ಟಿಪ್ಪರ್‍ಗೆ ವಿದ್ಯುತ್ ಸ್ಪರ್ಶಿಸಿ ಚಾಲಕ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

elecrtic--wire-death--man

ಕೋಲಾರ, ನ.2- ಟಿಪ್ಪರ್‍ಗೆ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ವಿಜಯಪುರ ಮೂಲದ ಟಿಪ್ಪರ್ ಚಾಲಕ ಶಿವಣ್ಣ (22) ಮೃತ ದುರ್ದೈವಿ.ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಲಗ್ಗೇನಹಳ್ಳಿ ಗ್ರಾಮದ ಬಳಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಈ ವೇಳೆ ಟಿಪ್ಪರ್‍ನಲ್ಲಿ ಜಲ್ಲಿ ಕಲ್ಲು ತಂದ ಶಿವಣ್ಣ ಅದನ್ನು ಅನ್‍ಲೋಡ್ ಮಾಡುತ್ತಿದ್ದಾಗ ಟಿಪ್ಪರ್‍ಗೆ ವಿದ್ಯುತ್ ತಂತಿ ಸ್ಪರ್ಶಿಸಿ ಟಿಪ್ಪರ್ ಹೊತ್ತಿ ಉರಿದಿದೆ.ಈ ವೇಳೆ ಇದರಲ್ಲಿದ್ದ ಚಾಲಕ ಸಹ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಕಾಮಸಮುದ್ರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

 

► Follow us on –  Facebook / Twitter  / Google+

Facebook Comments

Sri Raghav

Admin