ವಿದ್ಯುತ್ ಉತ್ಪಾದನೆಗೆ ಬಳಸುವ ನೀರಿನ ಮರುಬಳಕೆ ತಂತ್ರಜ್ಞಾನ ಜಾರಿಗೆ ಸರ್ಕಾರ ಚಿಂತನೆ

ಈ ಸುದ್ದಿಯನ್ನು ಶೇರ್ ಮಾಡಿ

Linngimakki-dam

ಬೆಂಗಳೂರು, ನ.4-ಲಿಂಗನಮಕ್ಕಿ ಜಲಾಶಯ ಸೇರಿದಂತೆ ರಾಜ್ಯದ ವಿವಿಧ ಜಲವಿದ್ಯುದಾಗಾರ ಗಳಿಂದ ವಿದ್ಯುತ್ ಉತ್ಪಾದಿಸಲು ಬಳಸುವ ನೀರನ್ನು ಸಂಗ್ರಹಿಸಿ ಮರುಬಳಕೆ ಮಾಡುವ ತಂತ್ರಜ್ಞಾನವನ್ನು ರಾಜ್ಯದಲ್ಲಿ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ.  ಅದೇ ರೀತಿ ರಾಯಚೂರು ಉಷ್ಣ ವಿದ್ಯುತ್ ಸ್ಥಾವರ ಸೇರಿದಂತೆ ಉಷ್ಣ ವಿದ್ಯುತ್ ಸ್ಥಾವರಗಳಿಂದ ಉತ್ಪಾದನೆಯಾಗುತ್ತಿರುವ ಹಾರುಬೂದಿಯನ್ನು ಬಳಸಿ ಸಿಮೆಂಟ್ ಬ್ಲಾಕ್‍ಗಳನ್ನು ಉತ್ಪಾದಿಸಲು ಚಿಂತನೆ ನಡೆಸುತ್ತಿದೆ. ಈ ತಂತ್ರಜ್ಞಾನದ ಕುರಿತು ಅಧ್ಯಯನ ನಡೆಸಲು ಆಸ್ಟ್ರಿಯಾಕ್ಕೆ ತೆರಳಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್ ನೇತೃತ್ವದ ನಿಯೋಗ ಹಲವು ಮಹತ್ವದ ಯೋಜನೆಗಳನ್ನು ಗಮನಿಸಿ ಇದು ಕಾರ್ಯ ಸಾಧ್ಯ ಎಂಬುದನ್ನು ಕಂಡುಕೊಂಡಿದೆ.

ಲಿಂಗನಮಕ್ಕಿ ಜಲಾಶಯದಲ್ಲಿ ವಿದ್ಯುತ್ ಬಳಕೆಗಾಗಿ ಉಪಯೋಗವಾಗುತ್ತಿರುವ ನೀರು ಆನಂತರ ಹರಿದು ಸಮುದ್ರ ಸೇರುತ್ತಿದೆ. ಆದರೆ ರಬ್ಬರ್ ನಿರ್ಮಿತ ಸಣ್ಣ ಸಣ್ಣ ಆಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ಆ ನೀರನ್ನು ಸಮುದ್ರ ಸೇರದಂತೆ ತಡೆ ಹಿಡಿಯಬಹುದು. ಹೀಗೆ ನೀರು ತಡೆಹಿಡಿಯುವುದು ಮತ್ತು ಅದನ್ನು ಜಲಾಶಯಕ್ಕೆ ಪಂಪ್ ಮಾಡಿ ಯಥಾ ಪ್ರಕಾರ ವಿದ್ಯುತ್ ಉತ್ಪಾದನೆಗೆ ಬಳಸಬಹುದು ಎಂಬುದನ್ನು ನಿಯೋಗ ತಿಳಿದುಕೊಂಡಿದೆ.  ಆಸ್ಟ್ರಿಯಾ ಸಾಲ್ಟ್ ಬರ್ಗ್‍ನಲ್ಲಿರುವ ಫವಂಡ್ ಸ್ಟೋರೇಜ್ ಆಧಾರಿತ ವಿದ್ಯುತ್ ಘಟಕಕ್ಕೆ ರಾಜ್ಯ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಕರ್ನಾಟಕ ಪವರ್ ಕಾಪೆರ್Çರೇಷನ್ ಅಧಿಕಾರಿಗಳ ತಂಡ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದೆ.

ಸದ್ಯಕ್ಕೆ ರಾಯಚೂರು ಉಷ್ಣ ವಿದ್ಯುತ್ ಸ್ಥಾವರ ಸೇರಿದಂತೆ ಹಲವು ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಉತ್ಪಾದನೆಯಾಗುತ್ತಿರುವ ಹಾರುಬೂದಿಯನ್ನು ಖಾಸಗಿ ಸಿಮೆಂಟ್ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತಿದ್ದು, ಅದನ್ನು ಬಳಸಿ ಕಂಪನಿಯವರು ಸಿಮೆಂಟ್ ಬ್ಲಾಕ್‍ಗಳನ್ನು ಮಾಡುತ್ತಿದ್ದಾರೆ. ಆದರೆ ಹಾರುಬೂದಿಯನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಲಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದಲೇ ಸಿಮೆಂಟ್ ಬ್ಲಾಕ್ ಉತ್ಪಾದನೆಯ ಘಟಕಗಳನ್ನು ಸ್ಥಾಪಿಸಬಹುದು. ಗಣನೀಯ ಪ್ರಮಾಣದ ಆದಾಯ ಪಡೆಯಬಹುದು ಎಂಬುದು ಡಿಕೆಶಿ ಲೆಕ್ಕಾಚಾರ ಎಂದು ಮೂಲಗಳು ತಿಳಿಸಿವೆ.

► Follow us on –  Facebook / Twitter  / Google+

Facebook Comments

Sri Raghav

Admin