1 ವರ್ಷದಿಂದ ಅವಳಿ ಬಾಲಕಿಯರ ಮೇಲೆ ತಂದೆ-ಮಗನಿಂದ ನಿರಂತರ ರೇಪ್, ಸಾಥ್ ಕೊಟ್ಟ ಮಲತಾಯ

ಈ ಸುದ್ದಿಯನ್ನು ಶೇರ್ ಮಾಡಿ

Rape-005

ಹೈದರಾಬಾದ್, ನ.4- ಹೈದರಾಬಾದ್‍ನಲ್ಲಿ ಇಬ್ಬರು ಅಪ್ರಾಪ್ತ ಅವಳಿ ಬಾಲಕಿಯರ ಮೇಲೆ ಕಳೆದ ಒಂದು ವರ್ಷದಿಂದ ನಿರಂತರವಾಗಿ ಅತ್ಯಾಚಾರ ನಡೆಸುತ್ತಿದ್ದ ಹೇಯ ಕೃತ್ಯದ ಆರೋಪದ ಮೇಲೆ ತಂದೆ ಮತ್ತು ಮಗನನ್ನು ಪೊಲೀಸರು ಬಂಧಿಸಿದ್ಧಾರೆ. ಆಘಾತಕಾರಿ ಸಂಗತಿ ಎಂದರೆ ಈ ಬಾಲಕಿಯರ ಮಲತಾಯಿಯೇ ಇದಕ್ಕೆ ಕುಮ್ಮಕ್ಕು ನೀಡಿದ್ದಾಳೆ.  ಮುತ್ತಿನನಗರಿ ಹೈದರಾಬಾದ್‍ನ ಮಲ್ಲರ್‍ದೇವಪಲ್ಲಿಯಲ್ಲಿ ಈ ಕೃತ್ಯ ನಡೆದಿದೆ. ಅವಳಿ ಬಾಲಕಿಯರ ತಾಯಿಯ ನೆರವಿನಿಂದ ಅತ್ಯಾಚಾರ ಎಸಗುತ್ತಿದ್ದ 40 ವರ್ಷದ ಜಾಫರ್ ಮತ್ತು ಆತನ ಅಪ್ರಾಪ್ತ ಮಗನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನೆರೆಮನೆಯಲ್ಲಿದ್ದ ತಂದೆ-ಮಗ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿ ಹಿಂಸೆ ನೀಡುತ್ತಿದ್ದ ಬಗ್ಗೆ ಅವಳಿ ಬಾಲಕಿಯರಲ್ಲಿ ಐದನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯು ಸ್ಥಳೀಯ ಶಿಕ್ಷಕಿಗೆ ವಿಷಯ ತಿಳಿಸಿದಳು. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್‍ಜಿಓ ಈ ಕೃತ್ಯದ ಬಗ್ಗೆ ಉಪ ಪೊಲೀಸ್ ಆಯುಕ್ತರಾದ ಪಿ.ವಿ.ಪದ್ಮಜಾ ಅವರಿಗೆ ಮಾಹಿತಿ ನೀಡಿದರು.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಇಡೀ ವೃತ್ತಾಂತ ಬೆಳಕಿಗೆ ಬಂದಿತು.  ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಅವಳಿ ಬಾಲಕಿಯರು ಮೂಲತ: ನೇಪಾಳದವರು. ತಂದೆ ಮತ್ತು ಮಲತಾಯಿಯೊಂದಿಗೆ ಹೈದರಾಬಾದ್‍ನಲ್ಲಿ ನೆಲೆಸಿದ್ದರು. ಖಾಸಗಿ ಸಂಸ್ಥೆಯಲ್ಲಿ ತಂದೆ ಕೆಲಸ ಮಾಡುತ್ತಿದ್ದಾನೆ. ಹಣಕ್ಕಾಗಿ ಮಲತಾಯಿ ನೆರೆ ಮನೆಯಲ್ಲಿದ್ದ ಅಪ್ಪ-ಮಗನಿಗೆ ಈ ಕೃತ್ಯ ಎಸಗಲು ಕುಮ್ಮಕ್ಕು ನೀಡಿದ್ದು ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin