ನಿತ್ರಾಣನಾಗಿದ್ದ ‘ಸಿದ್ದ’ನ ಆರೋಗ್ಯದಲ್ಲಿ ಚೇತರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Sidda-elepphant

ರಾಮನಗರ,ಅ.27-ಕಾಲುವೆಗೆ ಬಿದ್ದು ಕಾಲು ಮುರಿದುಕೊಂಡು ಅಸ್ವಸ್ಥನಾಗಿದ್ದ ಆನೆ ಸಿದ್ದನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಮಂಚಿನಬೆಲೆ ಡ್ಯಾಮ್ ಬಳಿ ಕೆಲ ದಿನಗಳ ಹಿಂದೆ ಕಾಲುವೆಗೆ ಬಿದ್ದು ಬಲಗಾಲು ಮುರಿದುಕೊಂಡು ಸುಮಾರು 50ಕ್ಕೂ ಹೆಚ್ಚು ದಿನಗಳಿಂದ ನರಳುತ್ತಿದ್ದ ಸಿದ್ದನಿಗೆ ಗ್ರಾಮಸ್ಥರ ಸಹಾಯದಿಂದ ರಾಗಿ ಹೊಲವೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಪ್ರಾರಂಭದಲ್ಲಿ ಸಿದ್ದ ಚಿಕಿತ್ಸೆ ಸ್ಪಂದಿಸದೆ ವಾಂತಿ ಮಾಡಿಕೊಂಡಿದ್ದು, ನಿಲ್ಲಲ್ಲು ಆಗದೆ ಪರಿತಪಿಸುತ್ತಿದ್ದನ್ನು. ಆದರೆ ಇಂದು ಸಿದ್ದನ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ರಾತ್ರಿಯಿಂದ ನೀರು ಮತ್ತು ಜೋಳ ಸೇವನೆ ಮಾಡಿದ್ದಾನೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin