ಪಶುಗಳ ಆರೋಗ್ಯದತ್ತ ಎಚ್ಚರವಿರಲಿ

ಈ ಸುದ್ದಿಯನ್ನು ಶೇರ್ ಮಾಡಿ

manju--hasana--cow

ಹಾಸನ, ಅ.25- ಪಶುಪಾಲನೆ ರೈತಾಪಿ ವರ್ಗದ ಪ್ರಮುಖ ಆರ್ಥಿಕ ಮೂಲವಾಗಿ ಪರಿವರ್ತನೆಗೊಂಡಿದ್ದು ಅವುಗಳ ಆರೋಗ್ಯದ ಬಗ್ಗೆಯೂ ಎಚ್ಚರ ವಹಿಸುವ ಅಗತ್ಯವಿದೆ ಎಂದು ರೇಷ್ಮೆ, ಪಶುಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ತಿಳಿಸಿದ್ದಾರೆ. ಪಶುಪಾಲನಾ ಇಲಾಖೆ ವರ್ಷಕ್ಕೆ ಎರಡು ಬಾರಿ ಕಾಲು ಬಾಯಿ ರೋಗಕ್ಕೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ರೈತರು ಇದರ ಅನುಕೂಲ ಪಡೆದುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.ನವೆಂಬರ್ 20ರವರೆಗೆ 11 ನೇ ಸುತ್ತಿನ ಕಾಲು ಮತ್ತು ಬಾಯಿ ಜ್ವರ ರೋಗದ ವಿರುದ್ಧ ಸಾಮೂಹಿಕ ರೋಗ ನಿರೋಧಕ ಲಸಿಕೆ ಹಾಕುವ ರಾಜ್ಯ ಮಟ್ಟದ ಕಾರ್ಯಕ್ರಮ ಚನ್ನರಾಯಪಟ್ಟಣ ತಾಲ್ಲೂಕಿನ ಜಂಬೂರಿನಲ್ಲಿ ಉದ್ಘಾಟಿಸಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಜಾನವಾರುಗಳ ಆರೋಗ್ಯ ಸಂರಕ್ಷಣೆಗೆ ಪಶುಪಾಲನಾ ಇಲಾಖೆ ಹಲವು ಯೋಜನೆಗಳನ್ನು ರೂಪಿಸಿದೆ ಎಂದರು.

ಜಿಲ್ಲೆಯಲ್ಲಿ ಬರಗಾಲದ ಪರಿಸ್ಥಿತಿ ಇದ್ದು ದನಕರುಗಳ ಕುಡಿಯುª ನೀರು ಮತ್ತು ಮೇವಿಗೆ ಯಾವುದೇ ಕೊರತೆ ಉಂಟಾಗದಂತೆ ಮುಂಜಾಗ್ರತೆ ಕ್ರಮವಹಿಸಲು ಸೂಚಿಸಲಾಗಿದೆ ಎಂದರು.ಕೆಎಂಎಫ್ ಹಾಲಿಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೆಂದ್ರ ಹೆಗ್ಗಡೆಯವರು ರಾಯಬಾರಿಯಾಗಿ ಮುಂಬೈನ ಮಾರುಕಟ್ಟೆಗೆ ಹಾಲಿನ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಧರ್ಮಸ್ಥಳ ಗ್ರ್ರಾಮೀಣಾಭಿವೃದ್ಧಿ ಸಂಘಗಳ ಮೂಲಕ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಯಾಗುತ್ತಿರುವುದು ಶ್ಲಾಘನೀಯ ಎಂದರು.ಶಾಸಕ  ಸಿ.ಎನ್.ಬಾಲಕೃಷ್ಣ ಮಾತನಾಡಿ, ಹೈನುಗಾರಿಕೆ ಜಿಲ್ಲೆಯಲ್ಲಿ ಪ್ರಮುಖ ಆರ್ಥಿಕ ಆದಾಯ ಮೂಲವಾಗಿದೆ ಚನ್ನರಾಯಪಟ್ಟಣ ತಾಲ್ಲೂಕಿನಲ್ಲ್ಲಿ ಪ್ರತಿನಿತ್ಯ 1.50 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದ್ದು 10 ಕೋಟಿ ರೂ.ಗಳ ಆರ್ಥಿಕ ವಹಿವಾಟು ನಡೆದಿದೆ. ಜೊತೆಗೆ ಲೀಟರ್‍ಗೆ 4 ರೂ.ಗಳ ಸಹಾಯಧನ ಕೂಡ ನೀಡಲಾಗುತ್ತಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಮಾತನಾಡಿ, ನಮ್ಮ ಜಿಲ್ಲೆಯ ಬೈಲು ಸೀಮೆಗೂ ಅನುಕೂಲ ಪಡೆಯುವಂತಾಗಬೇಕು ನೆನಗುದಿಗೆ ಬಿದ್ದಿರುವ ಯೋಜನೆಗಳ ಅನುಷ್ಠಾನ ಶೀಘ್ರ ಆಗಬೇಕು ಎಂದರು.ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಆಯುಕ್ತರಾದ ಎಸ್.ಶೇಖರ್, ನಿರ್ದೇಶಕರಾದ ಡಾ:ಮಹಮದ್ ಜಫ್ರುಲ್ಲಾಖಾನ್, ತಾ:ಪಂ.ಅಧ್ಯಕ್ಷರಾದ ಸೌಮ್ಯ ಚಂದ್ರೇಗೌಡ, ಜಿ.ಪಂ.ಸದಸ್ಯರಾದ ಮಂಜುಳಾ ಶಂಕರ್, ಶ್ರೇಯಸ್ ಪಟೇಲ್, ಗ್ರಾ.ಪಂ.ಅಧ್ಯಕ್ಷರಾದ ಸುಕನ್ಯ ತಿಮ್ಮೇಗೌಡ, ತಾ:ಪಂ.ಸದಸ್ಯರಾದ ರತ್ನಮ್ಮ ಪ್ರಸನ್ನಕುಮಾರ್, ಮಂಜೇಗೌಡ, ಮೂಲ ಸೌಕರ್ಯ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷರಾದ ಸಿ.ವಿ.ರಾಜಪ್ಪ, ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಗೋಪಾಲಯ್ಯ, ಪಶುಪಾಲನಾ ಇಲಾಖೆ ಉಪನಿರ್ದೇಶಕರಾದ ಡಾ:ಧರ್ಮಪ್ಪ, ಕಬ್ಬಳಿ ರಂಗೇಗೌಡರು ಮತ್ತಿತರರು ಹಾಜರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin