ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ : ನಂದೀಶ್

ಈ ಸುದ್ದಿಯನ್ನು ಶೇರ್ ಮಾಡಿ

gubbi

ಗುಬ್ಬಿ, ಅ.25- ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ರಾಜ್ಯದಲ್ಲಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಬಿಜೆಪಿ ವಿಶೇಷ ಕಾರ್ಯಕಾರಣಿ ರಾಜ್ಯ ಸಂಚಾಲಕ ಎಂ.ಬಿ.ನಂದೀಶ್ ಕರೆ ನೀಡಿದರು. ತಾಲೂಕಿನ ನಿಟ್ಟೂರು ಹೋಬಳಿ ಕುಂದರನಹಳ್ಳಿಯಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷ ರಾಜ್ಯದಲ್ಲಿ ಅಧಿಕಾರ ನಡೆಸಿದ ಸಂದರ್ಭದಲ್ಲಿ ಜನಸಾಮಾನ್ಯರ ಸರ್ವತೋಮುಖ ಅಭಿವೃದ್ಧ್ದಿಗೆ ಹಲವಾರು ಮಹತ್ವದ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಮಹತ್ವದ ಸಾಧನೆ ಮಾಡಿದೆ ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಮೂಲಕ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಪಕ್ಷದ ಕಾರ್ಯಕರ್ತರು ಸಂಘಟಿತ ಹೋರಾಟ ಮಾಡಬೇಕೆಂದು ತಿಳಿಸಿದರು.

ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಹೆಚ್.ಟಿ.ಭೈರಪ್ಪ ಮಾತನಾಡಿ, ಈವರೆಗೆ ತಾಲ್ಲೂಕಿನಲ್ಲಿ 13 ಕಾರ್ಯಕರ್ತರ ಸಭೆಗಳನ್ನು ನಡೆಸುವ ಮೂಲಕ ಪಕ್ಷವನ್ನು ಸಂಘಟನಾತ್ಮಕವಾಗಿ ಸದೃಢಗೊಳಿಸುವತ್ತ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ತಳಮಟ್ಟದಿಂದ ಕಾರ್ಯಕರ್ತರು ಪಕ್ಷದಲ್ಲಿ ದುಡಿದಿರುವ ನಾಯಕರ ಬಗ್ಗೆ ಮಾತನಾಡುವುದನ್ನು ಬಿಟ್ಟು ಒಕ್ಕೊರಲಿನಿಂದ ಒಗ್ಗೂಡಿಸಿಕೊಂಡು ಹೋದರೆ ನಾವು ಸಹ ಕೈ ಜೋಡಿಸುತ್ತೇವೆ ಎಂದು ತಿಳಿಸಿದರು. ಮುಖಂಡ ಎಸ್.ಡಿ.ದಿಲೀಪ್‍ಕುಮಾರ್ ಮಾತನಾಡಿ, ಬಿಎಸ್‍ವೈ ನೇತೃತ್ವದಲ್ಲಿ ಬಿಜೆಪಿ ಪಕ್ಷವನ್ನು ಸಂಘಟನಾತ್ಮಕವಾಗಿ ಬಲಗೊಳಿಸಲು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದರು.ಗುಬ್ಬಿ ಮಂಡಲ ಅಧ್ಯಕ್ಷ ಗಂಗಣ್ಣ, ತಾಪಂ ಸದಸ್ಯ ಕೆಂಪರಾಜು, ರಾಜಣ್ಣ, ಗ್ರಾಮ ಪಂಚಾಯ್ತಿ ಅಧ್ಯಕ್ಷ ನರಸಿಂಹಯ್ಯ, ಉಪಾಧ್ಯಕ್ಷರಾದ ಉಮೇಶ್, ಚನ್ನಕೇಶವಮೂರ್ತಿ, ತುರುವೆಕೆರೆ ಮಾಜಿ ಮಂಡಲ ಅಧ್ಯಕ್ಷೆ ಮಮತಾ, ಕೆ.ಪಿ.ಮಹೇಶ್ ಮುಖಂಡರಾದ ಕಾರೆಕುರ್ಚಿ ಸತೀಶ್, ಮೋಹನ್, ಗಿರೀಶ್, ಯೋಗಿಶ್, ಸಿದ್ದಲಿಂಗಪ್ರಸಾದ್, ಬಿ.ಎಸ್.ಪ್ರಸಾದ್, ಬಿ.ಲೋಕೇಶ್, ಹರೀಶ್ ಸೇರಿದಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin