ವಿವಾದಾದತ್ಮಕ ಟ್ವಿಟ್ ಮಾಡಿದ ದಿನೇಶ್ ಅಮಿನ್ ಮಟ್ಟು ವಿರುದ್ಧ ದೂರು

ಈ ಸುದ್ದಿಯನ್ನು ಶೇರ್ ಮಾಡಿ

Amin-Mattu

ಬೆಂಗಳೂರು,ನ.7- ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಾದಾತ್ಮಕ ಟ್ವಿಟ್ ಮಾಡಿರುವ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ವಿರುದ್ಧ ಬಿಜೆಪಿ ಯುವ ಮೋರ್ಚ ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದೆ.  ರಾಷ್ಟ್ರೀಯ ಸುದ್ದಿ ವಾಹಿನಿಯೊಂದರ ವಿರುದ್ದ ಕೇಂದ್ರ ಸರ್ಕಾರ ಕೈಗೊಂಡ ಕ್ರಮಕ್ಕೆ ಸಂಬಂಧಿಸಿದಂತೆ ಫೇಸ್‍ಬುಕ್‍ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸಂದರ್ಭದಲ್ಲಿ ಕಮೆಂಟ್‍ವೊಂದನ್ನು ಹಾಕಿರುವ ದಿನೇಶ್ ಅಮಿನ್‍ಮಟ್ಟು ಅವರು ಇಂದಿರಾಗಾಂಧಿಗೆ ಕೊನೆಗೆ ಏನಾಯಿತು ಗೊತ್ತಲ್ವ. ಅದೇ ನಿಮ್ಮ ಮೋದಿಯವರಿಗೆ ಆಗಬೇಕೆಂಬುದು ನಿಮ್ಮ ಆಸೆಯೇ ಎಂದು ಹೇಳಿದ್ದಾರೆ. ರಾಷ್ಟ್ರೀಯ ಸುದ್ದಿ ವಾಹಿನಿಯ ಒಂದು ದಿನ ನಿಷೇಧಿಸಿದ್ದ ಕೇಂದ್ರ ಸರ್ಕಾರದ ನಿರ್ಧಾರ ಕುರಿತು ಅಮಿನ್‍ಮಟ್ಟು ಅವರ ಫೇಸ್‍ಬುಕ್‍ನಲ್ಲಿ ಹಾಕಿದ್ದ ಪೋಸ್ಟ್ ತೀವ್ರ ವಿವಾದಕ್ಕೀಡಾಗಿದೆ.

ಪಠಾಣ್‍ಕೋಟ್‍ನಲ್ಲಿ ಉಗ್ರಗಾಮಿಗಳ ವಿರುದ್ದ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿದ್ದ ನೇರ ಪ್ರಸಾರವನ್ನು ಪ್ರಚಾರ ಮಾಡಿದ್ದರಿಂದ ರಾಷ್ಟ್ರೀಯ ಭದ್ರತೆಗೆ ಧಕ್ಕೆಯುಂಟಾಗಿದೆ ಎಂದು ನವೆಂಬರ್ 9ರಂದು ಎನ್‍ಡಿ ಟಿವಿ ಚಾನೆಲ್ ಪ್ರಚಾರ ಸ್ಥಗಿತಗೊಳಿಸಲು ಆದೇಶ ನೀಡಿತ್ತು. ಇದರ ಬಗ್ಗೆ ದೇಶಾದ್ಯಂತ ಪರ, ವಿರೋಧ ಚರ್ಚೆ ನಡೆದಿದ್ದವು.  ದಿನೇಶ್ ಅಮೀನ್‍ಮಟ್ಟು ಅವರು ಫೇಸ್‍ಬುಕ್‍ನಲ್ಲಿ ಹಾಕಿದ್ದ ಪೋಸ್ಟ್ ನ ಸ್ಕ್ರೀನ್ ಶಾಟ್ ತೆಗೆದುಕೊಂಡಿರುವ ಬಿಜೆಪಿ ಈ ಸಂಬಂಧ ಅವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ದೂರು ನೀಡಿದೆ. ಅಲ್ಲದೆ ಅರೆಸ್ಟ್ ದಿನೇಶ್ ಎಂದು ಹ್ಯಾಷ್ ಟ್ಯಾಗ್ ಕ್ಯಾಂಪೇನ್ ಶುರುವಿಟ್ಟುಕೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin