ಬಿಬಿಎಂಪಿ ಪೌರ ಕಾರ್ಮಿಕರಿಗೆ 4 ಸಾವಿರ ಉಚಿತ ಫ್ಲ್ಯಾಟ್‍

ಈ ಸುದ್ದಿಯನ್ನು ಶೇರ್ ಮಾಡಿ

NNMP-0003

ಬೆಂಗಳೂರು, ನ.8- ಪೌರಕಾರ್ಮಿಕರಿಗೆ ಬಿಡಿಎ ವತಿಯಿಂದ 4 ಸಾವಿರ ಫ್ಲ್ಯಾಟ್‍ಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಘೋಷಿಸಿದರು. ಬಿಬಿಎಂಪಿ ಕೇಂದ್ರ ಕಚೇರಿಯ ಗಾಜಿನ ಮನೆಯಲ್ಲಿ ಹಮ್ಮಿಕೊಂಡಿದ್ದ ಪೌರಕಾರ್ಮಿಕರಿಗೆ ನೀಡುವ ಬಿಸಿಯೂಟ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸೂರ್ಯ ಹುಟ್ಟುವ ಮುನ್ನ ಆರೋಗ್ಯವನ್ನೂ ಲೆಕ್ಕಿಸದೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ನಿಮ್ಮ ಕಾರ್ಯವನ್ನು ಗೌರವಿಸುತ್ತೇನೆ. ನಿಮ್ಮ ಕೆಲಸದ ಬಗ್ಗೆ ನನಗೆ ವಿಶೇಷ ಅಭಿಮಾನವಿದೆ ಎಂದು ತಿಳಿಸಿದರು. ಗುತ್ತಿಗೆ ಪೌರಕಾರ್ಮಿಕರನ್ನು ಖಾಯಂಗೊಳಿಸುವ ಸೂಕ್ತ ನಿರ್ಧಾರವನ್ನು ನಮ್ಮ ಸರ್ಕಾರ ಕೈಗೊಂಡಿದೆ.

ನಾನು ಮುಖ್ಯಮಂತ್ರಿಯಾದ ಕೂಡಲೇ ಕೇವಲ 7 ಸಾವಿರ ಇದ್ದ ವೇತನವನ್ನು 12 ಸಾವಿರಕ್ಕೆ ಹೆಚ್ಚಳ ಮಾಡಿ ದ್ದೇನೆ. ಹೆಚ್ಚುವರಿಯಾಗಿರುವ ವೇತನವನ್ನು ಹಾಳು ಮಾಡದೆ ನಿಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ಉತ್ತಮ ಜೀವನ ರೂಪಿಸಿ. ನಿಮ್ಮ ಕಷ್ಟ ಸುಖಗಳಿಗೆ ನಾನು ನೆರವಾಗು ತ್ತೇನೆ. ನಿಮ್ಮ ಮೇಲೆ ನನಗೆ ವಿಶೇಷ ಪ್ರೀತಿ ಇದೆ ಎಂದು ತಿಳಿಸಿದರು. ಪೌರಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ನಗರದಲ್ಲಿ ರುವ 32 ಸಾವಿರ ಪೌರಕಾರ್ಮಿಕರಿಗೆ ಇದೇ ಪ್ರಪ್ರಥಮ ಬಾರಿಗೆ ಬಿಸಿಯೂಟದ ಯೋಜನೆ ಪ್ರಾರಂಭಿಸಿದ್ದೇವೆ. ಇದು ಸದುಪಯೋಗವಾಗಲಿ ಎಂದು ಹೇಳಿದರು.

`ರಾಜ ಆಳಾಗಬಹುದು, ಆಳು ಅರಸನಾಗಬಹುದು’ ಅದು ಪ್ರಜಾಪ್ರಭುತ್ವದ ವೈಶಿಷ್ಟ್ಯ. ಹಾಗಾಗಿ ಇಡೀ ದೇಶದ ಸಂಪತ್ತು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕು. ಈ ದೃಷ್ಟಿಯಿಂದ ನಮ್ಮ ಸರ್ಕಾರ ರಾಜ್ಯ ಯೋಜನಾ ವರದಿಯಲ್ಲಿ ಮೀಸಲಿಟ್ಟಿರುವ 75 ಸಾವಿರ ಕೋಟಿ ರೂ.ಗಳಲ್ಲಿ ಶೇ.24.1ರಷ್ಟು ಹಣವನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟಿದೆ. ಈವರೆಗೆ ಯಾರೂ ಇದನ್ನು ಮಾಡಿರಲಿಲ್ಲ ಎಂದು ತಿಳಿಸಿದರು. ನಿಮ್ಮ ನಾಯಕನಾಗಿರುವ ನಾರಾಯಣ್ ಅವರನ್ನು ಮೈಸೂರು ಮೇಯರ್ ಮಾಡಿದ್ದು ನಾನೇ. ಅವರ ತಂದೆ-ತಾಯಿ ದಸರಾ ವೇಳೆ ಆನೆ, ಕುದುರೆಗಳ ಲದ್ದಿ ತೆಗೆಯುತ್ತಿದ್ದರು. ಅಂತಹವರ ಮಗನನ್ನು ಮೇಯರ್ ಮಾಡಿ ದಸರಾ ಸಂದರ್ಭದಲ್ಲಿ ಕುದುರೆ ಮೇಲೆ ಕೂರಿಸಿ ಮೆರವಣಿಗೆ ಮಾಡಿಸಿದ್ದೇವೆ. ಇದು ಹೆಮ್ಮೆಯ ವಿಷಯ.
ನಿಮ್ಮ ಕೆಲಸದ ಬಗ್ಗೆ ವಿಶೇಷ ಗೌರವವಿದೆ. ನಿಮಗೆ ನ್ಯಾಯಯುತವಾಗಿ ಸಿಗಬೇಕಾಗಿರುವ ಎಲ್ಲಾ ಸೌಕರ್ಯಗಳನ್ನು ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

ಮುಲಾಜಿಲ್ಲದೆ ತೆರವು:

ನಗರದಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರು ವವರು ಎಂಥಹ ಪ್ರಭಾವಿಗಳೇ ಆಗಿದ್ದರೂ ಮುಲಾಜಿಲ್ಲದೆ ತೆರವುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ದೆಹಲಿಯಲ್ಲಿ ವಾಯುಮಾಲಿನ್ಯದಿಂದಾಗಿ ಉಸಿರಾಟಕ್ಕೆ ಕುತ್ತು ಬಂದಿದೆ. ಅಂತಹ ಪರಿಸ್ಥಿತಿ ಬೆಂಗಳೂರಿನಲ್ಲಿ ಬರಬಾರದು. ಹಾಗಾಗಿ ಪಾಲಿಕೆಯ ಎಲ್ಲಾ ಸದಸ್ಯರು ಹಾಗೂ ಪೌರಕಾರ್ಮಿಕರು ನಗರದ ಸ್ವಚ್ಛತೆ ಹಾಗೂ ವಾಯುಮಾಲಿನ್ಯ ನಿಯಂತ್ರಕ್ಕೆ ಕೈ ಜೋಡಿಸಬೇಕೆಂದು ಸಿಎಂ ಮನವಿ ಮಾಡಿದರು. ಒಟ್ಟಾರೆ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ 7300 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ತಿಳಿಸಿದರು.

ಉಕ್ಕಿನ ಸೇತುವೆ ನಿರ್ಮಾಣದ ವಿಷಯದಲ್ಲಿ ಯಾರೂ ರಾಜಕಾರಣ ಮಾಡಬಾರದು ಎಂದು ಸಿದ್ದರಾಮಯ್ಯ ಹೇಳಿದರು. ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರ ಪರಿಷ್ಕøತ ವೇತನವನ್ನು ಕೆಲವರಿಗೆ ಸಾಂಕೇತಿಕವಾಗಿ ವಿತರಿಸಲಾಯಿತು. ಸಚಿವರಾದ ಕೆ.ಜೆ.ಜಾರ್ಜ್, ರೋಷನ್‍ಬೇಗ್, ಮೇಯರ್ ಜಿ.ಪದ್ಮಾವತಿ, ಉಪಮೇಯರ್ ಆನಂದ್, ಆಡಳಿತ ಪಕ್ಷದ ನಾಯಕ ರಿಜ್ವಾನ್, ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಹಾಗೂ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin