9 ವರ್ಷಗಳ ನಂತರ ಒಂದಾದ ‘ಕರಣ್- ಅರ್ಜುನ್’ ಜೋಡಿ

ಈ ಸುದ್ದಿಯನ್ನು ಶೇರ್ ಮಾಡಿ

Tubelight-01

ಮುಂಬೈ.ನ.04 : ಬಾಲಿವುಡ್ ನ ಬಹು ನಿರೀಕ್ಷಿತ ಚಿತ್ರ ಟ್ಯೂಬ್ ಲೈಟ್ ನಲ್ಲಿ 9 ವರ್ಷಗಳ ನಂತರ ತೆರೆಯ ಮೇಲೆ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಶಾರುಖ್ ಅಭಿನಯದ ಓಂ ಶಾಂತಿ ಓಂ ಚಿತ್ರದ ಹಾಡೊಂದಕ್ಕೆ ಸಲ್ಮಾನ್ ಹೆಜ್ಜೆ ಹಾಕಿದ್ದರು. ಮತ್ತೆ ಈಗ್ಯಾಕ್ 9 ವರ್ಷಗಳ ನಂತರ ಈ ಜೋಡಿ ಒಂದಾಗಿ ನಟಿಸುತ್ತಿದ್ದಾರೆ. ಬಾಲಿವುಡ್ ನ ಬಹು ನಿರೀಕ್ಷಿತ ಚಿತ್ರ ಟ್ಯೂಬ್ ಲೈಟ್ ಈ ಇಬ್ಬರು ಖಾನ್ ಗಳು ಖಾನ್ ಗಳು ಒಂದಾಗುತ್ತಿದ್ದು ಮತ್ತಷ್ಟು ನಿರೀಕ್ಷೆಗಳನ್ನು ಹೆಚ್ಚಿಸಿದೆ.

ಈ ವರೆಗೆ ಇವರಿಬ್ಬರು ಒಟ್ಟು 9 ಚಿತ್ರಗಳಲ್ಲಿ ಒಂದಾಗಿ ಕಾಣಿಸಿಕೊಂಡಿದ್ದವು 1995 ರಲ್ಲಿ ಬಿಡುಗಡೆಯಾದ ಬ್ಲಾಕ್ ಬಸ್ಟರ್ ಚಿತ್ರ ಕರಣ್ ಅರ್ಜುನ್ ಭಾರಿ ಸದ್ದು ಮಾಡಿತ್ತು. ನಂತರ ಬೇರೆ ಬೇರೆಯಾಗಿದ್ದ ಜೋಡಿ ವರ್ಷಗಳ ಹಿಂದಷ್ಟೇ ಒಂದಾಗಿತ್ತು. ಇಬ್ಬರ ನಡುವಿನ ವೈಮನಸ್ಸು ಕರಾಗಿದ್ದರೂ ಇಬ್ಬರೂ ಜೊತೆಯಾಗಿ ಅಭಿನಯಿಸಿಲ್ಲ. ಸದ್ಯ ಇಬ್ಬರನ್ನ ಒಟ್ಟಿಗೆ ಕಾಣ್ಬೇಕು ಅಂತಿರೋ ಅಭಿಮಾನಿಗಳ ಬಯಕೆ ಸದ್ಯದಲ್ಲೇ ಈಡೇರಲಿದೆ. ಸಲ್ಮಾನ್ ಅಭಿನಯದ ಟ್ಯೂಬ್ ಲೈಟ್ ಚಿತ್ರದಲ್ಲಿ ಶಾರುಖ್ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ ಹಾಗೆ ಈ ಇಬ್ಬರೂ ಖಾನ್ ಗಳನ್ನು ಒಟ್ಟುಗೂಡಿಸಿದ ಕೀರ್ತಿ, ಟ್ಯೂಬ್ ಲೈಟ್ ಡೈರೆಕ್ಟರ್ ಕಬೀರ್ ಖಾನ್ಗೆ ಸಲ್ಲುತ್ತದೆ.

► Follow us on –  Facebook / Twitter  / Google+

Facebook Comments

Sri Raghav

Admin