ಎನ್‍ಡಿಟಿವಿ ಇಂಡಿಯಾಗೆ ನಿರ್ಬಂಧ ನಿರ್ಧಾರಕ್ಕೆ ವ್ಯಾಪಕ ಟೀಕೆ

ಈ ಸುದ್ದಿಯನ್ನು ಶೇರ್ ಮಾಡಿ

NDTV-India

ನವದೆಹಲಿ, ನ.4- ಪಠಾಣ್‍ಕೋಟ್ ವಾಯುನೆಲೆ ಮೇಲೆ ನಡೆದ ಉಗ್ರರ ದಾಳಿ ಸುದ್ದಿ ಪ್ರಸಾರ ಮಾಡುವಾಗ ಸೇನಾ ನೆಲೆಯ ಕೆಲವು ಸೂಕ್ಷ್ಮ ಮಾಹಿತಿಯನ್ನು ಬಿತ್ತರಿಸಿದ ಕಾರಣಕ್ಕಾಗಿ ಹಿಂದಿ ವಾರ್ತಾ ವಾಹಿನಿ ಎನ್‍ಡಿಟಿವಿ ಇಂಡಿಯಾಗೆ ಪ್ರಸಾರದ ಮೇಲೆ ಒಂದು ದಿನದ ನಿರ್ಬಂಧ ಹೇರಲು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಶಿಫಾರಸು ಮಾಡಿರುವ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಇದು ಪತ್ರಿಕಾ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಭಾರತ ಸಂಪಾದಕರ ಕೂಟ (ಎಡಿಟರ್ ಗಿಲ್ಡ್ ಆಫ್ ಇಂಡಿಯಾ) ಟೀಕಿಸಿದೆ. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಂತರ್ ಸಚಿವಾಲಯ ಸಮಿತಿ ಗುರುವಾರ ಮಾಡಿರುವ ಶಿಫಾರಸನ್ನು ಖಂಡಿಸುವುದಾಗಿ ಹೇಳಿರುವ ಕೂಟವು, ಈ ಶಿಫಾರಸನ್ನು ತಕ್ಷಣ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದೆ.

ಈ ಶಿಫಾರಸಿಗೆ ಖಂಡನೆ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದು ತುರ್ತು ಪರಿಸ್ಥಿತಿಯ ಸನ್ನಿವೇಶವನ್ನು ಪ್ರದರ್ಶಿಸುತ್ತದೆ. ಕೂಡಲೇ ಶಿಫಾರಸನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಎಐಸಿಸಿ ಉಪಾಧ್ಯಕ್ಷ ರಾಹುಲ್‍ಗಾಂಧಿ, ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ತಿ ಓಮರ್ ಅಬ್ದುಲ್ಲಾ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಮತ್ತು ಗಣ್ಯರು ಸಹ ಈ ಕ್ರಮವನ್ನು ಖಂಡಿಸಿದ್ದಾರೆ. ಎನ್‍ಡಿಟಿವಿ ಇಂಡಿಯಾ ಹಿಂದಿ ಸುದ್ದಿ ವಾಹಿನಿ ಮೇಲೆ ನ.9ರಂದು ಪ್ರಸಾರ ನಿರ್ಬಂಧ ವಿಧಿಸಲಾಗಿದ್ದು, ಈ ಕ್ರಮವನ್ನು ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳ ಸಂಘಟನೆಗಳು ಖಂಡಿಸಿವೆ.

► Follow us on –  Facebook / Twitter  / Google+

Facebook Comments

Sri Raghav

Admin