ವಿದ್ಯಾರ್ಥಿಗಳಿಂದ ಯೋಧರಿಗೆ 40 ಸಾವಿರ ‘ದೀಪಾವಳಿ ಶುಭಾಶಯ’ ಪತ್ರಗಳು

ಈ ಸುದ್ದಿಯನ್ನು ಶೇರ್ ಮಾಡಿ

40-k-letters

ಬೆಂಗಳೂರು, ಅ.30- ಕಾಲೇಜು ವಿದ್ಯಾರ್ಥಿಗಳು ಯೋಧರಿಗಾಗಿ ಸಿದ್ಧಪಡಿಸಿದ 40 ಸಾವಿರ ದೀಪಾವಳಿ ಶುಭಾಶಯ ಪತ್ರಗಳನ್ನು ಕರ್ನಾಟಕ ಮತ್ತು ಕೇರಳ ಸಬ್ ಏರಿಯಾದ ಜನರಲ್ ಆಫೀಸರ್ ಕಮಾಂಡಿಂಗ್, ಮೇಜರ್ ಜನರಲ್ ಕೆ.ಎಸ್. ನಿಜ್ಜರ್ ಅವರಿಗೆ ಬೆಂಗಳೂರಿನಲ್ಲಿ ಹಸ್ತಾಂತರಿಸಲಾಯಿತು.  ಕರ್ನಾಟಕ ಮತ್ತು ಕೇರಳ ಸಬ್ ಏರಿಯಾ ಕೇಂದ್ರ ಕಚೇರಿಯಲ್ಲಿ ಏರ್ಪಟ್ಟ ಕಾರ್ಯಕ್ರಮದಲ್ಲಿ ನ್ಯೂ ಹೊರೈಜನ್ ಶೈಕ್ಷಣಿಕ ಸಂಸ್ಥೆಗಳ ಸಮೂಹಕ್ಕೆ ಸೇರಿದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಸಮೂಹದ ಅಧ್ಯಕ್ಷ ಡಾ. ಮೋಹನ್ ಮಂಘ್ನಾನಿ ಅವರ ನೇತೃತ್ವದಲ್ಲಿ ಆಕರ್ಷಕ ಶುಭಾಶಯ ಪತ್ರಗಳನ್ನು ಹಸ್ತಾಂತರಿಸಿದರು.
ವಿವಿಧ ವಿನ್ಯಾಸದಲ್ಲಿ ರಚಿಸಿರುವ ಈ ಶುಭಾಶಯ ಪತ್ರಗಳು ಯೋಧರಿಗೆ ಭಾವಪೂರ್ಣ, ಸೂರ್ತಿದಾಯಕ ಸಂದೇಶಗಳನ್ನು ಒಳಗೊಂಡಿವೆ.

ಸೇನಾಕಾರಿಗಳು ಹಾಗೂ ಯೋಧರಿಗೆ ಸಿಹಿ ಹಂಚಿ, ದೀಪಾವಳಿ ಹಬ್ಬದ ಶುಭಕೋರಿ ವಿದ್ಯಾರ್ಥಿಗಳು ಸಂಭ್ರಮಿಸಿದರು. ಮೇಜರ್ ಜನರಲ್ ಕೆ.ಎಸ್. ನಿಜ್ಜರ್ ಮಾತನಾಡಿ, ವಿದ್ಯಾರ್ಥಿಗಳು ಅತ್ಯುತ್ತಮ ಕಾರ್ಯ ಮಾಡಿದ್ದು, ಈ ಶುಭಾಶಯ ಪತ್ರಗಳನ್ನು ಸ್ವೀಕರಿಸುವುದು ದುರ್ಗಮ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಧರ ಪಾಲಿಗೆ ಅತ್ಯಂತ ಸಂತಸದ ಘಳಿಗೆಯಾಗಲಿದೆ ಎಂದರು.

ಶುಭಾಶಯ ಪತ್ರಗಳನ್ನು ಕೂಡಲೇ ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳ ಸೇನಾ ಘಟಕಗಳಿಗೆ ರವಾನಿಸಲಾಗುವುದು ಎಂದು ತಿಳಿಸಿದರು.
ನವದೆಹಲಿ, ಅ.30- ಶಾಂತಿ ಮತ್ತು ಸಾಮರಸ್ಯ ಪಸರಿಸಲು ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ (ಸಿಎಬಿಐ) ನವೆಂಬರ್ ಮೂರನೆಯ ವಾರದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಟಿ20 ವಿಶ್ವಕಪ್‍ಗೆ ಮುನ್ನ ಸ್ನೇಹಪೂರ್ವಕ ಪಂದ್ಯವನ್ನು ನಡೆಸಲು ಆಯೋಜಿಸಿದೆ.  ಇತ್ತೀಚಿನ ಟಿ-20 ಏಷ್ಯಾ ಕಪ್ ಟೂರ್ನಮೆಂಟ್ ಒಳಗೊಂಡು ಹಲವಾರು ಅಂತಾರಾಷ್ಟ್ರೀಯ ಟೂರ್ನಮೆಂಟ್‍ಗಳನ್ನು ಗೆದ್ದ ನಂತರ ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ (ಸಿಎಬಿಐ) ಅಧ್ಯಕ್ಷ ಮಹಾಂತೇಶ್ ಜಿ.ಕೆ. ತಿಳಿಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಪಂದ್ಯವನ್ನು ಆಯೋಜಿಸುತ್ತಿರುವ ಉದ್ದೇಶವೆನಂದರೆ ಭಾರತದ ಸೇನೆಯೊಂದಿಗೆ ಜಮ್ಮು ಮತ್ತು ಕಾಶ್ಮೀರದ ಜನರ ಒಗ್ಗಟ್ಟನ್ನು ತರುವ ಮೂಲಕ ಯುವಜನರಿಗೆ ಸ್ಥೈರ್ಯ ತುಂಬಲಿದೆ ಎಂದರು.

ಸಿಎಬಿಐ ಸರ್ಕಾರದ ಪ್ರತಿನಿಗಳು, ಭಾರತೀಯ ಸೇನೆ, ಜನಪ್ರತಿನಿಗಳು ಮತ್ತು ಜಮ್ಮು ಮತ್ತು ಕಾಶ್ಮೀರದ ಯುವಜನರನ್ನು ಒಳಗೊಂಡ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸುವಂತೆ ಅವರು ಕೋರಿದ್ದಾರೆ.  ಮಹಾಂತೇಶ್ ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರಿಕೆಟ್ ಪಂದ್ಯ ಆಚರಿಸಲು ಆಸಕ್ತಿ ವಹಿಸಬೇಕು. ವಿಶ್ವಕಪ್ 2017ರಲ್ಲಿ ಆಯೋಜಿಸಲು ಆರ್ಥಿಕ ನೆರವು ನೀಡಬೇಕು ಎಂದು ಮನವಿ ಮಾಡಿದರು.

► Follow us on –  Facebook / Twitter  / Google+

 

Facebook Comments

Sri Raghav

Admin