ನೂರಾರು ಲೀಟರ್ ಹಳೆಯ ಮದ್ಯ ನಾಶ

ಈ ಸುದ್ದಿಯನ್ನು ಶೇರ್ ಮಾಡಿ

ಹುಣಸೂರು, ಅ.26- ಅಬಕಾರಿ ನಿರೀಕ್ಷಕರ ಕಚೇರಿಯ ಸಂಗ್ರಹಣ ಕೊಠಡಿಯ ಮುಂದಿನ ಪ್ರಾಂಗಣದಲ್ಲಿ ನೂರಾರು ಲೀಟರ್ ಹಳೆಯ ಮದ್ಯಗಳನ್ನು ನಾಶಪಡಿಸಲಾಯಿತು.ಮುದ್ದೇಮಾಲುಗಳನ್ನು ನಾಶಪಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 139 ಪ್ರಕರಣಗಳಲ್ಲಿ ಒಟ್ಟು 444.90 ಲೀ . ಮದ್ಯ 23.5 ಲೀ ಬಿಯರ್, 255 ಲೀ ಸೇಂದಿಯನ್ನು ತಹಶೀಲ್ದಾರ್ ಮೋಹನ್ ಹಾಗೂ ಅಬಕಾರಿ ಅಧೀಕ್ಷಕ ರಮೇಶ್ ನೇತೃತ್ವದಲ್ಲಿ ನಾಶಪಡಿಸಲಾಯಿತು. ಅಬಕಾರಿ ಇನ್ಸ್‍ಪೆಕ್ಟರ್‍ಗಳಾದ ಧರಣಿಕುಮಾರ್, ವಂಕಟೇಶ್, ಎಸ್‍ಐ ಜಯಕೃಷ್ಣ, ಎಸ್‍ಐ ಲೋಕೇಶ್, ಮಂಜುನಾಥ್, ರಾಘವೇಂದ್ರ, ರಫೀಕ್, ಶಿವಕುಮಾರ್ ಹಾಗೂ ಇತರರು ಹಾಜರಿದ್ದರು.

ಅಧಿಕಾರ ಹಸ್ತಾಂತರ: ಉಪವಿಭಾಗದ ನೂತನ ಅಬಕಾರಿ ಉಪ ಅಧೀಕ್ಷಕರಾಗಿ ವರ್ಗಾವಣೆಗೊಂಡ ರಮೇಶ್‍ರವರಿಗೆ ಹಿಂದೆ ಅಬಕಾರಿ ಉಪ ಅಧೀಕ್ಷಕರಾಗಿ ಸೇವೆ ಸಲ್ಲಿಸಿದ ಗಂಗಾಧರ್ ಮುದೆಣ್ಣವರ್ ರವರು ಕಡತಗಳನ್ನು ನೀಡಿ ಅಧಿಕಾರ ಹಸ್ತಾಂತರಿಸಿದರು. ರಮೇಶ್‍ರವರು ಮೈಸೂರಿನ ಡಿ.ಸಿ ಕಚೇರಿಯಲ್ಲಿ ಕಾರ್ಯನಿರ್ವಹಿಸಿ ಹುಣಸೂರಿಗೆ ವರ್ಗಾವಣೆಗೊಂಡಿದ್ದರೆ, ಗಂಗಾಧರ್ ರವರು ಹುಣಸೂರಿನಲ್ಲಿ ಸೇವೆ ಸಲ್ಲಿಸಿ ಚಾಮರಾಜನಗರಕ್ಕೆ ವರ್ಗಾವಣೆಗೊಂಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin