ಕೇಂದ್ರದ ವಿರುದ್ಧ ಘೋಷಣೆ : ರಸ್ತೆ ತಡೆ

ಈ ಸುದ್ದಿಯನ್ನು ಶೇರ್ ಮಾಡಿ

nanjanagudu-farmers--protes

ನಂಜನಗೂಡು, ನ .4- ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ಆರ್.ಧ್ರುವನಾರಾಯಣ್ ಹಾಗೂ ಸಿ.ಎಂ.ಪುತ್ರ ಡಾ.ಯತೀಂದ್ರ ಕಾಂಗ್ರೆಸಿನ ನೂರಾರು ಕಾರ್ಯಕರ್ತರ ಜೊತೆಗೂಡಿ ಮೈಸೂರು-ನಂಜನಗೂಡು ಮುಖ್ಯರಸ್ತೆಯ 212ರ ಚತುಷ್ಪದ ರಸ್ತೆಯನ್ನು ತಡೆದು ಘೋಷಣೆಗಳನ್ನು ಕೂಗಿ ಪ್ರತಿಭಟನೆ ಮಾಡಿದರು. ಸೈನಿಕ ವಿರೋಧಿ ಕೇಂದ್ರ ಸರ್ಕಾರ ಕಾಂಗ್ರೆಸ್ ಪಕ್ಷದ ರಾಹುಲ್‍ಗಾಂಧಿಯವರನ್ನು ಬಂಧನ ಮಾಡಲು ಕುಮ್ಮಕ್ಕು ನೀಡಿದೆ ಹಾಗಾಗಿ ರಾಜ್ಯಾದ್ಯಂತ ಮೋದಿ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಸಂಸದ ಆರ್.ಧ್ರುವನಾರಾಯಣ್ ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಜನಪರ ಯೋಜನೆಗಳನ್ನು ಜಾರಿಗೆ ತಂದು ರೈತರಿಗೆ ಬೇಕಾಗಿರುವ ಹಲವಾರು ಸೌಲಭ್ಯಗಳನ್ನು ತಲುಪಿಸುತ್ತಿದ್ದೇವೆ ಕೇಂದ್ರ ಸರ್ಕಾರದಿಂದ ತಾರತಮ್ಯ ನಡೆಸಿ ಕಾಂಗ್ರೇಸ್ ಪಕ್ಷದ ರಾಹುಲ್ ಗಾಂಧಿಯನ್ನು ಬಂಧಿಸಲು ಕುಮ್ಮಕ್ಕು ನೀಡಿ ಮುಂದಾಗಿರುವುದು ಆ ಪಕ್ಷದ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕಾಂಗ್ರೆಸಿನ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯ್‍ಕುಮಾರ್ ತಿಳಿಸಿದರು. ಪ್ರತಿಭಟನೆಯಲ್ಲಿ ತಾ.ಪಂ ಉಪಾಧ್ಯಕ್ಷ ಗೋವಿಂದರಾಜು, ಜಿ.ಪಂ ಸದಸ್ಯೆ ಲತಾಸಿದ್ದಶೆಟ್ಟಿ, ನಗರಸಭಾ ಅಧ್ಯಕ್ಷೆ ಪುಷ್ವಲತಾ, ತಾ.ಪಂ,ಸದಸ್ಯ ಪದ್ಮನಾಭ, ಮುಖಂಡರಾದ ಅಕ್ಬರ್, ಇಂದನಬಾಬು, ಚಾಮರಾಜು, ಹದಿನಾರುಗುರುಪಾದಸ್ವಾಮಿ, ಕೆ,ಬಿ,ಸ್ವಾಮಿ, ಪ್ರದೀಪ್ ಕುಮಾರ್, ಎನ್.ಇಂದ್ರ, ಯುವ ಕಾಂಗ್ರೇಸ್ ಅಧ್ಯಕ್ಷ ಅಭಿನಂದನ್ ಪಟೇಲ್ ಸೇರಿದಂತೆ ಹಲವಾರು ಪ್ರಮುಖರು ಪಾಲ್ಗೊಂಡಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin