ಸಿದ್ದನಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ಬದುಕಿಸಿ : ವಾಟಾಳ್ ನಾಗರಾಜ್

ಈ ಸುದ್ದಿಯನ್ನು ಶೇರ್ ಮಾಡಿ

Sidda-01

ಬೆಂಗಳೂರು, ನ.4-ಆನೆ ಸಿದ್ದನ ಆರೋಗ್ಯವನ್ನು ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆರೋಪಿಸಿದರು. ಮುಖ್ಯಮಂತ್ರಿ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಚನಬೆಲೆ ಅರಣ್ಯ ಪ್ರದೇಶದಲ್ಲಿ ಮುಂದಿನ ಕಾಲಿಗೆ ಏಟು ಬಿದ್ದು ಅಸ್ವಸ್ಥಗೊಂಡಿರುವ ಕಾಡಾನೆ ಸಿದ್ದನಿಗೆ ತಜ್ಞ ವೈದ್ಯರಿಂದ ಚಿಕಿತ್ಸೆ ಕೊಡಿಸಬೇಕೆಂದು ಆಗ್ರಹಿಸಿದರು. ಅರಣ್ಯ ಇಲಾಖೆ ಈ ಬಗ್ಗೆ ಮೊದಲೇ ಎಚ್ಚೆತ್ತುಕೊಂಡಿದ್ದರೆ ಸಿದ್ದ ಇಷ್ಟೊತ್ತಿಗೆ ಎದ್ದು ಓಡಾಡುವ ಹಂತಕ್ಕೆ ತಲುಪುತ್ತಿತ್ತು. ಆದರೆ ಸರ್ಕಾರದ ನಿರ್ಲಕ್ಷ್ಯದಿಂದ ಇನ್ನೂ ಆನೆ ಚೇತರಿಸಿಕೊಂಡಿಲ್ಲ ಎಂದು ಹೇಳಿದರು.

ಅದರ ಆತ್ಮಬಲದಿಂದಲೇ ಇದುವರೆಗೂ ಆನೆ ಬದುಕಿದೆ. ಇನ್ನಾದರೂ ಸರ್ಕಾರ ಉತ್ತಮ ವೈದ್ಯರಿಂದ ಚಿಕಿತ್ಸೆ ಕೊಡಿಸಿ ಆನೆಯನ್ನು ಆರೋಗ್ಯವಂತನನ್ನಾಗಿ ಮಾಡಬೇಕಿದೆ ಎಂದು ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin