ದೆಹಲಿಯಲ್ಲಿ ಅಕ್ರಮ ಕ್ಯಾಸಿನೋ ಮೇಲೆ ದಾಳಿ : 36 ಉದ್ಯಮಿಗಳ ಸೆರೆ, 1.36 ಕೋಟಿ ರೂ. ವಶ

ಈ ಸುದ್ದಿಯನ್ನು ಶೇರ್ ಮಾಡಿ

Casinp
ನವದೆಹಲಿ, ಅ.25-ದೆಹಲಿಯ ತೋಟದ ಮನೆಯೊಂದರ ಮೇಳೆ ದಾಳಿ ನಡೆಸಿದ ಪೊಲೀಸರು ವ್ಯವಸ್ಥಿತ ಕ್ಯಾಸಿನೋ ಜಾಲವೊಂದನ್ನು ಬೇಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಉದ್ಯಮಿಗಳು ಸೇರಿದಂತೆ 36 ಜನರನ್ನು ಬಂಧಿಸಿ 1.36 ಕೋಟಿ ರೂ. ಮೌಲ್ಯದ ಗ್ಯಾಬ್ಲಿಂಗ್ ಚಿಪ್‍ಗಳು,  ಐಷಾರಾಮಿ ಕಾರುಗಳು ಮತ್ತು ವಿದೇಶಿ ಮದ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ನಡೆದ ಅತಿ ದೊಡ್ಡ ಜೂಜು ಅಡ್ಡೆ  ದಾಳಿ  ಇದಾಗಿದೆ. ದಕ್ಷಿಣ ದೆಹಲಿಯ ಸೈನಿಕ್ ಫಾರ್ಮ್‍ನ ಬಂಗ್ಲೋ ಜೆ-255 ರಾತ್ರಿ 10ರ  ನಂತರ ಕ್ಯಾಸಿನೋ ಆಗಿ ಪರಿವರ್ತಿತವಾಗುತ್ತಿತ್ತು. ಕೋಟ್ಯಂತರ ರೂ.ಗಳ ಮೌಲ್ಯದ ಗ್ಯಾಬ್ಲಿಂಗ್ ಚಿಪ್‍ಗಳನ್ನು ಈ ವ್ಯವಸ್ಥಿತ ದಂಧೆಗೆ ಬಳಸಿಕೊಳ್ಳಲಾಗುತ್ತಿತ್ತು.

Casinp1

ಈ ವ್ಯವಸ್ಥಿತ ಕ್ಯಾಸಿನೋ ದಂಧೆ ಬಗ್ಗೆ ನಿಖರ ಮಾಹಿತಿ ಪಡೆದ ಪೊಲೀಸರು ಭಾನುವಾರ ರಾತ್ರಿ ಹಠಾತ್ ದಾಳಿ ನಡೆಸಿದರು. ಈ ಬಂಗಲೆಯಲ್ಲಿ ಅತ್ಯಾಧುನಿಕ ಕ್ಯಾಸಿನೋ ಯಂತ್ರ ಬಳಸಿ ಜೂಜು ವಹಿವಾಟಿನ ದಂಧೆ ನಡೆಯುತ್ತಿದ್ದುದು ಕಂಡು ಬಂದಿತು. ದಂಧೆಯಲ್ಲಿ ನಿರತರಾಗಿದ್ದ ಉದ್ಯಮಿಗಳು ಮತ್ತು ಜೂಜುಕೋರರು ಸೇರಿದಂತೆ 36 ಜನರನ್ನು ಬಂಧಿಸಿ 1.36 ಕೋಟಿ ರೂ. ಮೌಲ್ಯದ ಪಂಥದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರೆಲ್ಲ ಬಹುತೇಕರು ಗುರುಗಾಂವ್, ಫರಿದಾಬಾದ್, ದೆಹಲಿಯ ಪ್ರತಿಷ್ಠಿತ ಉದ್ಯಮಿಗಳ  ಕುಟುಂಬದವರು .

► Follow us on –  Facebook / Twitter  / Google+

Casinp5

Casinp-4

Casinp-3

Facebook Comments

Sri Raghav

Admin