ಗಡಿಯಲ್ಲಿ ನಿಲ್ಲದ ಪಾಕ್ ಪುಂಡಾಟ ; ಇಂದು ಮತ್ತೊಬ್ಬ ಯೋಧ ಹುತಾತ್ಮ

ಈ ಸುದ್ದಿಯನ್ನು ಶೇರ್ ಮಾಡಿ

Border-Firing-01

ಜಮ್ಮು, ಅ.29-ಕಾಶ್ಮೀರ ಕಣಿವೆಯಲ್ಲಿ ಭಾರತೀಯ ಸೇನಾ ನೆಲೆಗಳು ಮತ್ತು ಗಡಿ ಗ್ರಾಮಗಳನ್ನು ಗುರಿಯಾಗಿಟ್ಟುಕೊಂಡು ಪಾಕಿಸ್ತಾನ ಯೋಧರು ಇಂದು ಕೂಡ ಮುಂದುವರಿಸಿರುವ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಮತ್ತೊಬ್ಬ ಯೋಧ ಹುತಾತ್ಮನಾಗಿದ್ದು, ಹಲವು ಗ್ರಾಮಸ್ಥರು ಗಾಯಗೊಂಡಿದ್ದಾರೆ.  ಕದನ ವಿರಾಮ ಉಲ್ಲಂಘಿಸುತ್ತಿರುವವರಿಗೆ ಸೂಕ್ತ ಪ್ರತ್ಯುತ್ತರ ನೀಡುವಂತೆ ಗೃಹ ಸಚಿವ ರಾಜನಾಥ್ ಸಿಂಗ್ ಬಿಎಸ್‍ಎಫ್ ಮುಖ್ಯಸ್ಥರಿಗೆ ಸ್ಪಷ್ಟ ಸೂಚನೆ ನೀಡಿ ನಂತರ ನಿನ್ನೆ ಗುಂಡಿನ ಚಕಮಕಿಯಲ್ಲಿ 15 ಪಾಕ್ ಯೋಧರು ಹತರಾಗಿದ್ದರು. ಇದರ ಬೆನ್ನೆಲ್ಲೇ ಇಂದು ಮತ್ತೆ ಪಾಕ್ ಪುಂಡಾಟಕ್ಕೆ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಮಚ್ಚಿಲ್ ಸೆಕ್ಟರ್‍ನಲ್ಲಿ ಬಿಎಸ್‍ಎಫ್ ಯೋಧ ಕೋಲಿ ನಿತಿನ್ ಸುಭಾಷ್ (28) ಹುತಾತ್ಮರಾಗಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿಯಾ ಸುಭಾಷ್ ಗುಂಡಿನ ಚಕಮಕಿಯಲ್ಲಿ ಇಂದು ಬೆಳಿಗ್ಗೆ ವೀರಮರಣ ಹೊಂದಿದರು.

ಜಮ್ಮು ಜಿಲ್ಲೆಯ ರಜೌರಿಯ ಸುಂದರ್‍ಬನಿ. ನೌಶೇರಾ, ಮಚ್ಚೀಲ್, ಮತ್ತು ಪಲಾನ್‍ವಾಲಾ ಸೆಕ್ಟರ್‍ನಲ್ಲಿ ನಿನ್ನೆ ರಾತ್ರಿಯಿಡಿ ಪಾಕಿಸ್ತಾನಿ ಯೋಧರು ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿದರು. ಕತುವಾ ಜಿಲ್ಲೆ ಅಂತಾರಾಷ್ಟ್ರೀಯ ಗಡಿ ಬಳಿಯೂ ಪಾಕ್ ಕ್ಯಾತೆ ಮುಂದುವರಿದಿದೆ. ಇನ್ನೂ ಕೆಲವು ಪ್ರದೇಶಗಳಲ್ಲಿ ಪಾಕಿನಿಂದ ಕದನ ವಿರಾಮಗಳು ನಿರಂತರವಾಗಿ ಉಲ್ಲಂಘನೆಯಾಗುತ್ತಿರುವ ವರದಿಗಳು ಬರುತ್ತಲೇ ಇವೆ. ಭಾರತೀಯ ಯೋಧರೂ ಸಹ ಪ್ರತಿ ದಾಳಿ ನಡೆಸಿ ಪಾಕಿಗಳ ಹುಟ್ಟಡಗಿಸುವ ಪರಾಕ್ರಮ ಮುಂದುವರಿಸಿದ್ದಾರೆ. ಇದರಿಂದ ಗಡಿ ಭಾಗದಲ್ಲಿ ಸಮರ ಸದೃಶ ವಾತಾವರಣ ಸೃಷ್ಟಿಯಾಗಿದ್ದು, ಉದ್ವಿಗ್ನ ವಾತಾವರಣ ತಲೆದೋರಿದೆ.

ಅಂತಾರಾಷ್ಟ್ರೀಯ ಗಡಿಯಲ್ಲಿನ ಪಾಕಿಸ್ತಾನ ಯೋಧರು ನಿನ್ನೆ ನಡೆಸಿದ್ದ ದಾಳಿಯಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟು ಹಲವರು ಗ್ರಾಮಸ್ಥರು ಗಾಯಗೊಂಡಿದ್ದರು.  ಮೊನ್ನೆ ಗುಂಡೇಟಿನಿಂದ ತೀವ್ರ ಗಾಯಗೊಂಡ ಬಿಹಾರ್ ಮೋತಿಹಾರ್ ಜಿಲ್ಲೆಯ ಬಿಎಸ್‍ಎಫ್ ಯೋಧ ಜಿತೇಂದ್ರ ಕುಮಾರ್ ಹುತಾತ್ಮನಾಗಿದ್ದು, ಕೆಲವು ಗ್ರಾಮಸ್ಥರು ಗಾಯಗಳಾಗಿದ್ದವು.

► Follow us on –  Facebook / Twitter  / Google+

Facebook Comments

Sri Raghav

Admin