ಮೇಲ್ಮನೆಗೆ ಲಿಂಗಪ್ಪ, ನಂಜುಂಡಿ, ಕೊಂಡಜ್ಜಿ

ಈ ಸುದ್ದಿಯನ್ನು ಶೇರ್ ಮಾಡಿ

KPNanjundi

ಬೆಂಗಳೂರು, ನ.4- ಕಾಂಗ್ರೆಸ್‍ನ ಹಿರಿಯ ಮುಖಂಡರಾದ ಸಿ.ಎಂ.ಲಿಂಗಪ್ಪ, ಮೋಹನ್ ಕೊಂಡಜ್ಜಿ ಹಾಗೂ ವಿಶ್ವಕರ್ಮ ಸಮುದಾಯದ ಮುಖಂಡ ಕೆ.ಪಿ.ನಂಜುಂಡಿ ಅವರನ್ನು ಮೇಲ್ಮನೆಗೆ ನಾಮನಿರ್ದೇಶನ ಮಾಡುವ ಪ್ರಸ್ತಾಪಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎಂದು ತಿಳಿದು ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೇರಿದಂತೆ ಅನೇಕ ಗಣ್ಯರು ಪರಿಷತ್ ನಾಮನಿರ್ದೇಶನಕ್ಕೆ ಸೂಚಿಸಿದ್ದ ಸಿ.ಎಂ.ಲಿಂಗಪ್ಪ, ಮೋಹನ್‍ಕೊಂಡಜ್ಜಿ ಹೆಸರನ್ನು ಹೈಕಮಾಂಡ್ ಒಪ್ಪಿದ್ದು, ಈ ಸಂಬಂಧ ಅಧಿಕೃತ ಮುದ್ರೆ ಬೀಳುವ ಬಾಕಿ ಇದ್ದು, ಸಂಜೆ ವೇಳೆಗೆ ಈ ಬಗ್ಗೆ ಹೈಕಮಾಂಡ್‍ನಿಂದ ಸ್ಪಷ್ಟ ಸೂಚನೆ ಹೊರ ಬರಲಿದೆ. ನಂತರ ಪಟ್ಟಿಯನ್ನು ರಾಜ್ಯಪಾಲರಿಗೆ ಮುಖ್ಯಮಂತ್ರಿಗಳು ಕಳುಹಿಸಿಕೊಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಹಲವು ವರ್ಷಗಳಿಂದ ಸ್ಥಾನಮಾನಗಳ ನಿರೀಕ್ಷೆಯಲ್ಲಿದ್ದ ಕೆ.ಪಿ.ನಂಜುಂಡಿ ಅವರಿಗೆ ಈ ಬಾರಿ ಹೈಕಮಾಂಡ್ ಕೃಪಾಶಿರ್ವಾದದಿಂದ ಪರಿಷತ್ ನಾಮನಿರ್ದೇಶನ ಒಲಿದರೆ, ಮೋಹನ್‍ಕೊಂಡಜ್ಜಿ ಪರವಾಗಿ ಖುದ್ದು ಮುಖ್ಯಮಂತ್ರಿಗಳು ಪಟ್ಟು ಹಿಡಿದಿದ್ದರು. ಇನ್ನು ಡಿ.ಕೆ.ಶಿವಕುಮಾರ್ ಹಾಗೂ ದಿಗ್ವಿಜ್ ಅವರ ಲಾಬಿಯ ಪರವಾಗಿ ಸಿ.ಎಂ.ಲಿಂಗಪ್ಪ ಅವರಿಗೆ ಅವಕಾಶ ಲಭಿಸಲಿದೆ ಎಂದು ಹೇಳಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಇಂದು ಅಥವಾ ನಾಳೆ ಈ ಮೂವರ ಹೆಸರು ಮೇಲ್ಮನೆ ನಾಮನಿರ್ದೇಶನಕ್ಕೆ ಅಧಿಕೃತವಾಗಲಿದೆ.

► Follow us on –  Facebook / Twitter  / Google+

Facebook Comments

Sri Raghav

Admin