ಶ್ರೀನಾಥ್ ಅರವಿಂದ್ ವೇಗದ ದಾಳಿಗೆ ದಿಢೀರ್ ಕುಸಿದ ವಿದರ್ಭ

ಈ ಸುದ್ದಿಯನ್ನು ಶೇರ್ ಮಾಡಿ

Srinath-Arvin-d-00

ವಡೋದರ, ನ.6- ಅಸ್ಸಾಮ್ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶನ ದಿಂದ ಕರ್ನಾಟಕಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದ ಶ್ರೀನಾಥ್ ಅರವಿಂದ್ ಅವರು ವಿದರ್ಭ ವಿರುದ್ಧವು ಅದೇ ಬೌಲಿಂಗ್ ಗತಿಯನ್ನು ಮುಂದುವರೆಸಿ ವಿದರ್ಭ ತಂಡದ ರನ್ ದಾಹಕ್ಕೆ ಬ್ರೇಕ್ ಹಾಕಿದ್ದಾರೆ. ನಿನ್ನೆ ದಿನದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 10 ರನ್ ಗಳಿಸಿದ್ದ ವಿದರ್ಭ ಇಂದು ಆರಂಭದಿಂದಲೂ ಎಚ್ಚರಿಕೆಯ ಆಟಕ್ಕೆ ಮುಂದಾದರು.  ಆರಂಭಿಕ ಜೊತೆಯಾಟಕ್ಕೆ ಎಸ್.ಆರ್.ರಾಮಸ್ವಾಮಿ ಹಾಗೂ ನಾಯಕ ಫೈಜಲ್ ಅವರು 35 ರನ್‍ಗಳ ಕಾಣಿಕೆ ನೀಡಿದ್ದಾಗ ಸ್ಟುವರ್ಟ್ ಬಿನ್ನಿ ವಿದರ್ಭಕ್ಕೆ ಆಘಾತ ನೀಡಿದರು. 15 ರನ್‍ಗಳನ್ನು ಗಳಿಸಿದ್ದ ರಾಮಸ್ವಾಮಿ ಯನ್ನು ಕ್ಲೀನ್ ಬೋಲ್ಡ್ ಮಾಡುವ ಮೂಲಕ ವಿದರ್ಭದ ಆರಂಭಿಕ ಜೋಡಿಯನ್ನು ಬೇರ್ಪಡಿಸಿದರು.

ಅರವಿಂದ್ ಮಿಂಚು:
ರಾಮಸ್ವಾಮಿ ಔಟಾಗುತ್ತಿದ್ದಂತೆ ವಿದರ್ಭದ ನಾಯಕ ಫೈಜಲ್ (31 ರನ್, 7 ಬೌಂಡರಿ), ಗಣೇಶ್ ಸತೀಶ್ (5 ರನ್) ಹಾಗೂ ಎ.ಶ್ಯಾನ್‍ವಾರೆ ಶ್ರೀನಾಥ್ ಅರವಿಂದ್‍ರ ಬೌಲಿಂಗ್ ಜಾದೂಗೆ ತಲೆದೂಗಿ ಪೆವಿಲಿಯನ್‍ನತ್ತ ಹೆಜ್ಜೆ ಹಾಕಿದರು. ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ವಿದರ್ಭ 45 ಓವರ್‍ಗಳಲ್ಲಿ 4 ವಿಕೆಟ್‍ಗಳನ್ನು ಕಳೆದುಕೊಂಡು 108 ರನ್ ಗಳಿಸಿದ್ದು ಜಾನ್‍ಜಿದ್( 27 ರನ್), ಶರ್ಮಾ(18 ರನ್) ಕ್ರೀಸ್‍ನಲ್ಲಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin