ವೈಭವದ 15ನೇ ವರ್ಷದ ಸಾಮೂಹಿಕ ವಿಜಯದಶಮಿ ದಸರಾ ಉತ್ಸವ

ಈ ಸುದ್ದಿಯನ್ನು ಶೇರ್ ಮಾಡಿ

raviguruji
ಕನಕಪುರ, ಅ.25-
ಪಟ್ಟಣದಲ್ಲಿ 15ನೇ ವರ್ಷದ ಸಾಮೂಹಿಕ ವಿಜಯದಶಮಿ ದಸರಾ ಉತ್ಸವವು ನಿನ್ನೆ ವೈಭವಯುತವಾಗಿ ನಡೆಯಿತು.
ತಾಲ್ಲೂಕು ಕಚೇರಿ ಮುಂಭಾಗದ ಬನ್ನಿ ಮರಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಬಳಿಕ ಬ್ರಹ್ಮಶ್ರೀ ಡಾ. ಆನಂದ್‍ಗುರೂಜಿ, ಮುಮ್ಮಡಿ ನಿರ್ವಾಣಸ್ವಾಮಿ, ಜಗದೀಶ್ವರ ಶಿವಚಾರ್ಯಸ್ವಾಮಿ, ಮೃತ್ಯುಂಜಯ ಸ್ವಾಮೀಜಿಗಳು ದಸರ ಮಹೋತ್ಸವದ ಭವ್ಯ ಮೆರವಣಿಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಜಾನಪದ ಕಲಾಪ್ರಕಾರಗಳಾದ ನಂದಿಕುಣಿತ, ಬಸವ, ಪೂಜಕುಣಿತ, ಚಂಡಿನಗಾರಿ, ವೀರಗಾಸೆನೃತ್ಯ, ಡೊಳ್ಳುಕುಣಿತ, ಸೋಮನಕುಣಿತ, ಕೀಲುಕುದರೆ, ಬಸವನನೃತ್ಯ, ಕೋಲಾಟ, ಗೊರವರ ಕುಣಿತ, ನಮಿಲುನೃತ್ಯ, ಗಾರುಡಿಗೊಂಬೆ, ಎತ್ತರದ ಮನುಷ್ಯ, ವೀರಬಾಹು, ಮಹಿಷಿ, ದಿಂಗುರಿ, ಪಾಳೇಗಾರವೇಷ, ಹುಲಿವೇಷ, ದೊಣ್ಣೆವರಸೆ, ಕತ್ತಿವರಸೆ, ವಿವಿಧ ವೇಷಭೂಷಣ, ವಿವಿಧ ದೇವತೆಗಳ ಪಲ್ಲಕ್ಕಿ

ಉತ್ಸವಗಳು ಹಾಗು ವಿಶೇಷವಾಗಿ ಅಲಂಕೃತಗೊಂಡಿದ್ದ ಬೆಳ್ಳಿ ರಥದಲ್ಲಿ ಚಾಮುಂಡೇಶ್ವರಿ ದೇವಿಯ ಪ್ರತಿಮೆಯನು ಸಾವಿರಾರು ಮಂದಿ ವೀಕ್ಷಿಸಿ ಮನಸೂರೆಗೊಂಡರು. ಈ ಸಂದರ್ಭದಲ್ಲಿ ಬಿಸಿಲಿನ ತಾಪಕ್ಕೆ ನೆರೆದಿದ್ದ ಜನರಿಗೆ ನೀರುಮಜ್ಜಿಗೆ, ಪಾನಕ ನೀಡಲಾಯಿತು. ದಕ್ಷಿಣ ಮಧ್ಯ ಕ್ಷೇತ್ರದ ಪ್ರಜ್ಞಾನ ಪ್ರವಾಹ ಸಂಯೋಜಕ ರಘುನಂದನ್, ಪಿ.ಎಲ್.ಮಹದೇವಸ್ವಾಮಿ, ಹೆಚ್,ಆರ್.ಕೃಷ್ಣಪ್ಪ, ವೆಂಕಟೇಶ್, ನಾಗನಂದ್, ಭಗತ್‍ರಾಮು, ಬಿ,ನಾಗರಾಜು, ಸಮಿತಿಯ ಕಾರ್ಯದರ್ಶಿ ವೆಂಕಟೇಶ್, ಖಜಾಂಚಿ, ಮಿಲ್ಟ್ರಿರಾಮಣ್ಣ, ಮುಖಂಡರಾದ ಎ.ಪಿ.ಕೃಷ್ಣಪ್ಪ, ಕೆ.ಎನ್.ಆನಂದ್, ಕೆಂಪಣ್ಣ, ಹೆಚ್.ಎಸ್. ಕೃಷ್ಣಪ್ಪ, ನಾ.ಚಿ.ನಾಗರಾಜು ಭಾಗವಹಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin