ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ನ.8ರಂದು ಮತದಾನ : ಹಿಲರಿ ಹಿಂದಿಕ್ಕಿದ ಟ್ರಂಪ್ ಬಿಸುಸಿನ ಪ್ರಚಾರ

ಈ ಸುದ್ದಿಯನ್ನು ಶೇರ್ ಮಾಡಿ

hilari-tramp

ಓರ್ಲಾಂಡೋ, ನ.2-ಅಮೆರಿಕ ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟಿರುವ ಡೆಮೊಕ್ರಾಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಮತ್ತು ರಿಪಬ್ಲಿಕನ್ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ಪರಸ್ಪರ ಆರೋಪ-ಪ್ರತ್ಯಾರೋಪಗಳ ನಡುವೆ ಲಕ್ಷಾಂತರ ಡಾಲರ್‍ಗಳನ್ನು ವೆಚ್ಚ ಮಾಡಿ ಬಿರುಸಿನ ಜಹೀರಾತು ಪ್ರಚಾರಾಂದೋಲನಗಳನ್ನು ಆರಂಭಿಸಿದ್ದಾರೆ. ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ನ.8ರಂದು ಮತದಾನ ನಡೆಯಲಿದ್ದು, ಚುನಾವಣಾ ಕಾವು ಈಗಿನಿಂದಲೇ ಏರತೊಡಗಿದೆ. ಹಿಲರಿ ಮತ್ತು ಟ್ರಂಪ್ ಈಗಾಗಲೇ ಚುನಾವಣಾ ರ್ಯಾಲಿಗಳ ಮೂಲಕ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಮತದಾರರನ್ನು ಆಕರ್ಷಿಸಲು ದುಬಾರಿಯಾದ ವಿದ್ಯುನ್ಮಾನ ಜಹೀರಾತು ತಂತ್ರಗಳನ್ನು ಅನುಸರಿಲಾಗುತ್ತಿದೆ. ಇದೇ ವೇಳೆ, ಅಮೆರಿಕನ್ ಪ್ರಜಪ್ರಭುತ್ವದ ವಿಶಿಷ್ಟತೆಯಾದ ಆರಂಭಿಕ ಮತದಾನವು ಜನಪ್ರಿಯತೆ ಪಡೆಯುತ್ತಿದೆ. ಈಗಾಗಲೇ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಡೆಮೊಕ್ರಾಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ ಎಂದು ಹೇಳಲಾಗಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin