ಜೆಎನ್‍ಯು ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ನಿಗೂಢ ಸಾವು, ಡೆತ್‍ನೋಟ್ ಪತ್ತೆಯಾಗಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

JNU

ನವದೆಹಲಿ,ಅ.26- ರಾಷ್ಟ್ರ ರಾಜಧಾನಿಯಲ್ಲಿರುವ ಪ್ರತಿಷ್ಠಿತ ಜವಹಾರ್ ಲಾಲ್ ನೆಹರು(ಜೆಎನ್‍ಯು) ವಿಶ್ವವಿದ್ಯಾಲಯವು ದಿನಕ್ಕೊಂದು ಗೊಂದಲದ ಗೂಡಾಗಿ ಪರಿಣಮಿಸಿದೆ.
ಅ.15ರಂದು ಹಾಸ್ಟೆಲ್‍ನಲ್ಲಿ ಉಂಟಾದ ಗಲಾಟೆಯಿಂದಾಗಿ ವಿದ್ಯಾರ್ಥಿ ನಜೀಂ ಅಹಮದ್ ನಾಪತ್ತೆಯಾಗಿದ್ದರಿಂದ ವಿವಾದ ಸೃಷ್ಟಿಯಾಗಿತ್ತು. ಇದರ ಬೆನ್ನೆಲ್ಲೇ ಮತ್ತೊಬ್ಬ ಸಂಶೋಧನಾ ವಿದ್ಯಾರ್ಥಿ ಹಾಸ್ಟೆಲ್‍ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು ಜೆಎನ್‍ಯು ಮತ್ತೆ ವಿವಾದದಲ್ಲಿ ಸಿಲುಕಿಕೊಂಡಿದೆ.

ಮಣಿಪುರ ರಾಜ್ಯದ ಸೇನಾಪತಿ ಜಿಲ್ಲೆಯ ಜೆಆರ್ ಫಿಲಮೆನ್ ರಾಜ್ ಮೃತದೇಹ ಬ್ರಹ್ಮಪುತ್ರ ಹಾಸ್ಟೆಲ್ ಪತ್ತೆಯಾಗಿದೆ. ಫಿಲಮೆನ್ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ. ಮಂಗಳವಾರ ಸಂಜೆ ರೂಮಿನಿಂದ ದುರ್ವಾಸನೆ ಬರುತ್ತಿದ್ದರಿಂದ ಪಕ್ಕದ ರೂಮ್‍ನಲ್ಲಿರುವ ವಿದ್ಯಾರ್ಥಿಗಳು ಕೂಡಲೇ ವಿವಿ ಸಿಬ್ಬಂದಿ ವಿಷಯ ಮುಟ್ಟಿಸಿದರು. ನಂತರ ಸ್ಥಳಕ್ಕಾಗಮಿಸಿದ ಪೆÇಲೀಸರು ಕೂಡಲೇ ರೂಮಿನ ಬಾಗಿಲು ಒಡೆದು ನೋಡಿದಾಗ ಫಿಲಮೆನ್ ದೇಹ ಪತ್ತೆಯಾಗಿದೆ.

ಡೆತ್‍ನೋಟ್ ಪತ್ತೆಯಾಗಿಲ್ಲ:

ಜೆಎನ್‍ಯು ಸಂಶೋಧನಾ ವಿದ್ಯಾರ್ಥಿ ಜೆ.ಆರ್.ಫಿಲಮೆನ್ ನಿಗೂಢ ಸಾವಿನ ಬಗ್ಗೆ ಡೆತ್‍ನೋಟ್ ಪತ್ತೆಯಾಗಿಲ್ಲ. ಅತಿಯಾದ ಮದ್ಯಪಾನದಿಂದ ಮೃತಪಟ್ಟಿರಬಹುದು. ಮೃತದೇಹದ ಮೇಲೆ ಯಾವುದೇ ಗುರುತು ಪತ್ತೆಯಾಗಿಲ್ಲ ಎಂದು ಉಪಪೆÇಲೀಸ್ ಆಯುಕ್ತ ಈಶ್ವರ್ ಸಿಂಗ್ ತಿಳಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin