ಪಾಕ್’ನ್ನು ಬಗ್ಗುಬಡಿದು ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಮುಡಿಗೇರಿಸಿಕೊಂಡ ಭಾರತ

ಈ ಸುದ್ದಿಯನ್ನು ಶೇರ್ ಮಾಡಿ

Hocky

ಕುಹಾನ್‍ಟನ್ (ಮಲೇಷಿಯಾ), ಅ.30- : ಭಾರತ ಹಾಕಿ ತಂಡ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯನ್ನು ಗೆದ್ದುಕೊಂಡಿದೆ. ಇಂದು ನಡೆದ ಫೈನಲ್’ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ 3-2 ಗೋಲುಗಳಿಂದ ರೋಚಕ ಗೆಲುವು ಪಡೆದಿದೆ. ರೂಪೀಂದರ್ ಪಾಲ್ ಸಿಂಗ್ ಸರ್ದಾರ್ ಸಿಂಗ್ ಮತ್ತು ನಿಕಿನ್ ತಿಮ್ಮಯ್ಯ ಗೋಲು ಗಳಿಸಿದರು. ಕೊಡಗಿನ ಕುವರ ನಿಕಿನ್ ತಿಮ್ಮಯ್ಯ ವಿಜಯದ ಗೋಲು ದಾಖಲಿಸಿದರು.  ಭಾರತ ತಂಡ ಪಾಕ್ ವಿರುದ್ಧ ಸತತ ಎರಡನೇ ಗೆಲುವು ಇದಾಗಿದೆ.

ನಿನ್ನೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಪಿ.ಆರ್.ಶ್ರೀಜೇಶ್ರ ಚುರುಕಿನ ಆಟದಿಂದ ದಕ್ಷಿಣ ಕೊರಿಯಾ ವಿರುದ್ಧ ಪೆನಾಲ್ಟಿ ಶೂಟೌಟ್ನಲ್ಲಿ ಗೆದ್ದು ಫೈನಲ್ ಹಂತಕ್ಕೇರಿತ್ತು. ಅಂತಿಮ ಕ್ಷಣದವರೆಗೂ ಕುತೂಹಲವನ್ನು ಮೂಡಿಸಿದ್ದ ಈ ಪಂದ್ಯದಲ್ಲಿ ಯಾವ ತಂಡವು ಜಯ ಸಾಧಿಸಲಿದೆ ಎಂಬು ನಿರ್ಧಾರವಾಗಲಿಲ್ಲ. ಆಟದ ಅಂತಿಮ ಕ್ಷಣದಲ್ಲಿ ಎರಡು ತಂಡವು 2-2 ರಿಂದ ಸಮಬಲ ಸಾಧಿಸಿತ್ತು. ಆಗ ಅಂಪೈರ್ಗಳು ಪೆನಾಲ್ಟಿ ಶೂಟೌಟ್ನ ಮೊರೆ ಹೋದಾಗ ಭಾರತ ತಂಡವು 5-4 ರಿಂದ ಗೆದ್ದು ಫೈನಲ್ ಹಂತಕ್ಕೆ ತಲುಪಿತ್ತು. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಮಲೇಷ್ಯಾ ವಿರುದ್ಧ 1-1 ರಿಂದ ಸಮಬಲ ಸಾಧಿಸಿದರೂ ಪೆನಾಲ್ಟಿ ಶೂಟೌಟ್ನಲ್ಲಿ 3-2 ಗೋಲುಗಳ ಅಂತರದಿಂದ ಫೈನಲ್ ಹಂತಕ್ಕೆ ತಲುಪಿತ್ತು. ರೌಂಡ್ ರಾಬಿನ್ನಲ್ಲಿ ಭಾರತ ತಂಡವು ಪಾಕಿಸ್ತಾನ ವಿರುದ್ಧ 2-1ರಿಂದ ಜಯಗಳಿಸಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin