ಗಡಿಯಲ್ಲಿ ಮುಂದುವರಿದ ಪಾಕಿಗಳ ಪುಂಡಾಟ ; ಭಾರತೀಯ ಯೋಧರಿದ ಪ್ರತ್ಯುತ್ತರ

ಈ ಸುದ್ದಿಯನ್ನು ಶೇರ್ ಮಾಡಿ

Firing-In-border

ಜಮ್ಮು, ಅ.28-ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನಿ ರೇಂಜರ್‍ಗಳ ಪುಂಡಾಟ ಮುಂದುವರಿದಿದೆ. ಭಾರತೀಯ ಸೇನಾ ನೆಲೆಗಳು ಮತ್ತು ಗಡಿ ಗ್ರಾಮಗಳನ್ನು ಗುರಿಯಾಗಿಟ್ಟುಕೊಂಡು ಪಾಕಿಗಳು ಮುಂದುವರಿಸಿರುವ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಬಾಲಕಿಯೊಬ್ಬಳು ಸೇರಿದಂತೆ ಹಲವು ಗ್ರಾಮಸ್ಥರು ಗಾಯಗೊಂಡಿದ್ದಾರೆ. ಇದೇ ವೇಳೆ ಕದನ ವಿರಾಮ ಉಲ್ಲಂಘಿಸಿದರೆ ಸೂಕ್ತ ಪ್ರತ್ಯುತ್ತರ ನೀಡುವಂತೆ ಗೃಹ ಸಚಿವ ರಾಜನಾಥ್ ಸಿಂಗ್ ಬಿಎಸ್‍ಎಫ್ ಮುಖ್ಯಸ್ಥರಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.  ಜಮ್ಮು ಜಿಲ್ಲೆಯ ರಜೌರಿಯ ಸುಂದರ್‍ಬನಿ, ನೌಶೀರಾ ಮತ್ತು ಪಲಾನ್‍ವಾಲಾ ಸೆಕ್ಟರ್‍ನಲ್ಲಿ ನಿನ್ನೆ ರಾತ್ರಿಯಿಡಿ ಪಾಕಿಸ್ತಾನಿ ಯೋಧರು ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿದರು. ಕತುವಾ ಜಿಲ್ಲೆ ಅಂತಾರಾಷ್ಟ್ರೀಯ ಗಡಿ ಬಳಿಯೂ ಪಾಕ್ ಕ್ಯಾತೆ ತೆಗೆದಿದೆ. ಇನ್ನೂ ಕೆಲವು ಪ್ರದೇಶಗಳಲ್ಲಿ ಪಾಕಿನಿಂದ ಕದನ ವಿರಾಮಗಳು ನಿರಂತರವಾಗಿ ಉಲ್ಲಂಘನೆಯಾಗುತ್ತಿರುವ ವರದಿಗಳು ಬಂದಿವೆ. ಭಾರತೀಯ ಯೋಧರೂ ಸಹ ಪ್ರತಿ ದಾಳಿ ನಡೆಸಿ ಪಾಕಿಗಳ ಹುಟ್ಟಡಗಿಸುವ ಪರಾಕ್ರಮ ಮುಂದುವರಿಸಿದ್ದಾರೆ. ಇದರಿಂದ ಗಡಿ ಭಾಗದಲ್ಲಿ ಸಮರ ಸದೃಶ ವಾತಾವರಣ ಸೃಷ್ಟಿಯಾಗಿದೆ.

ಇದೇ ವೇಳೆ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಗಡಿ ಭದ್ರತಾ ಪಡೆ ಮುಖ್ಯಸ್ಥರ ಜೊತೆ ಮಾತನಾಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಅಪ್ರಚೋದಿತ ದಾಳಿಗೆ ದಿಟ್ಟ ಉತ್ತರ ನೀಡುವಂತೆ ಸೂಚನೆ ನೀಡಿದ್ಧಾರೆ.  ಅಂತಾರಾಷ್ಟ್ರೀಯ ಗಡಿಯಲ್ಲಿನ ಆರ್‍ಎಸ್ ಪುರ ಮತ್ತು ಅರ್ನಿಯಾ ಸೆಕ್ಟರ್‍ನಲ್ಲಿ 15 ಸೇನಾ ನೆಲೆಗಳು ಮತ್ತು 29 ಗ್ರಾಮಗಳ ಮೇಲೆ ಮೋರ್ಟಾರ್ ಬಾಂಬ್‍ಗಳು ಮತ್ತು ಸ್ವಯಂಚಾಲಿತ ಬಂದೂಕುಗಳಿಂದ ಮೊನ್ನೆ ಪಾಕಿಸ್ತಾನ ಯೋಧರು ದಾಳಿ ನಡೆಸಿದ್ದರು. ಗುಂಡೇಟಿನಿಂದ ತೀವ್ರ ಗಾಯಗೊಂಡ ಬಿಹಾರ್ ಮೋತಿಹಾರ್ ಜಿಲ್ಲೆಯ ಬಿಎಸ್‍ಎಫ್ ಯೋಧ ಜಿತೇಂದ್ರ ಕುಮಾರ್ ಹುತಾತ್ಮನಾಗಿದ್ದು, ಕೆಲವು ಗ್ರಾಮಸ್ಥರು ಗಾಯಗೊಂಡಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin