ಮಾರ್ಚ್ 9 ರಿಂದ ಮಾರ್ಚ್ 27ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

PUC-Exam

ಬೆಂಗಳೂರು ಅ.03 : ಪದವಿ ಪೂರ್ವ ಶಿಕ್ಷಣ ಇಲಾಖೆ 2017ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ವೇಳಾ ಪಟ್ಟಿಯನ್ನು ಗುರುವಾರ ಪ್ರಕಟಿಸಿದ್ದು, ಮಾರ್ಚ್ 9 ರಿಂದ ಮಾರ್ಚ್ 27ರವರೆಗೆ ಪರೀಕ್ಷೆಗಳು ನಡೆಯಲಿವೆ. ಪ್ರಕಟಿತ ವೇಳಾಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ನವೆಂಬರ್ 30ರೊಳಗೆ ಕೇಂದ್ರ ಕಚೇರಿಗೆ ತಲುಪಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ತನ್ನ ವೆಬ್ ಸೈಟ್ ನಲ್ಲಿ ತಿಳಿಸಲಾಗಿದೆ.

ವೇಳಾಪಟ್ಟಿ : 
09.03.17- ಜೀವಶಾಸ್ತ್ರ/ ಇತಿಹಾಸ
10. 03.17- ಗಣಕ ವಿಜ್ಞಾನ/ಎಲೆಕ್ಟ್ರಾನಿಕ್ಸ್
11. 03.17- ಕರ್ನಾಟಕ ಸಂಗೀತ/ ಹಿಂದೂಸ್ತಾನಿ ಸಂಗೀತ
13. 03.17- ಸಮಾಜಶಾಸ್ತ್ರ/ ಲೆಕ್ಕಶಾಸ್ತ್ರ
14. 03.17- ಗಣಿತ
15. 03.17- ಶಿಕ್ಷಣ/ ತರ್ಕಶಾಸ್ತ್ರ
16. 03.17- ಅರ್ಥಶಾಸ್ತ್ರ/ ಭೂಗರ್ಭಶಾಸ್ತ್ರ
17. 03. 17- ಭೌತಶಾಸ್ತ್ರ/ ಮನಃಶಾಸ್ತ್ರ
18. 03.17- ಸಂಸ್ಕೃತ/ ಮರಾಠಿ/ ಉರ್ದು/ ಫ್ರೆಂಚ್
20.03.17- ರಸಾಯನಶಾಸ್ತ್ರ/ ಬಿಸಿನೆಸ್ ಸ್ಟಡೀಸ್
21.03.17- ರಾಜ್ಯಶಾಸ್ತ್ರ/ ಮೂಲಗಣಿತ
22.03.17- ಹಿಂದಿ/ ತೆಲುಗು
23.03.17- ಕನ್ನಡ/ ತಮಿಳು/ ಮಲಯಾಳಂ/ ಅರೇಬಿಕ್
24. 03.17- ಐಚ್ಛಿಕ ಕನ್ನಡ/ ಗೃಹ ವಿಜ್ಞಾನ
25. 03.17- ಭೂಗೋಳಶಾಸ್ತ್ರ/ ಸಂಖ್ಯಾಶಾಸ್ತ್ರ
27. 03..17- ಇಂಗ್ಲೀಷ್

ಸಮಯ: ಬೆಳಿಗ್ಗೆ 9:30–12:45

► Follow us on –  Facebook / Twitter  / Google+

Facebook Comments

Sri Raghav

Admin