ಬ್ರೇಕಿಂಗ್ : ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Petrol

ನವದೆಹಲಿ .05 : ವಾರಾಂತ್ಯದ ಖುಷಿಯಲ್ಲಿದ್ದ ಸಾರ್ವಜನಿಕರಿಗೆ ಕಹಿ ಸುದ್ದಿ,  ಡೀಸೆಲ್ ಬೆಲೆಯಲ್ಲಿ ಮತ್ತೇ ಏರಿಕೆಯಾಗಿದೆ.  ಪೆಟ್ರೋಲ್ ದರದಲ್ಲಿ 89 ಪೈಸೆ, ಡೀಸೆಲ್ ಬೆಲೆಯನ್ನು 86 ಪೈಸೆಯಷ್ಟು ಏರಿಕೆಯಾಗಿದೆ. ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಕಳೆದ ಅಕ್ಟೋಬರ್ 15 ರಂದು ಪ್ರತಿ ಲೀಟರ್ ಪೆಟ್ರೋಲ್ ಗೆ 1.34 ರೂ., ಡೀಸೆಲ್ ಗೆ 2.37 ರೂ. ಏರಿಕೆ ಮಾಡಲಾಗಿತ್ತು. ಇದಕ್ಕೂ ಮೊದಲು ಅಕ್ಟೋಬರ್‌ 5 ರಂದು ಪೆಟ್ರೋಲ್‌   ಲೀಟರ್‌ಗೆ 14 ಪೈಸೆ ಹಾಗೂ ಡೀಸೆಲ್‌ ದರ  10 ಪೈಸೆ ಏರಿಕೆಯಾಗಿತ್ತು.

ಕಳೆದ ಎರಡು ತಿಂಗಳಲ್ಲಿ ಇದು 5ನೇ ಬಾರಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ. ಜಾಗತಿಕ ಮಟ್ಟದಲ್ಲಿ ತೈಲ ಕಂಪನಿಗಳು ಬೆಲೆ ಏರಿಕೆಯಿಂದ ಸತತವಾಗಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲೂ ಏರಿಕೆಯಾಗುತ್ತಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿನ ವ್ಯತ್ಯಾಸ ಮತ್ತು ಭಾರತ-ಅಮೆರಿಕ ರೂಪಾಯಿ ವಿನಿಮಯ ಪ್ರಮಾಣದಲ್ಲಿ ಹೆಚ್ಚಳ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮೇಲೆ ಪರಿಣಾಮ ಬೀರಿದ್ದು ಅದರಂತೆ ಗ್ರಾಹಕರಿಗೆ ತೈಲ ದರದಲ್ಲಿ ವ್ಯತ್ಯಾಸ ಮಾಡಲಾಗಿದೆ.

► Follow us on –  Facebook / Twitter  / Google+

 

Facebook Comments

Sri Raghav

Admin