಮೂರು ಗಂಟೆಗಳ ಕಾಲ ಭೀಕರ ಗುಂಡಿನ ಚಕಮಕಿ ನಡೆಯಿತು. ಎನ್ಕೌಂಯಟರ್ ವೇಳೆ ಇಬ್ಬರು ತಮ್ಮನ್ನು ತಾವು ಆಸ್ಫೋಟಿಸಿಕೊಂಡರೆ ಮತ್ತೊಬ್ಬ ಪೊಲೀಸ್ ಗುಂಡಿಗೆ ಬಲಿಯಾದ ಎಂದು ಬಲೂಚಿಸ್ತಾನ್ ಪೊಲೀಸ್ ಮುಖ್ಯಸ್ಥ ಅಹಸಾನ್ ಮೆಹಬೂಬ್ ಹೇಳಿದ್ದಾರೆ.

Pak-04

ಪಾಕಿಸ್ತಾನದಲ್ಲಿ ಈ ವರ್ಷ ನಡೆದ ಮೂರನೇ ಭೀಕರ ನರಮೇದ ಇದಾಗಿದೆ. ತಾಲಿಬಾನ್ ಭಯೋತ್ಪಾದಕರೊಂದಿಗೆ ಗುರುತಿಸಿಕೊಂಡಿರುವ ಲಷ್ಕರ್-ಎ-ಜಂಗ್ವಿ ಉಗ್ರಗಾಮಿ ಸಂಘಟನೆಗೆ ಸೇರಿದ ಅಲ್-ಅಲ್ಮಿ ಉಗ್ರರು ಈ ದಾಳಿ ನಡೆಸಿದ್ದಾರೆ. ಈ ದಾಳಿ ನಂತರ ಪೊಲೀಸರು ಮತ್ತು ಅರೆಸೇನಾ ಪಡೆಗಳು ಪ್ರದೇಶವನ್ನು ಸುತ್ತುವರಿದಿವೆ. ಸೇನೆ ಮತ್ತು ಗಡಿ ರಕ್ಷಣಾ ಪಡೆಗಳು ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ ಚುರುಕುಗೊಳಿಸಿವೆ ಎಂದು ಫ್ರಾಂಟಿಯರ್ ಕ್ರಾಪ್ಸ್ ಐಜಿ ಮೇಜರ್ ಶೇರ್ ಅಫ್ಘನ್ ಹೇಳಿದ್ದಾರೆ.  ದಕ್ಷಿಣ ಕ್ವೆಟ್ವಾದಿಂದ 145 ಕಿ.ಮೀ. ದೂರದಲ್ಲಿರುವ ಸುರಬ್ ಪಟ್ಟಣ ಬಳಿ ಮೋಟಾರ್ಸೈ ಕಲ್ನದಲ್ಲಿ ಬಂದ ಶಸ್ತ್ರಸಜ್ಜಿತರು ಇಬ್ಬರು ಕಸ್ಟಮ್ಸ್ ಅಧಿಕಾರಿಗಳನ್ನು ಹತ್ಯೆಗೈದ ಕೆಲವೇ ಗಂಟೆಗಳ ನಂತರ ಈ ಭೀಕರ ದಾಳಿ ನಡೆದಿದೆ.  ಪಾಕಿಸ್ತಾನವು ತಾನು ಹೆಣೆದ ಬಲೆಯಲ್ಲಿ ತಾನೇ ಸಿಕ್ಕಿ ನರಳುತ್ತಿರುವುದಕ್ಕೆ ಇದು ಮತ್ತೊಂದು ಸಾಕ್ಷಿಯಾಗಿದೆ.

► Follow us on –  Facebook / Twitter  / Google+

Pak-01

Facebook Comments

Sri Raghav

Admin