ಗಡಿಯಲ್ಲಿ ಮುಂದುವರಿದ ಎನ್‍ಕೌಂಟರ್ : ಮತ್ತೊಬ್ಬ ಬಿಎಸ್‍ಎಫ್ ಯೋಧ ಹುತಾತ್ಮ

ಈ ಸುದ್ದಿಯನ್ನು ಶೇರ್ ಮಾಡಿ

Firing-in-Border

ಜಮ್ಮು, ನ.8- ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ಬಳಿ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ ಅಪ್ರಚೋದಿತ ದಾಳಿ ಮುಂದುವರೆಸಿದೆ. ಪಾಕಿಸ್ತಾನಿ ಪಡೆಗಳು ನಿನ್ನೆ ರಾತ್ರಿಯಿಂದ ರಜೌರಿ ಜಿಲ್ಲೆಯ ನೌಶೇರಾದಲ್ಲಿ ಗುಂಡು ಮತ್ತ ತೋಪುಗಳಿಂದ ದಾಳಿ ನಡೆಸುತ್ತಿದ್ದು, ಭಾರತೀಯ ಯೋಧರು ಪ್ರತ್ಯುತ್ತರ ನೀಡಿದ್ದಾರೆ. ನೌಶೇರಾ ಸೆಕ್ಟರ್‍ನ ಗಡಿ ನಿಯಂತ್ರಣ ರೇಖೆ ಬಳಿ ಸೇನಾ ಮುಂಚೂಣಿ ನೆಲೆಗಳ ಮೇಲೆ ಪಾಕಿಸ್ತಾನಿ ರೇಂಜರ್‍ಗಳು ಸಣ್ಣ ಶಸ್ತ್ರಾಸ್ತ್ರಗಳು, ಸ್ವಯಂಚಾಲಿತ ಬಂದೂಕುಗಳು ಮತ್ತು 82 ಎಂಎಂ ಮಾರ್ಟರ್‍ಗಳಿಂದ ದಾಳಿಗಳನ್ನು ನಡೆಸಿದರು ಎಂದು ಬಿಎಸ್‍ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತೀಯ ಯೋಧರು ಮತ್ತು ಪಾಕ್ ಸೇನೆ ನಡುವೆ ಕೆಲಕಾಲ ಗುಂಡಿನ ಚಕಮಕಿ ನಡೆಯಿತು. ಎನ್‍ಕೌಂಟರ್‍ನಲ್ಲಿ ಸಾವು-ನೋವಿನ ವರದಿಯಾಗಿಲ್ಲ. ಕಾಶ್ಮೀರ ಕಣಿವೆಯ ಗಡಿ ನಿಯಂತ್ರಣ ರೇಖೆ ಬಳಿ ಕಳೆದ ಕೆಲವು ದಿನಗಳಿಂದ ಪಾಕ್ ಯೋಧರು ಭಾರೀ ಪ್ರಮಾಣದಲ್ಲಿ ಅಪ್ರಚೋದಿತ ದಾಳಿ ಮುಂದುವರಿಸಿದ್ದು, ಭಾರತೀಯ ಯೋಧರು ದಿಟ್ಟ ಉತ್ತರ ನೀಡುತ್ತಿದ್ದಾರೆ. ಭಾರತೀಯ ಕಮ್ಯಾಂಡೋಗಳ ಸರ್ಜಿಕಲ್ ಸ್ಟ್ರೈಕ್ ನಂತರ ಪಾಕಿಸ್ತಾನ ಈವರೆಗೆ 100ಕ್ಕಿಂತಲೂ ಹೆಚ್ಚು ಬಾರಿ ಕದನವಿರಾಮ ಉಲ್ಲಂಘಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin