ಖೋಟಾ ನೋಟು ತಡೆಗೆ 2,000 ರೂ. ಮುಖಬೆಲೆ ನೋಟು ಮುದ್ರಣ..?

ಈ ಸುದ್ದಿಯನ್ನು ಶೇರ್ ಮಾಡಿ

Notes-021

ಮುಂಬೈನ.07 : ಟ್ವಿಟ್ಟರ್ ನಲ್ಲಿ  2000 ಮುಖಬೆಲೆಯ ನೋಟುಗಳ ಹರಿದಾಡುತ್ತಿದ್ದು, ಈ ನೋಟುಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭ್ಯವಾಗದಿದ್ದರೂ ಈ ನೋಟುಗಳನ್ನು   ನಕಲಿ ನೋಟುಗಳ  ಚಲಾವಣೆ ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ 2000 ಮುಖಬೆಲೆಯ ನೋಟುಗಳನ್ನು ಮುದ್ರಿಸುತ್ತಿದೆ ಎನ್ನಲಾಗುತ್ತಿದೆ. ಪ್ರತಿದಿನ ಜನ ತಮ್ಮ ವ್ಯವಹಾರಕ್ಕಾಗಿ 500 ಹಾಗೂ 1000 ರೂ. ಮುಖಬೆಲೆಯ ನೋಟು ಬಳಕೆ ಮಾಡುತ್ತಿರುವ ಕಾರಣ ಅವುಗಳೊಂದಿಗೆ ನಕಲಿ ನೋಟುಗಳೂ ಹರಿದಾಡುತ್ತಿವೆ. ಈ ಬಗ್ಗೆ ಮಾಹಿತಿ ಲಭ್ಯವಾಗಿರುವ ಕಾರಣ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರುಕಟ್ಟೆಗೆ 2000 ರೂ. ಮುಖಬೆಲೆಯ ನೋಟು ಚಲಾವಣೆಗೆ ತರಲು ಮುಂದಾಗಿದ್ದು, 2000 ರೂ. ಮುಖಬೆಲೆಯ ನೋಟು ಈಗಾಗಲೇ ಮುದ್ರಣ ಮಾಡಿದೆ.

ಮೈಸೂರು ಮುದ್ರಣಾಲಯದಲ್ಲಿ 2000 ರೂ. ಮುಖಬೆಲೆಯ ನೋಟುಗಳು ಮುದ್ರಣವಾಗಿದ್ದು, ಚಾಲನೆಗೆ ಬರೋದಷ್ಟೇ ಬಾಕಿ ಇದೆ. ಪ್ರಸ್ತುತ 500 ರೂ. ಹಾಗೂ 1,000 ರೂ. ಮುಖಬೆಲೆಯ ಶೇ. 86 ರಷ್ಟು ನೋಟುಗಳು ಚಲಾವಣೆಯಾಗುತ್ತಿವೆ. ಶೀಘ್ರದಲ್ಲಿ 2000 ರೂ. ಮುಖ ಬೆಲೆಯ ನೋಟುಗಳು ಚಲಾವಣೆಗೆ ಬಂದರೆ ನೋಟುಗಳ ಮುದ್ರಣ ವೆಚ್ಚ ಕಡಿಮೆಯಾಗಲಿದ್ದು, ನಕಲಿ ನೋಟುಗಳ ಹಾವಳಿಗೆ ಕಡಿವಾಣ ಹಾಕಬಹುದಾಗಿದೆ ಎನ್ನಲಾಗಿದೆ.ಸದ್ಯ 2000 ರೂ. ಮುಖಬೆಲೆಯ ನೋಟು ಹೀಗಿದೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಶೀಘ್ರದಲ್ಲೇ ಗ್ರಾಹಕರ ಕೈ ಸೇರಲಿದೆ ಎನ್ನಲಾಗಿದೆ. ಆದರೆ ಈ 2000 ಮುಖಬೆಲೆಯ ನೋಟಿನ ಬಗ್ಗೆ ಆರ್ ಬಿ ಐ ನಿಂದ ಸ್ಪಷ್ಟವಾದ ಮಾಹಿತಿಗಳು ಹೊರಬಂದಿಲ್ಲ. ಟ್ವಿಟ್ಟರ್ ನಲ್ಲಿ ನೋಟಿನ ಫೋಟೋಗಳು ಹರಿದಾಡುತ್ತಿವೆಯಷ್ಟೇ.

► Follow us on –  Facebook / Twitter  / Google+

Facebook Comments

Sri Raghav

Admin