ಸಭಾಪತಿಗೆ ಬೋವಿ ಸಮುದಾಯದ ನಕಲಿ ಜಾತಿ ಪ್ರಮಾಣಪತ್ರ ಸಮಿತಿ ವರದಿ ಸಲ್ಲಿಕೆ

ಈ ಸುದ್ದಿಯನ್ನು ಶೇರ್ ಮಾಡಿ

 

bengaluru

ಬೆಂಗಳೂರು, ಅ.28-ಬೋವಿ ಸಮುದಾಯದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣಪತ್ರ ಪಡೆದು ವಂಚಿಸಿರುವ ಬಗ್ಗೆ ವರದಿ ನೀಡುವಂತೆ ಉಗ್ರಪ್ಪ ನೇತೃತ್ವದಲ್ಲಿ ರಚಿಸಿದ್ದ ಸದನ ಸಮಿತಿ ಇಂದು ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರಿಗೆ ವರದಿ ಸಲ್ಲಿಸಿತು.ನಂತರ ಮಾತನಾಡಿದ ಉಗ್ರಪ್ಪ, ಬೋವಿ ಮತ್ತು ಬೋಯಿ ಜನಾಂಗಕ್ಕೂ ವ್ಯತ್ಯಾಸವಿದೆ. ಬೋಯಿ ಜನಾಂಗದ ಹೆಸರಿನಲ್ಲಿ ಪ್ರಮಾಣ ಪತ್ರ ಪಡೆದು ಬೋವಿ ಜನಾಂಗದ ಮೀಸಲಾತಿಯನ್ನು ಪಡೆದಿರುವ ಬಗ್ಗೆ ವರದಿಯಾಗಿದೆ. ಬೋಯಿ ಜನಾಂಗ ಹಿಂದುಳಿದ ವರ್ಗದ ಪಟ್ಟಿಯಲ್ಲಿದೆ. ಆರ್ಥಿಕವಾಗಿ ಹಿಂದುಳಿದಿದೆ.

ಆದರೆ ಅಸ್ಪೃಶ್ಯ ಜಾತಿ ಪಟ್ಟಿಯಲ್ಲಿಲ್ಲ. ಕೆಲವರು ಈ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರ ಪಡೆದು ಸೌಲಭ್ಯಗಳನ್ನು ಪಡೆದಿರುವ ಬಗ್ಗೆ ಸದನ ಸಮಿತಿಯ ಗಮನಕ್ಕೆ ಬಂದಿರುವುದು ವರದಿ ನೀಡಲಾಗಿದೆ.ಬೋವಿ ಸಮುದಾಯ ಪರಿಶಿಷ್ಟ ಜಾತಿಗೆ ಸೇರಿದ್ದು, ನಕಲಿ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಶಿಫಾರಸ್ಸಿನಲ್ಲಿ ತಿಳಿಸಲಾಗಿದೆ. 1944ರಲ್ಲಿ ಬೋವಿ ಜನಾಂಗದವರು ದಾವಣಗೆರೆಯಲ್ಲಿ ಸಮಾವೇಶ ನಡೆಸಿದಾಗ 1945ರಲ್ಲಿ ಮೈಸೂರು ಮಹಾರಾಜರು ಇವರನ್ನು ಮೀಸಲಾತಿಗೆ ಒಳಪಡಿಸಿದ್ದರು ಎಂದು ಉಗ್ರಪ್ಪ ತಿಳಿಸಿದರು.ಐವಾನ್ ಡಿಸೋಜಾ, ಲಕ್ಷ್ಮಿನಾರಾಯಣ್, ಧರ್ಮಸೇನ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin