ಸಾಕು ಪ್ರಾಣಿಗಳನ್ನು ತಿಂದು ತೇಗುತ್ತಿದ್ದ ಚಿರತೆ ಕೊನೆಗೂ ಬೋನಿಗೆ ಬಿತ್ತು

ಈ ಸುದ್ದಿಯನ್ನು ಶೇರ್ ಮಾಡಿ

cheetha

ರಾಮನಗರ, ನ.5-ಕಳೆದ ಎರಡು ತಿಂಗಳಿನಿಂದ ಸಾಕು ಪ್ರಾಣಿಗಳನ್ನು ತಿಂದು ಪರಾರಿಯಾಗುತ್ತಿದ್ದ ಚಿರತೆ ಕೊನೆಗೂ ಸಿಕ್ಕಿ ಬಿದ್ದಿದೆ. ರಾಮನಗರ ತಾಲೂಕಿನ ಕರಡಿದೊಡ್ಡಿ ಗ್ರಾಮದ ಬಳಿ ಇರುವ ಲೋಕೇಶ್ ಎಂಬುವರ ಮನೆ ಬಳಿ ಇಟ್ಟಿದ್ದ ಬೋನಿಗೆ ಐದು ವರ್ಷ ಪ್ರಾಯದ ಗಂಡು ಚಿರತೆ ಬೋನಿಗೆ ಸಿಲುಕಿಕೊಂಡಿದೆ. ಕಳೆದ ರಾತ್ರಿ ಗ್ರಾಮಕ್ಕೆ ನುಗ್ಗಿದ ಚಿರತೆ ನಾಯಿಯನ್ನು ಬೇಟೆಯಾಡಲು ಹೋಗಿ ಕೊನೆಗೆ ಬೋನಿನಲ್ಲಿದ್ದ ಕೋಳಿ ಹಿಡಿಯಲು ಹೋಗಿ ಸೆರೆ ಸಿಕ್ಕಿದೆ. ಇಂದು ಬೆಳಗ್ಗೆ ಚಿರತೆ ಸೆರೆ ಸಿಕ್ಕಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ವನ್ಯ ಪ್ರಾಣಿಯನ್ನು ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದರು.

Facebook Comments

Sri Raghav

Admin