ಅಮಾಯಕ ಪುರುಷರ ಮೇಲೆ ಮಹಿಳೆಯರೇ ದೌರ್ಜ್ಯನ್ಯವೆಸಗುತ್ತಿದ್ದಾರಂತೆ ..!
ಬೆಂಗಳೂರು. ಅ.26- ಮಹಿಳೆಯರೇ ಪುರುಷರನ್ನು ನಿಂದನೆ ಮಾಡಿದರೂ ಪುರುಷರನ್ನು ಬೊಟ್ಟು ಮಾಡಿ ತೋರಿಸುತ್ತಾರೆ. ಕೌಟುಂಬಿಕ ಸಮಸ್ಯೆ ಸೇರಿದಂತೆ ನಾನಾ ಪ್ರಕರಣಗಳಲ್ಲಿ ಪುರುಷರನ್ನು ಆರೋಪಿಯನ್ನಾಗಿ ಮಾಡಲಾಗುತ್ತಿದೆ ಎಂದು ಶೇವ್ ಇಂಡಿಯನ್ ಫ್ಯಾಮಿಲ್ ಸಂಸ್ಥೆ ತಿಳಿಸಿದೆ.ಭಾರತ ಸರ್ವೋಚ್ಛ ನ್ಯಾಯಾಲಯದಲ್ಲಿ ಕೌಟುಂಬಿಕ ಹಿಂಸೆ ಕಾನೂನು ಮಾರ್ಪಾಡೆಯು ಇನ್ನೂ ಬದಲಾವಣೆ ಆಗಿಲ್ಲ. 10 ವರ್ಷಗಳಿಂದಲೂ ಸುಪ್ರೀಂಕೋರ್ಟ್ನಲ್ಲಿ ಕಾನೂನು ತಿದ್ದುಪಡಿ ಬಗ್ಗೆ ವಿಚಾರಣೆ ನಡೆಯುತ್ತಿದೆ. ಆದರೆ ಪರಿಹಾರ ಮಾತ್ರ ಸಿಕ್ಕಿಲ್ಲ. ಹೀಗಾಗಿ ಎಷ್ಟೋ ಪುರುಷರು ತನ್ನ ಪತ್ನಿಯಿಂದಲೇ ಹಿಂಸೆ, ಕಿರುಕುಳ ನೀಡಿರುವ ಪ್ರಕರಣಗಳಿಲ್ಲಿ ಏನೂ ತಪ್ಪದ ಮಾಡದ ಅಮಾಯಕ ಪುರುಷರು ಶಿಕ್ಷೆಗೆ ಗುರಿಯಾಗುತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆ ಅಧ್ಯಕ್ಷ ಪ್ರಶಾಂತ್ ಉವದ್ರತ್ ತಿಳಿಸಿದ್ದಾರೆ.
ಕೌಟುಂಬಿಕ ದೌರ್ಜನ್ಯ ಹೆಸರಿನಲ್ಲಿ ಅಮಾಯಕ ಪುರುಷರ ಮೇಲೆ ಪ್ರಕರಣಗಳು ದಾಖಲಾಗಿವೆ. ಅಂತಹ ಪುರುಷರ ಪರವಾಗಿ ನಮ್ಮ ಸಂಸ್ಥೆಯೂ ನಿರಂತರವಾಗಿ ಅವರ ಪರವಾಗಿ ಹೋರಾಟ ಮಾಡುತ್ತಿದೆ ಎಂದು ಎಂದು ಹೇಳಿದರು.ಕೌಟುಂಬಿಕ ಪ್ರಕರಣಗಳಲ್ಲಿ ಕಾನೂನು ಪ್ರಕಾರ ಪುರುಷರಿಗೆ ಶಿಕ್ಷೆ ಆಗುತ್ತೆ, ಆದರೆ ವಾಸ್ತಾವಂಶ ಬೇರೆಯದೇ ಆಗಿರುತ್ತೆ. ಇಂತಹ ಪ್ರಕರಣಗಳಲ್ಲಿ ಪುರುಷರು ಬಲಿಯಾಗುತ್ತಿದ್ದಾರೆ. ಹೀಗಾಗಿ ಈ ಕುರಿತು ಕಾನೂನು ತಿದ್ದುಪಡಿಯಾಗಬೇಕು ಎಂದು ಅವರು ಹೇಳಿದರು.ಗೋಷ್ಠಿಯಲ್ಲಿ ಸಂಸ್ಥೆಯ ಸದಸ್ಯರಾದ ಶೇಖರ್ಂ ಗಳ್, ಸುಜಿತ್ ದೇಶಪಾಂಡೆ ಉಪಸ್ಥಿತರಿದ್ದರು.
► Follow us on – Facebook / Twitter / Google+