ಎನ್‍ಕೌಂಟರ್‍ನಲ್ಲಿ ಸತ್ತ ಸಿಮಿ ಉಗ್ರರು ಪರಾರಿಯಾಗಲು ಬಳಸಿದ್ದು ಟೂತ್‍ಬ್ರಷ್, ಕಟ್ಟಿಗೆಯ ಕೀಲಿ ಕೈ..!

ಈ ಸುದ್ದಿಯನ್ನು ಶೇರ್ ಮಾಡಿ

SIMI-01

ಭೋಪಾಲ್, ನ.1- ಸೆಂಟ್ರಲ್ ಜೈಲಿನಿಂದ ತಪ್ಪಿಸಿಕೊಂಡು ಎನ್‍ಕೌಂಟರ್‍ನಲ್ಲಿ ಹತರಾದ ನಿಷೇಧಿತ ಸಿಮಿ ಉಗ್ರಗಾಮಿ ಸಂಘಟನೆಯ ಎಂಟು ಉಗ್ರರು ಕಾರಾಗೃಹದಿಂದ ಪಾರಾಗಲು ಟೂತ್‍ಬ್ರಷ್ ಮತ್ತು ಮರದ ಕಟ್ಟಿಗೆಯಿಂದ ತಯಾರಿಸಿದ ಕೀಲಿ ಕೈಗಳನ್ನು ಬಳಸಿದ್ದ ಸಂಗತಿ ಬೆಳಕಿಗೆ ಬಂದಿದೆ.  ಈ ಖತರ್ನಾಕ್ ಉಗ್ರರು ಬಾರಕ್‍ನ ಬಾಗಿಲುಗಳನ್ನು ನಕಲಿ ಕೀ ಬಳಸಿ ತೆಗೆದು ನಂತರ ಜೈಲಿನ ವಾರ್ಡನ್ ರಾಮಶಂಕರ್ ಯಾದವ್‍ರ ಕುತ್ತಿಗೆಯನ್ನು ಸ್ಟೀಲ್ ತಟ್ಟೆ, ಚಮಚಗಳಿಂದ ಭಯಾನಕವಾಗಿ ಸೀಳಿ ಕೊಂದರು. ಮೊತ್ತೊಬ್ಬ ಸಿಬ್ಬಂದಿ ಚಂದನ್‍ಸಿಂಗ್‍ರನ್ನು ಕಟ್ಟಿ ಹಾಕಿದರು. ನಂತರ ಹೊದಿಕೆಯನ್ನೇ ಹಗ್ಗವನ್ನಾಗಿ ಮಾಡಿಕೊಂಡು ಭೋಪಾಲ್ ಸೆಂಟ್ರಲ್ ಜೈಲಿನ 25 ಅಡಿ ಎತ್ತರದ ಗೋಡೆಯನ್ನು ಏರಿ ಅಲ್ಲಿಂದ ಜಿಗಿದು ಪರಾರಿಯಾಗಿದ್ದರು ಎಂದು ಮಧ್ಯಪ್ರದೇಶ ಪೊಲೀಸ್ ಮಹಾ ನಿರೀಕ್ಷಕ ಯೋಗೇಶ್ ಚೌಧರಿ ತಿಳಿಸಿದ್ದಾರೆ.

ಈ ಜೈಲಿನಲ್ಲಿ ಒಟ್ಟು 29 ಸಿಮಿ ವಿಚಾರಣಾಧೀನ ಕೈದಿಗಳಿದ್ದರು. ಇವರನ್ನು ಒಟ್ಟು ಎರಡು ಬಾರಕ್‍ಗಳಲ್ಲಿ ಇಡಲಾಗಿತ್ತು. ಇವರಲ್ಲಿ 9 ಮಂದಿ ತಪ್ಪಿಸಿಕೊಂಡಿದ್ದರು. ಅವರು ನಾಪತ್ತೆಯಾದ ಒಂಭತ್ತು ಗಂಟೆಗಳಲ್ಲೇ ಪೊಲೀಸರ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ 8 ಸಿಮಿ ಉಗ್ರರು ಹತರಾದರು.  ಹತರಾದ ಎಂಟು ಮಂದಿಯಲ್ಲಿ ನಾಲ್ವರು ಬಾಂಬ್ ತಯಾರಿಕೆಯಲ್ಲಿ ಪರಿಣಿತಿ ಪಡೆದಿದ್ದರು. ಇವರೆಲ್ಲ ಬ್ಯಾಂಕ್ ದರೋಡೆ, ವಿಧ್ವಂಸಕ ಕೃತ್ಯ, ಭಯೋತ್ಪಾದನೆ ಪ್ರಚೋದನೆ ಸೇರಿದಂತೆ ಹತ್ತು ಹಲವು ಆರೋಪಗಳಲ್ಲಿ ಶಾಮೀಲಾಗಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin