ರ‍್ಯಾಗಿಂಗ್‍ಗೆ ಬೇಸತ್ತು ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Ragging-Collage-Student

ಬೀದರ್,ನ.6- ರ‍್ಯಾಗಿಂಗ್‍ನಿಂದ ಬೇಸತ್ತು ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಗರದ ವಿದ್ಯಾನಗರದಲ್ಲಿ ಇಂದು ನಡೆದಿದೆ.
ಸಚಿನ್‍ಕುಮಾರ್(20) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ನಗರದ ಗುರುನಾನಕ್ ಇಂಜಿನಿಯರಿಂಗ್ ಕಾಲೇಜಿನಲ್ಲಿ 3ನೇ ಸೆಮಿಸ್ಟರ್ ಓದುತ್ತಿದ್ದ ಸಚಿನ್ ಇಂದು ಬೆಳಗ್ಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಹಿರಿಯ ವಿದ್ಯಾರ್ಥಿಗಳು ಸಚಿನ್‍ಗೆ ರ‍್ಯಾಗಿಂಗ್ ಮಾಡುತ್ತಿದ್ದರು. ಈ ಕಿರುಕುಳದಿಂದ ನೊಂದ ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಸೋದರಮಾವ ಸಂಗಮೇಶ್ ಆರೋಪಿಸಿದ್ದಾರೆ.

ಸಚಿನ್ ಸಾಯುವ ಮುನ್ನ ಡೆತ್‍ನೋಟ್ ಬರೆದಿದ್ದು, ಅದರಲ್ಲಿ ತನಗೆ ಕಿರುಕುಳ ನೀಡುತ್ತಿದ್ದ ವಿದ್ಯಾರ್ಥಿಗಳ ಬಗ್ಗೆ ತಿಳಿಸಿದ್ದಾನೆ. ಕಿರುಕುಳ ನೀಡಿದ ಬಗ್ಗೆ ಮೊಬೈಲ್‍ನಲ್ಲಿಯೂ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಸಚಿನ್ ಮೊಬೈಲ್‍ನ್ನು ಪೊಲೀಸರಿಗೆ ನೀಡಲಾಗಿದೆ ಎಂದು ಸಂಗಮೇಶ್ ಹೇಳಿದ್ದಾರೆ.  ಗಾಂಧಿಗಂಜ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin