ಮಕ್ಕಳನ್ನು ಅಪಹರಿಸಿ ಶ್ರೀಮಂತರಿಗೆ ಮಾರಾಟ ಮಾಡುತ್ತಿದ್ದ ಜಾಲದಲ್ಲಿ ಪೊಲೀಸರೂ ಶಾಮೀಲು..?

ಈ ಸುದ್ದಿಯನ್ನು ಶೇರ್ ಮಾಡಿ

Childresn

ಮೈಸೂರು,ನ.4-ನಂಜನಗೂಡು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಅನಾಥ ಮಕ್ಕಳನ್ನು ಅಪಹರಿಸಿ ಶ್ರೀಮಂತವರ್ಗದವರಿಗೆ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಪತ್ತೆಹಚ್ಚಿರುವ ಪೊಲೀಸರು ವೈದ್ಯೆ ಸೇರಿದಂತೆ 6 ಮಂದಿಯನ್ನು ಬಂಧಿಸಿದ್ದು ಈ ಪ್ರಕರಣದಲ್ಲಿ ಪೊಲೀಸರು ಶಾಮೀಲಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣ ಸಾಂಸ್ಕøತಿಕ ನಗರಿ ಮೈಸೂರು ಜನತೆಯನ್ನು ಬೆಚ್ಚಿಬೀಳಿಸಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ 18ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಪ್ರಕರಣ ಸಂಬಂಧ ಮೈಸೂರಿನ ಮಂಡಿಮೊಹಲ್ಲಾದಲ್ಲಿರುವ ಖಾಸಗಿ ನರ್ಸಿಂಗ್‍ಹೋಮ್‍ನ ವೈದ್ಯೆ ಡಾ.ಉಷಾ, ಮಹೇಶ್, ವೆಂಕಟೇಶ್, ರೇಖಾ, ಮೋಹನ್ ಸೇರಿ ಆರು ಮಂದಿಯನ್ನು ಬಂಧಿಸಲಾಗಿದೆ.

ಈ ಪ್ರಕರಣದಲ್ಲಿ ಪೊಲೀಸರು ಶಾಮೀಲಾಗಿರುವ ಆರೋಪದ ಹಿನ್ನೆಲೆಯಲ್ಲಿ ಅಡಿಷನಲ್ ಎಸ್ಪಿ ಕಲಾಕೃಷ್ಣಮೂರ್ತಿಯವರು ಇಂದು ನಂಜನಗೂಡಿಗೆ ತೆರಳಿ ತನಿಖೆ ಕೈಗೊಂಡಿದ್ದಾರೆ. ನಂಜನಗೂಡಿನಲ್ಲಿ ಇತ್ತೀಚೆಗೆ ನಾಪತ್ತೆಯಾಗಿದ್ದ ಮಗುವೊಂದರ ತಾಯಿ ಪಾರ್ವತಿ ಎಂಬುವರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಕೆಲ ದಿನಗಳ ನಂತರ ನನಗೆ ಪೊಲೀಸರು ದೂರು ವಾಪಸ್ ತೆಗೆದುಕೊಳ್ಳಲು ಒತ್ತಾಯಿಸುತ್ತಿದ್ದರಲ್ಲದೆ ನಿನ್ನ ಮಗು ಸೇಫ್ ಆಗಿದೆ. ಅವರು ಒಂದು ಲಕ್ಷ ಹಣ ಕೊಡುತ್ತಾರೆ. ದೂರು ವಾಪಸ್ ತಗೋ ಎಂದು ನಂಜನಗೂಡು ಗ್ರಾಮಾಂತರ ಪೊಲೀಸರು ನನಗೆ ಒತ್ತಡ ಹಾಕುತ್ತಿದ್ದಾರೆಂದು ಮಾಧ್ಯಮದವರ ಮುಂದೆ ನೊಂದ ತಾಯಿ ಬಾಯ್ಬಿಟ್ಟಿದ್ದಾರೆ.

ಈವರೆಗೂ ನಂಜನಗೂಡಿನಲ್ಲಿ ಹಾಗೂ ಸುತ್ತಮತ್ತಲಿನಲ್ಲಿ ಎಷ್ಟು ಮಕ್ಕಳು ನಾಪತ್ತೆಯಾಗಿದ್ದಾರೆ, ಎಷ್ಟು ದೂರುಗಳು ದಾಖಲಾಗಿವೆ. ಈ ಬಗ್ಗೆ ಪೊಲೀಸರು ಕೈಗೊಂಡಿರುವ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಪೊಲೀಸ್ ವರಿಷ್ಠಾಧಿಕಾರಿ ರವಿ ಚನ್ನಣ್ಣನವರ್ ಅವರಿಗೆ ವರದಿ ಸಲ್ಲಿಸುವುದಾಗಿ ಕಲಾಕೃಷ್ಣಮೂರ್ತಿ ಈ ಸಂಜೆಗೆ ತಿಳಿಸಿದ್ದಾರೆ. ಮಕ್ಕಳ ಅಪಹರಣದಲ್ಲಿ ಪೊಲೀಸರು ಶಾಮೀಲಾಗಿರುವ ಬಗ್ಗೆ ಗಂಭೀರ ಆರೋಪ ಕೇಳಿಬಂದಿರುವುದರಿಂದ ಈ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. ನಿರ್ಗತಿಕರು, ಭಿಕ್ಷುಕರ ಮಕ್ಕಳನ್ನೇ ಟಾರ್ಗೆಟ್ ಮಾಡಿ ಆ ಕುಟುಂಬದವರೊಂದಿಗೆ ಮಾತುಕತೆ ನಡೆಸಿ ಹಣ ನೀಡುವ ಆಮಿಷವೊಡ್ಡುತ್ತಿದ್ದರು. ಅವರು ಒಪ್ಪದಿದ್ದಾಗ ಮಕ್ಕಳು ಭಿಕ್ಷೆಗೆ ತೆರಳುವ ವೇಳೆ ಅವರಿಗೆ ತಿಂಡಿ ಮತ್ತು ಹಣದ ಅಮಿಷ ನೀಡಿ ಅವರನ್ನು ಕಾರಿನಲ್ಲಿ ಕರೆದೊಯ್ದು ಅಪಹರಿಸುತ್ತಿದ್ದುದಾಗಿ ಬಂಧಿತರು ತನಿಖೆ ವೇಳೆ ಬಾಯ್ಬಿಟ್ಟಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin