ದೆಹಲಿಯಲ್ಲಿ ಸ್ಪೋಟಿಸಿದ್ದು ಬಾಂಬ್ ಅಲ್ಲ ಪಟಾಕಿ ಚೀಲ : ಓರ್ವ ಸಾವು, ಐವರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Delhi-Blast

ನವದೆಹಲಿ, ಅ.25-  ಗೋಣಿ ಚೀಲದಲ್ಲಿದ್ದ ಪಟಾಕಿ ಸ್ಫೋಟದಿಂದ ಯುವಕನೊಬ್ಬ ದುರಂತ ಸಾವಿಗೀಡಾದ ಘಟನೆ ಉತ್ತರ ದೆಹಲಿಯ ನಯಾ ಬಜಾರ್ ಪ್ರದೇಶದ ಚಾಂದಿನಿಚೌಕ್ ನಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಸ್ಫೋಟದಿಂದಾಗಿ ಕೆಲಕಾಲ ಈ ಪ್ರದೇಶದಲ್ಲಿ ಆತಂಕ ಮತ್ತು ಗೊಂದಲದ ವಾತಾವರಣ ನಿರ್ಮಾನವಾಗಿತ್ತು. ಬೀಡಿ ಕಿಡಿಯಿಂದಾಗಿ ಪಟಾಕಿಗೆ ಬೆಂಕಿ ಹೊತ್ತಿಕೊಂಡು ಈ ದುರ್ಘಟನೆ ಸಂಭವಿಸಿತು. ಪಟಾಕಿ ಕೊಂಡೊಯ್ಯುತ್ತಿದ್ದ ಯುವಕನೊಬ್ಬ ಸ್ಫೋಟದಲ್ಲಿ ಮೃತಪಟ್ಟಿದ್ದಾನೆ.  ಸ್ಫೋಟದ ಸುದ್ಧಿ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.  ದೀಪಾವಳಿ ಹಬ್ಬದ ವೇಳೆ ಉಗ್ರಗಾಮಿಗಳ ದಾಳಿ ಭೀತಿ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin