ಪರಾಕ್ರಮ ಮೆರೆದ ಬಿಎಸ್‍ಎಫ್ : 35 ಪಾಕಿಗಳ ಹತ್ಯೆ, 5,000 ಮೋರ್ಟಾರ್ ಬಾಂಬ್, 35,000 ಬುಲೆಟ್ ಬಳಕೆ

ಈ ಸುದ್ದಿಯನ್ನು ಶೇರ್ ಮಾಡಿ

BSF-001

ನವದೆಹಲಿ, ನ.1- ಕಾಶ್ಮೀರ ಕಣಿವೆಯಲ್ಲಿ ನಿರಂತರ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸುತ್ತಿರುವ ಪಾಕಿಸ್ತಾನಿ ರೇಂಜರ್‍ಗಳಿಗೆ ಈಗಾಗಲೇ ಬಿಸಿ ಮುಟ್ಟಿಸಿರುವ ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಯೋಧರು ಕಳೆದ 11 ದಿನಗಲ್ಲಿ ಪಾಕ್ ಸೈನಿಕಲರನ್ನು ಹಿಮ್ಮೆಟ್ಟಿಸಿದ್ದಾರೆ. ಅಲ್ಲದೇ ಇದೇ ಸಂದರ್ಭ ಬಳಸಿಕೊಂಡು ಗಡಿಯೊಳಗೆ ನುಸುಳುವ ಉಗ್ರಗಾಮಿಗಳ ಯತ್ನಗಳನ್ನೂ ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಈ ಕಾರ್ಯಾಚರಣೆಯಲ್ಲಿ 5,000 ಮೋರ್ಟಾರ್ ಶೆಲ್‍ಗಳು, 35 ಸಾವಿರ ಬುಲೆಟ್‍ಗಳು ಸಿಡಿದ್ದಿದ್ದು, ಪಾಕಿಸ್ತಾನದ ಸೇನಾ ನೆಲೆಗಳು ಮತ್ತು ಬಂಕರ್‍ಗಳು ಧ್ವಂಸಗೊಂಡಿವೆ.

ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ (ಐಬಿ) ಮತ್ತು ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಬಳಿ ಸತತ ಅಪ್ರಚೋದಿತ ದಾಳಿಗಳ ಮೂಲಕ ಭಾರೀ ಶಸ್ತ್ರಸಜ್ಜಿತ ಭಯೋತ್ಪಾದಕರನ್ನು ದೇಶದೊಳಗೆ ನುಸುಳಿಸಲು ಪಾಕಿಸ್ತಾನದ ಯತ್ನಕ್ಕೆ ಬಿಎಸ್‍ಎಫ್ ಯೋಧರು ತಕ್ಕ ತಿರುಗೇಟು ನೀಡಿದ್ದು, ವೈರಿ ಪಾಳೆಯದಲ್ಲಿ ಅಪಾರ-ಸಾವು ನೋವು ಸಂಭವಿಸಿದೆ ಎಂದು ಹಿರಿಯ ಸೇನಾಧಿಕಾರಿಗಳು ತಿಳಿಸಿದ್ದಾರೆ.  ಈ ಕಾರ್ಯಾಚರಣೆಗೆ ಭಾರತೀಯ ಸೇನೆ ಬಳಸಿದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳ ವಿವರಗಳನ್ನು ನೀಡಲಾಗಿದೆ. 3,000 ದೂರಗಾಮಿ ಮೋರ್ಟಾರ್ ತೋಪುಗಳನ್ನು ಬಳಸಲಾಗಿದೆ. ಇದು 6 ಕಿ.ಮೀ. ವ್ಯಾಪ್ತಿಯಲ್ಲಿರುವ ಗುರಿಗಳನ್ನು ನಿಖರವಾಗಿ ಧ್ವಂಸ ಮಾಡಿದೆ. ಅದೇ ರೀತಿ ಸುಮಾರು 2,000 ಲಘು ಅಂತರದ ಮೋರ್ಟಾರ್ ಶೆಲ್‍ಗಳಿಂದ ಶತ್ರುಗಳ ಮೇಲೆ ದಾಳಿ ನಡೆಸಲಾಗಿದೆ. ಅಲ್ಲದೇ ಎಂಎಂಜಿ, ಎಲ್‍ಎಂಜಿ ಮತ್ತು ರೈಫಲ್‍ಗಳಿಂದ 5,000ಕ್ಕೂ ಹೆಚ್ಚು ಬುಲ್‍ಗಳನ್ನು ಫೈರ್ ಮಾಡಲಾಗಿದೆ. ಪಾಕ್ ಸೇನಾ ನೆಲೆಗಳು, ಬಂಕರ್‍ಗಳು ಮತ್ತು ಭಯೋತ್ಪಾದರನ್ನು ಗುರಿಯಾಗಿಟ್ಟುಕೊಂಡು ಈ ದಾಳಿ ನಡೆಸಲಾಗಿದೆ ಎಂದು ಬಿಎಸ್‍ಎಫ್ ಅಧಿಕಾರಿ ಅರುಣ್‍ಕುಮಾರ್ ಹೇಳಿದ್ದಾರೆ. ಇದೇ ಅವಧಿಯಲ್ಲಿ ಪಾಕಿಸ್ತಾನದ ದಾಳಿ ಮತ್ತು ಗುಂಡಿನ ಚಕಮಕಿಯಿಂದ ಭಾರತದ ನಾಲ್ವರು ಯೋಧರು ಮತ್ತು ಆರು ಗ್ರಾಮಸ್ಥರು ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ.

ಮತ್ತೆ ಕದನ ವಿರಾಮ ಉಲ್ಲಂಘನೆ :

ಈ ಮಧ್ಯೆ, ಕಾಶ್ಮೀರದ ಸಾಂಬಾ ಸೆಕ್ಟರ್ ಭಾರತೀಯ ಸೇನಾ ನೆಲೆ ಮತ್ತು ಗಡಿ ಗ್ರಾಮಗಳನ್ನು ಗುರಿಯಾಗಿಟ್ಟುಕೊಂಡು ನಿನ್ನೆ ರಾತ್ರಿಯಿಂದ ಪಾಕಿಸ್ತಾನ ಮುಂದುವರಿಸಿರುವ ಗುಂಡಿನ ದಾಳಿಯಲ್ಲಿ ಓರ್ವ ನಾಗರಿಕ ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ.  ರಾಮ್‍ಗಢ್, ಅರ್ನಿಯಾ ಮತ್ತು ನೌಶೇರಾ ವಲಯಗಳಲ್ಲೂ ಪಾಕಿಸ್ತಾನ ಮೋರ್ಟಾರ್ ದಾಳಿ ಮುಂದುವರಿಸಿದ್ದು, ಕೆಲವು ಗ್ರಾಮಸ್ಥರು ಗಾಯಗೊಂಡಿದ್ದಾರೆ.  ಸರ್ಜಿಕಲ್ ಸ್ಟ್ರೈಕ್ ನಂತರ ಪಾಕಿಸ್ತಾನದಿಂದ ಈವರೆಗೆ 60ಕ್ಕೂ ಹೆಚ್ಚು ಕದನ ವಿರಾಮಗಳ ಉಲ್ಲಂಘನೆಯಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin